Home ಸುದ್ದಿಗಳು ಸಂವಿಧಾನದ ದೇಶದ ಹೃದಯವಿದ್ದಂತೆ, : ಎಂ.ಪಿ.ಲತಾ
ಸುದ್ದಿಗಳು

ಸಂವಿಧಾನದ ದೇಶದ ಹೃದಯವಿದ್ದಂತೆ, : ಎಂ.ಪಿ.ಲತಾ

Share
CONSTUTION DAY, HARAPANAHALLI, SOCIAL WELFARE, PEETIKE
ವಿಜಯನಗರ ಜಿಲ್ಲೆ ಹರಪನಹಳ್ಳಿ ಹಿರೆಕೆರೆ ವೃತ್ತದಲ್ಲಿ ಜರುಗಿದ ರಾಷ್ಟ್ರೀಯ ಸಂವಿಧಾನ ದಿನಾಚರಣೆಯಲ್ಲಿ 2ನೇ ತರಗತಿ ವಿದ್ಯಾರ್ಥಿ ಭರತ್ ಪೀಠಿಕೆ ಓದಿದರು, ನೆರೆದಿದ್ದವರು ಪ್ರಮಾಣ ವಚನ ಸ್ವೀಕರಿಸಿದರು.
Share

ಹರಪನಹಳ್ಳಿ : ನಗರದ ಹಿರೆಕೆರೆ ವೃತ್ತದಲ್ಲಿ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಜರುಗಿತು.

ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರ, ಪೀಠಿಕೆ ಚಿತ್ರ ತೆರೆದ ವಾಹನದಲ್ಲಿ ಅಳವಡಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಅಂಬೇಡ್ಕರ ವಸತಿ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಬಿ.ಎಚ್.ಭರತ್ ಅವರು, ಪುಸ್ತಕ ನೋಡದೆ ಪೀಠಿಕೆ ಹೇಳಿ ಎಲ್ಲರ ಗಮನ ಸೆಳೆದಿದ್ದು ವಿಶೇಷವಾಗಿತ್ತು. ಡ್ರಮ್ ಸೆಟ್ ಕಲಾವಿದರು ಮೆರುಗು ನೀಡಿದರು. ದಾರಿಯುದ್ದಕ್ಕೂ ಸಂವಿಧಾನ ಪೀಠಿಕೆ ಮಹತ್ವ ಸಾರುವ ಪ್ಲೆ ಕಾರ್ಡ್ ಗಳ ಪ್ರದರ್ಶಿಸಲಾಯಿತು.

ಉದ್ಘಾಟಿಸಿದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ಸಂವಿಧಾನದ ದೇಶದ ಹೃದಯವಿದ್ದಂತೆ, ಅದರ ಬಡಿತ, ಮಿಡಿತ ಸದಾ ಸದೃಢ ಭಾರತದ ನಿರ್ಮಾಣ ಒಳಗೊಂಡಿರಬೇಕು. ಸಂವಿಧಾನದ ಬುನಾದಿ ಭದ್ರಪಡಿಸಲು ಎಲ್ಲರೂ ಕಂಕಣ ಬದ್ಧರಾಗುವ ಅಗತ್ಯವಿದೆ ಎಂದರು.

ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು, ಸಹಾಯಕ ನಿರ್ದೇಶಕ ಎಸ್.ಆರ್.ಗಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ, ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ, ವಿಸ್ತರಣಾಧಿಕಾರಿ ಭೀಮಪ್ಪ ಕೊಳಚಿ, ಎನ್.ಜಿ.ಬಸವರಾಜ್, ಹುಲಿಕಟ್ಟೆ ಚಂದ್ರಪ್ಪ, ಮೈದೂರು ಒ.ರಾಮಪ್ಪ, ಯಾಸ್ಮಿನ್ ಷಾ ಗುಪ್ತಾ, ಸುನಿತಾ,  ರವಿಗೌಡ, ಯಲ್ಲಮ್ಮ, ಶಿವಕುಮಾರ, ವಿನಯ್, ಗಂಗಾಧರ, ಡಿ.ಮಂಜುನಾಥ, ರವಿ, ಪಂಪಾಪತಿ, ಇಸ್ಮಾಯಿಲ್ ಎಲಿಗಾರ, ದೇವೇಂದ್ರಪ್ಪ ಇದ್ದರು. ನಿಲಯ ಮೇಲ್ವಿಚಾರ ಎನ್.ಜಿ.ಬಸವರಾಜ ನಿರೂಪಿಸಿದರು.

 

 

 

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರಸ್ತೆ ನಿರ್ಮಾಣಕ್ಕೆ ಜಾಗ ತ್ಯಾಗ ಮಾಡಿದ ಗ್ರಾಮಸ್ಥರ ಋಣ ತೀರಿಸಲಾಗದು: ಶಾಸಕ ಹೆಚ್.ಆರ್. ಗವಿಯಪ್ಪ

ವಿಜಯನಗರ (ಹೊಸಪೇಟೆ) : ಊರಿನ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ತಮ್ಮ ಜಾಗ...

Homeಸುದ್ದಿಗಳು

ಕೊಪ್ಪಳ : ಪ್ರತಿಭಾ ಪುರಸ್ಕಾರಕ್ಕೆ ಬನ್ನಿ

ಹರಪನಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲೂಕು ಘಟಕದ ವತಿಯಿಂದ 2026-27ನೇ ಸಾಲಿನ...

Homeಸುದ್ದಿಗಳು

ಜಿಲ್ಲೆಯ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಶೇ.100 ಇ-ಫಾರ್ಮ್ ವಿತರಣೆ ಪೂರ್ಣ

ವಿಜಯನಗರ (ಹೊಸಪೇಟೆ)  : ಜಿಲ್ಲೆಯ ಐದು ತಾಲೂಕಿನಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ...

Homeಸುದ್ದಿಗಳು

ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ಆಯ್ಕೆಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : 2026ನೇ ಸಾಲಿಗೆ ಜಿಲ್ಲೆಯಲ್ಲಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟು ಜಿಲ್ಲಾ ಮಟ್ಟದ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.