ಕ್ರೀಡೆ

Cricket, football, local sports, and international sporting events.

21 Articles
Homeಕ್ರೀಡೆ

ಹರಪನಹಳ್ಳಿ : ಸಮತ ರೆಸಾರ್ಟ್‍ನಲ್ಲಿ ವಿಚಾರಗೋಷ್ಠಿ

ಹರಪನಹಳ್ಳಿ : ರಾಜಕೀಯ ಪ್ರಜಾಪ್ರಭುತ್ವ ದುರ್ಬಳಕೆ ಆಗುತ್ತಿದೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರ ಜಾತಿ ಮೇಲೆ ನಿಂತಿರುವ ಪ್ರಸ್ತುತ ದಿನಗಳಲ್ಲಿ ಮನುಷ್ಯ ಪ್ರೀತಿಸುವ ಸಮಾಜ ಕಟ್ಟುವ ಅಗತ್ಯವಿದೆ ಎಂದು ಬಂಡಾಯ ಸಾಹಿತಿ...

Homeಕ್ರೀಡೆ

ಸಮತಾ ರೆಸಾರ್ಟ್ ಪ್ರಗತಿಪರ‌‌ ಚಿಂತನೆಗಳ ಕೇಂದ್ರ

ಹರಪನಹಳ್ಳಿ : ಬುದ್ದ, ಬಸವ, ಅಂಬೇಡ್ಕರ್ ಅವರ ಚಿಂತನೆಗಳನ್ನು ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಣ್ಣನವರು ತಮ್ಮ ಜೀವನದಲ್ಲಿ ಮೈಗೂಡಿಸಿ ಕೊಂಡಿದ್ದಾರೆ, ಹರಪನಹಳ್ಳಿ ಸಮತಾ ರೆಸಾರ್ಟ್ ಪ್ರಗತಿಪರ‌ ಚಿಂತನೆಯ ಕೇಂದ್ರ ಎಂದು ಚಿತ್ರದುರ್ಗ ...

renukadevi
Homeಕ್ರೀಡೆ

ಪರಿಸರ ಜಾಗೃತಿಗಾಗಿ ದಾವಣಗೆರೆಯಲ್ಲಿ ಸೈಕಲ್ ಜಾಥಾ

ದಾವಣಗೆರೆ  : ಯುವಜನರು ಮತ್ತು ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಸೈಕಲ್ ಬಳಕೆಯನ್ನು ಹೆಚ್ಚಿಸಬೇಕು ಎಂದು ದಾವಣಗೆರೆ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠಲ್ ಅವರು ಕರೆ ನೀಡಿದ್ದಾರೆ. 'ವಿಶ್ವ ಸೈಕಲ್...

kannada
Homeಕ್ರೀಡೆ

ಹರಪನಹಳ್ಳಿಯಲ್ಲಿ ಗಮನ ಸೆಳೆದ ಬೀಳ್ಕೊಡುಗೆ

ಹರಪನಹಳ್ಳಿ : ಕ್ರೀಡೆ ಮತ್ತು ಇತರ ದೈಹಿಕ ಚಟುವಟಿಕೆಗಳು ಪಠ್ಯೇತರ ಚಟುವಟಿಕೆಗಳ ಪ್ರಮುಖ ಭಾಗವಾಗಿದ್ದು ವಿದ್ಯಾರ್ಥಿಗಳು ಸಕ್ರಿಯರಾಗಿ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ ಎಂದು ಸೊಂಡೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ...

nivrutta
Homeಕಲೆಕ್ರೀಡೆಶಿಕ್ಷಣ

ನೌಕರರ ಹಿತರಕ್ಷಣೆಗೆ ಸಂಘ ಸದಾ ಬದ್ಧ: ಎನ್.ಜಿ. ಮನೋಹರ ಭರವಸೆ

ಹರಪನಹಳ್ಳಿ: "ಸರ್ಕಾರಿ ನೌಕರರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಲು ರಾಜ್ಯ ನೌಕರರ ಸಂಘ ಹಾಗೂ ತಾಲೂಕು ಘಟಕವು ಸದಾ ನಿಮ್ಮ ಬೆನ್ನೆಲುಬಾಗಿ ನಿಲ್ಲಲಿದೆ" ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಎನ್.ಜಿ. ಮನೋಹರ ಅವರು ಭರವಸೆ ನೀಡಿದರು. ಇಲ್ಲಿನ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಭಾನುವಾರ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ವಿವಿಧ ಇಲಾಖೆಗಳ ನಿವೃತ್ತ ನೌಕರರು, ನಿವೃತ್ತ ಶಿಕ್ಷಕರು ಹಾಗೂ ಬಡ್ತಿ ಹೊಂದಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. "ಶಿಕ್ಷಕರು ವೃತ್ತಿಯಿಂದ ನಿವೃತ್ತರಾಗುತ್ತಿದ್ದಾರೆಯೇ ವಿನಃ ಅವರ ಅನುಭವದಿಂದಲ್ಲ. ನಿವೃತ್ತಿಯ ನಂತರವೂ ನಾವು ಮತ್ತು ನಿವೃತ್ತ ನೌಕರರ ಸಂಘ ಸದಾ ನಿಮ್ಮ ಜೊತೆಗಿರುತ್ತೇವೆ. ನಿವೃತ್ತ ಜೀವನದಲ್ಲಿ ಪ್ರತಿಯೊಬ್ಬರೂ ಪ್ರತಿದಿನ ವ್ಯಾಯಾಮ, ಪುಸ್ತಕ ಓದುವುದು, ತೋಟಗಾರಿಕೆ, ಸಂಗೀತ, ಕಲೆ, ಯೋಗ ಅಥವಾ ವಾಕಿಂಗ್ ಮಾಡುವ ಮೂಲಕ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು" ಎಂದು ಮನೋಹರ ಅವರು ಕಿವಿಮಾತು ಹೇಳಿದರು. ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಲತಾ ಟಿ.ಎಚ್.ಎಂ ಮಾತನಾಡಿ, "ಮಹಿಳಾ ನೌಕರರಿಗೆ ಋತುಚಕ್ರದ ರಜೆ ಘೋಷಿಸುವಂತೆ ಸರ್ಕಾರಕ್ಕೆ ನಮ್ಮ ಸಂಘಟನೆಯು ಮೊದಲೇ ಧ್ವನಿಗೂಡಿಸಿ ಒತ್ತಾಯಿಸಿತ್ತು. ಹರಪನಹಳ್ಳಿ ತಾಲೂಕಿನಲ್ಲಿ ಈ ಹಿಂದೆ ನೌಕರರ ಪರವಾಗಿ ಇಂತಹ ಸಕ್ರಿಯ ಕಾರ್ಯಕ್ರಮಗಳು ನಡೆದಿರಲಿಲ್ಲ. ಆದರೆ ಪ್ರಸ್ತುತ ಅಧ್ಯಕ್ಷರಾದ ಮನೋಹರ್ ಅವರು ಹತ್ತಾರು ಜನಪರ ಕಾರ್ಯಕ್ರಮಗಳ ಮೂಲಕ ತಾಲೂಕು ಸಂಘಟನೆಯನ್ನು ಇಡೀ ರಾಜ್ಯಕ್ಕೆ ಮಾದರಿಯಾಗಿಸಿದ್ದಾರೆ. ಸಂಘಟನೆಗಳು ವೃತ್ತಿಯ ಜೊತೆಗೆ ಪ್ರವೃತ್ತಿಯಾಗಬೇಕೇ ಹೊರತು, ಸಂಘಟನೆಯೇ ವೃತ್ತಿಯಾಗಬಾರದು. ನಾವೆಲ್ಲರೂ ಸೇರಿ ತಾಲೂಕಿನ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸೋಣ" ಎಂದರು. ಮಂಜುನಾಥ ಪೂಜಾರ್ ಅವರು ಮಾತನಾಡಿ, "ಶಾಲೆಗಳಲ್ಲಿ ೩೦ ವರ್ಷಗಳಿಗೂ ಹೆಚ್ಚು ಕಾಲ ಸುದೀರ್ಘ ಸೇವೆ ಸಲ್ಲಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವ ಶಿಕ್ಷಕರ ಸಮಯಪಾಲನೆ, ಕರ್ತವ್ಯ ನಿಷ್ಠೆ ಮತ್ತು ಮಕ್ಕಳೊಂದಿಗಿನ ಮಧುರ ಬಾಂಧವ್ಯ ನಿಜಕ್ಕೂ ಶ್ಲಾಘನೀಯ. ಇವರ ನಿವೃತ್ತ ಜೀವನ ಸುಖಕರವಾಗಿರಲಿ" ಎಂದು ಹಾರೈಸಿದರು. ಬಿಇಒ ಕಚೇರಿಯ ಇಸಿಒ ವೀರೇಶ್ ಮಾತನಾಡಿ, ನಿವೃತ್ತ ಹಾಗೂ ಬಡ್ತಿ ಪಡೆದ ಮುಖ್ಯ ಶಿಕ್ಷಕರನ್ನು ಕರೆಸಿ ಗೌರವಿಸುತ್ತಿರುವ ನೌಕರರ ಸಂಘದ ಕಾರ್ಯ ಸ್ತುತ್ಯರ್ಹ ಎಂದರು. ಶಿಕ್ಷಕ ಬಿ. ಆಂಜನೇಯ ಅವರೂ ಸಹ ವೇದಿಕೆಯಲ್ಲಿ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ವೇಳೆ ನಿವೃತ್ತ ಶಿಕ್ಷಕ ಸಲಾಂ ಅವರು "ಪ್ರೀತಿಯ ಗಾಳಿ ಬೀಸುತ್ತಿದೆ..." ಎಂಬ ಗೀತೆಯನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು.  ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಷರೀಪ್ ಮಕರಬ್ಬಿ, ಸಂಘದ ಪ್ರಧಾನ ಕಾರ್ಯದರ್ಶಿ ಸೂರ್ಯನಾಯ್ಕ, ಗೌರವಾಧ್ಯಕ್ಷ ಎನ್‍.ಟಿ.ಸೋಮಪ್ಪ, ಜಿಲ್ಲಾ...

Homeಕ್ರೀಡೆ

ಹೊಸಪೇಟೆ : ಮೇ 30ಕ್ಕೆ ‘ಮಾಹಿತಿ ಹಕ್ಕು ಕಾಯ್ದೆ’ ಕಾರ್ಯಾಗಾರ

ಹೊಸಪೇಟೆ: ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ಶನಿವಾರ (ಮೇ 30) ಬೆಳಿಗ್ಗೆ 9.30ಕ್ಕೆ ಅಧಿಕಾರಿಗಳಿಗಾಗಿ ‘ಮಾಹಿತಿ ಹಕ್ಕು ಕಾಯ್ದೆ’ (ಆರ್‌ಟಿಐ) ಕುರಿತು ಬೃಹತ್ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟಸಿಂಗ್, ಬೆಂಗಳೂರು ಪೀಠದ ರಾಜ್ಯ ಮಾಹಿತಿ ಆಯುಕ್ತ ಕೆ. ಬದ್ರುದ್ದೀನ ಹಾಗೂ ಡಾ. ಹರೀಶಕುಮಾರ ಅವರು ಈ ಮಹತ್ವದ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದು, ಮಾಹಿತಿ ಹಕ್ಕು ಕಾಯ್ದೆಯ ಅನುಷ್ಠಾನ ಮತ್ತು ಸವಾಲುಗಳ ಕುರಿತು ಅಧಿಕಾರಿಗಳೊಂದಿಗೆ ನೇರ ಸಂವಾದ ನಡೆಸಲಿದ್ದಾರೆ.ಜಿಲ್ಲೆಯ ಎಲ್ಲ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.     

ಕ್ರೀಡೆಮನರಂಜನೆಸುದ್ದಿಗಳು

ಕೆಂಪು ಮಣ್ಣಿನ ಕಣದಲ್ಲಿ ಪೈಲ್ವಾನರ ಜಿದ್ದಾಜಿದ್ದಿ

ವಿಜಯನಗರ: ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವಂತೆ, ಹಂಪಿಯ ಹೊಸಮಲಪನಗುಡಿಯ ವಿದ್ಯಾರಣ್ಯ ಪೀಠದ ಮೈದಾನದಲ್ಲಿ ಶನಿವಾರ ಸಾಂಪ್ರದಾಯಿಕ ಮಣ್ಣಿನ ಕುಸ್ತಿ ಪಂದ್ಯಾವಳಿ ಪ್ರೇಕ್ಷಕರ ಮೈನವಿರೇಳಿಸಿತು. ಸುತ್ತಲೂ ಹೂವುಗಳಿಂದ ಅಲಂಕೃತಗೊಂಡಿದ್ದ ಕೆಂಪು ಮಣ್ಣಿನ...

ಕ್ರೀಡೆಸುದ್ದಿಗಳು

ಹಂಪಿ ಉತ್ಸವ ಮಹಿಳಾ ಕುಸ್ತಿ ಪಂದ್ಯಾವಳಿ : ಮಹಿಳಾ ಕಂಠೀರವ ಪ್ರಶಸ್ತಿ ಮುಡಿಗೇರಿಸಿಕೊಂಡ ರಾಧಿಕಾ ವಿಶ್ವನಾಥ ತೊಂಡಿಹಾಳ

ವಿಜಯನಗರ : ಹಂಪಿ ಉತ್ಸವ-2026 ಅಂಗವಾಗಿ ಜರುಗಿದ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ 58 ಕೆ.ಜಿ. ಮೇಲ್ಪಟ್ಟ ವಿಭಾಗದಲ್ಲಿ ರಾಧಿಕಾ ವಿಶ್ವನಾಥ ತೊಂಡಿಹಾಳ ಪ್ರಥಮ ಸ್ಥಾನ ಪಡೆದು, ಮಹಿಳಾ ಕಂಠೀರವ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ....

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.