ಹರಪನಹಳ್ಳಿ : ಕ್ರೀಡೆ ಮತ್ತು ಇತರ ದೈಹಿಕ ಚಟುವಟಿಕೆಗಳು ಪಠ್ಯೇತರ ಚಟುವಟಿಕೆಗಳ ಪ್ರಮುಖ ಭಾಗವಾಗಿದ್ದು ವಿದ್ಯಾರ್ಥಿಗಳು ಸಕ್ರಿಯರಾಗಿ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ ಎಂದು ಸೊಂಡೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಸವರಾಜ ಹೆಬ್ಬಾಳ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಪಠ್ಯೇತರ ಚಟುವಟಿಕೆಗಳ ಮುಕ್ತಾಯ ಸಮಾರಂಭ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನಕ್ಕೆ ಸನ್ನದ್ಧರಾಗಲು ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು.ವಿದ್ಯಾರ್ಥಿಗಳು ಮಾನವೀಯತೆಬೆಳೆಸಿಕೊಳ್ಳಬೇಕು ಹಾಗೂ ಯಶಸ್ಸಿನಿಂದ ಓದಬೇಕು ಎಂದರು.
ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಹರಾಳು ಬುಳ್ಳಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತಿನಿಂದ ಇರಬೇಕು ಹಾಗೂ ಕಷ್ಟಪಟ್ಟು ಓದಬೇಕು. ಸರಕಾರಿ ಕಾಲೇಜುಗಳು ಯಾವ ಕಾಲೇಜುಗಳಿಗಿಂತಲೂ ಕಡಿಮೆ ಇಲ್ಲ ಎಲ್ಲಾ ವಿಭಾಗಗಳಲ್ಲಿ ಕಾಲೇಜುಗಳು ಸೌಲಭ್ಯಗಳನ್ನು ಹೊಂದಿದ್ದು ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮಗಳನ್ನು ಹೊಂದಿದ್ದು ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಹಾಗೂ ಕೌಶಲ್ಯವನ್ನು ಬೆಳೆಸಿಕೊಂಡು ತಂದೆ ತಾಯಿಗಳಿಗೆ ಕೀರ್ತಿ ತರಬೇಕೆಂದರು.
ಪ್ರಾಂಶುಪಾಲರಾದ ಡಾ.ಕೆ.ಸತೀಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಂತಿಮ ವರ್ಷದ ಪ್ರಾಜೆಕ್ಟ್‌ಗಳನ್ನು ಕೇವಲ ಶೈಕ್ಷಣಿಕ ದಾಖಲೆಯಾಗಿ ನೋಡದೆ, ನಿಮ್ಮ ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವ ಮೆಟ್ಟಿಲಾಗಿ ಪರಿಗಣಿಸಿ. ಇದು ನೈಜ-ಪ್ರಪಂಚದ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡುತ್ತದೆ ಎಂದ ಅವರು ಶಿಕ್ಷಣದ ಜೋತೆ ನಯ ವಿನಯತೆ ಶಿಸ್ತು ಬಹುಮುಖ್ಯವಾಗಿದೆ ಎಂದರು.
ಸಬ್ ಇನ್ಸ್ಪೆಕ್ಟರ್ ಶಂಭುಲಿಂಗಪ್ಪ ಹಿರೇಮಠ್ ಮಾತನಾಡಿ, ವಿದ್ಯಾರ್ಥಿಗಳು ಕಾಂಪಿಟೇಟಿವ್ ಪರಿಕ್ಷೆಗಳಲ್ಲಿ ಸಕ್ಸಸ್ ಆಗಿ ಸರಕಾರಿ ಹುದ್ದೆಗಳನ್ನು ಹಾಗೂ ಇತರೆ ಖಾಸಗಿ ಹುದ್ದೆಗಳನ್ನು ಶಿಸ್ತಿನಿಂದ ಓದಿ ಕಷ್ಟಪಟ್ಟು ಶಿಸ್ತಿನಿಂದ ಹಾಗೂ ಪ್ಲಾನ್ ಸ್ಟಡಿ ಮಾಡಿ ಸಕ್ಸಸ್ ಆಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದೈಹಿಕ ನಿರ್ದೇಶಕ ಡಾ.ಕೊಟ್ರೇಶ,ಸಹಾಯಕ ಪ್ರಾಧ್ಯಾಪಕ ಹುಚ್ಚರಾಯಪ್ಪ, ಉಪನ್ಯಾಸಕ ಡಾ. ಎಂ.ಸುರೇಶ,ಡಾ.ತಿಪ್ಪೇಸ್ವಾಮಿ ಸೇರಿದಂತೆ ಇತರರು ಇದ್ದರು.
Leave a comment