ಹರಪನಹಳ್ಳಿ : ನಕಲಿ ದಾಖಲೆ ಸೃಷ್ಟಿಸಿಕೊಂಡು ತನ್ನ ಹೆಸರಿಗೆ ಆಸ್ತಿ ಪತ್ರಗಳನ್ನು ಮಾಡಿಕೊಂಡು ಪರಾರಿಯಾಗಿದ್ದ 12 ವರ್ಷ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಖಾಸಿಂಪೀರ್ ತಂದೆ ಇಮಾಮಸಾಬ್ ಮೂಲಿಮನಿ (63) ಬಂಧಿತ ಆರೋಪಿ. 2024 ರಲ್ಲಿ ನಕಲಿ ದಾಖಲೆ ಪತ್ರ ಸೃಷ್ಟಿಸಿಕೊಂಡು ತನ್ನ ಹೆಸರಿಗೆ ಆಸ್ತಿ ಪತ್ರಗಳನ್ನು ಮಾಡಿಸಿಕೊಂಡು ಪರಾಗಿಯಾಗಿದ್ದ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಗುನ್ನೆ ನಂಬರ್ 237/2014 ದೂರು ದಾಖಲಾಗಿತ್ತು.
ಕೆಲಸದ ನಿಮಿತ್ತ ಹರಪನಹಳ್ಳಿಗೆ ಆಗಮಿಸಿದ್ದಾಗ ಠಾಣೆ ಸಿಬ್ಬಂದಿ ಎಚ್.ಸಿ. ಶಂಭುನಾಥ್ ಮತ್ತು ಕಾನ್ಸಟೇಬಲ್ ಕೊಟ್ರೇಶ್ ಅವರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Leave a comment