Home ವಿಜೃಂಭಿಸಿದ 10ನೇ ವರ್ಷದ ‘ಹಿಂದೂ ಮಹಾಗಣಪತಿ’ ಶೋಭಾಯಾತ್ರೆ:
Homeಸುದ್ದಿಗಳು

ವಿಜೃಂಭಿಸಿದ 10ನೇ ವರ್ಷದ ‘ಹಿಂದೂ ಮಹಾಗಣಪತಿ’ ಶೋಭಾಯಾತ್ರೆ:

Share
Share

ಹರಪನಹಳ್ಳಿ: ಇಲ್ಲಿನ ನಗರದಲ್ಲಿ 10ನೇ ವರ್ಷದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯು ಗುರುವಾರ ಸಂಜೆ ಅತ್ಯಂತ ವಿಜೃಂಭಣೆ ಹಾಗೂ ಸಡಗರದಿಂದ ಜರುಗಿತು. ಮೆರವಣಿಗೆಯುದ್ದಕ್ಕೂ ಯುವಕರ ಹರ್ಷೋದ್ವಾರ, ಸಡಗರದ ನೃತ್ಯ ಕಳೆಗಟ್ಟಿದ್ದು, ನಗರದ ಪ್ರಮುಖ ರಸ್ತೆಗಳು ಕೇಸರಿಮಯವಾಗಿ ಕಂಗೊಳಿಸಿದವು. ಮಧ್ಯಾಹ್ನ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ, ಸಾಂಪ್ರದಾಯಿಕ ಹರಾಜು ಪ್ರಕ್ರಿಯೆಯ ನಂತರ ಮೆರವಣಿಗೆಗೆ ಅಧಿಕೃತ ಚಾಲನೆ ನೀಡಿದರು.

ವಿವಿಧ ವೃತ್ತಗಳಲ್ಲಿ ಸಂಚರಿಸಿದ ಶೋಭಾಯಾತ್ರೆ: ಐತಿಹಾಸಿಕ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಶೋಭಾಯಾತ್ರೆಯು ಹಿರೆಕೆರೆ ವೃತ್ತ, ಇಜಾರಿ ಶಿರಸಪ್ಪ ವೃತ್ತ, ಜೆಸಿಐ ಸರ್ಕಲ್, ಹಳೇ ಬಸ್ ನಿಲ್ದಾಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಕಾಯಕದಹಳ್ಳಿ ಕೆರೆಯತ್ತ ಸಾಗಿತು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಡಿಜೆ ಸೌಂಡ್‌ಗೆ ಸಾವಿರಾರು ಯುವಕರು ಕೇಸರಿ ಧ್ವಜ ಹಿಡಿದು ಲವಲವಿಕೆಯಿಂದ ಹೆಜ್ಜೆ ಹಾಕಿದರು.

ನಗರಸಭೆ ಮುಂಭಾಗದ ರಸ್ತೆಯಲ್ಲಿ ಶಶಿಕಾಂತ ಪಟಗಿ ಹಾಗೂ ಅವರ ಗೆಳೆಯರ ಬಳಗದಿಂದ ಗಣಪತಿಗೆ ವಿಶೇಷ ಪೂಜೆ ನೆರವೇರಿತು. ಗಣೇಶನಿಗೆ ಅರ್ಪಿಸಲಾಗಿದ್ದ ವಸ್ತುಗಳ ಹರಾಜು ಪ್ರಕ್ರಿಯೆ ಮಧ್ಯಾಹ್ನ 4 ಗಂಟೆಗೆ ಪೂರ್ಣಗೊಂಡಿತಾದರೂ, ಉತ್ಸಾಹಭರಿತ ಯುವಕರ ಶೋಭಾಯಾತ್ರೆಯು ರಾತ್ರಿ 10 ಗಂಟೆಯಾದರೂ ಅಂಬೇಡ್ಕರ್ ವೃತ್ತದಲ್ಲಿ ಜನಸ್ತೋಮದೊಂದಿಗೆ ವಿಜೃಂಭಿಸುತ್ತಿತ್ತು.

ಹರಾಜಾದ ವಿಶೇಷ ವಸ್ತುಗಳ ವಿವರ:

  • ಬೆಳ್ಳಿ ಹಾರ: ₹92,000 (ಪ್ರಜ್ವಲ್)

  • ನೋಟಿನ ಹಾರ: ₹72,000 (ತಲವಾಗಲು ನಾಗರಾಜ್)

  • ಬೆಳ್ಳಿ ಗಣಪ: ₹62,000

  • ನಾಣ್ಯದ ಹಾರ: ₹55,000 (ಬಾಲ ಗಣಪತಿ ಕಮಿಟಿ)

  • ಸಣ್ಣ ನಾಣ್ಯದ ಹಾರ: ₹35,000 (ಶಶಿಧರ ಹರಪನಹಳ್ಳಿ)

  • ಕೇಸರಿ ಧ್ವಜ: ₹29,000 (ಗುಂಡಗತ್ತಿ ಮಾರುತಿ)

  • ಗೋಡಂಬಿ ಹಾರ: ₹21,000 (ಚಿಕ್ಕೇರಿ ನಾಗರಾಜ್)

  • ಲಡ್ಡು ಪ್ರಸಾದ: ₹20,000 (ತಲವಾಗಲು ನಾಗರಾಜ್)

  • ಮುತ್ತಿನ ಹಾರ: ₹17,000 (ರಾಜಪ್ಪ)

ಗಣ್ಯರ ಭೇಟಿ ಮತ್ತು ಭಾರಿ ಪೊಲೀಸ್ ಬಂದೋಬಸ್ತ್: ಮೆರವಣಿಗೆಯಲ್ಲಿ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ, ಹಿರೆಹಡಗಲಿ ಸಣ್ಣ ಹಾಲಸ್ವಾಮೀಜಿ, ಪ್ರಮುಖರಾದ ಎಚ್.ಎಂ. ಜಗದೀಶ, ಶರತ್, ಸುರೇಶ್, ಶಶಿಕಾಂತ ಪಟಗಿ, ಹಾಲೇಶ್, ವೀರೇಶ, ಅಭಿಲಾಷ ಪೂಜಾರ ಸೇರಿದಂತೆ ವಿಶ್ವ ಹಿಂದೂ ಪರಿಷತ್-ಬಜರಂಗದಳದ ಮುಖಂಡರು ಹಾಗೂ ವಿವಿಧ ರಾಜಕಾರಣಿಗಳು ಭಾಗವಹಿಸಿದ್ದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಡಾ. ಸಂತೋಷ ಚೌವ್ಹಾಣ್ ಹಾಗೂ ಸಿಪಿಐ ಮಹಾಂತೇಶ ಸಜ್ಜನ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸರು ಕಟ್ಟಡಗಳ ಮೇಲ್ಭಾಗ ಹಾಗೂ ರಸ್ತೆ ಇಕ್ಕೆಲಗಳಲ್ಲಿ ಕ್ಯಾಮೆರಾಗಳೊಂದಿಗೆ ಸನ್ನದ್ಧರಾಗಿ ಬಿಗಿ ಕಾವಲು ಕಾಯ್ದಿದ್ದರು. ಮೆರವಣಿಗೆಯ ನೃತ್ಯದ ವೇಳೆ ಕಿರಿಕ್ ಮಾಡಲು ಯತ್ನಿಸಿದ ಯುವಕನೊಬ್ಬ ಪೊಲೀಸರಿಂದ ಪರಾರಿಯಾದ ಘಟನೆಯೂ ನಡೆಯಿತು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಅಕ್ಟೋಬರ್ 2 ಮತ್ತು 4 ರಂದು ಕೆಇಎ ನೇಮಕಾತಿ ಪರೀಕ್ಷೆ: ಪಾರದರ್ಶಕತೆಗೆ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಸೂಚನೆ

ವಿಜಯನಗರ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಕ್ಟೋಬರ್ 2 ಮತ್ತು 4 ರಂದು ನಡೆಯಲಿರುವ ಭೂ...

Homeಸುದ್ದಿಗಳು

ದೀಕ್ಷಾಭೂಮಿ ಯಾತ್ರೆಗೆ ಅರ್ಜಿ ಆಹ್ವಾನ

ವಿಜಯನಗರ : ಪ್ರಸಕ್ತ ಸಾಲಿನಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾಭೂಮಿಯಲ್ಲಿ ಅಕ್ಟೋಬರ್ 21 ರಂದು ನಡೆಯಲಿರುವ ಪ್ರವರ್ತನಾ...

Homeಸುದ್ದಿಗಳು

ಎಕರೆಗೆ 25 ಸಾವಿರ ಪರಿಹಾರಕ್ಕೆ ಒತ್ತಾಯ

ಹರಪನಹಳ್ಳಿ : ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ತಕ್ಷಣವೇ ಎಕರೆಗೆ...

Homeಸುದ್ದಿಗಳು

ನನ್ನೊಳಗಿನ ಮೌನದ ಮಾತು’ ಕವನ ಸಂಕಲನ

ಹರಪನಹಳ್ಳಿ: ಇಂದಿನ ದಿನಗಳಲ್ಲಿ ಓದುಗರ ಕೊರತೆಯಿಂದಾಗಿ ಕಾವ್ಯದ ಅಭಿರುಚಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ಸಾಹಿತಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.