ಹರಪನಹಳ್ಳಿ : ತಾಲ್ಲೂಕಿನ ಅರಸೀಕೆರೆ ಹೋಬಳು ಹೊಸಕೋಟೆ, ಮಾದಿಹಳ್ಳಿ ಮಾರ್ಗದ ರಸ್ತೆ ಅಭಿವೃದ್ದಿಪಡಿಸಬೇಕು ಮತ್ತು ಈ ಮಾರ್ಗದಲ್ಲಿ ಸಾರಿಗೆ ಬಸ್ ಸಂಚಾರಕ್ಕೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ, ಅಖಿಲ ಭಾರತ ವಿಧ್ಯಾರ್ಥಿ ಫೆಡರೇಷನ್ ಸಹಯೋಗದಲ್ಲಿ ಕೆರೆಗುಡಿಹಳ್ಳಿ ಹಾಗೂ ಚಿಕ್ಕಕಬ್ಬಳ್ಳಿ ನಡುವೆ ಗುಂಡಿಬಿದ್ದ ರಸ್ತೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಕೆರೆಗುಡಿಹಳ್ಳಿ ಹಾಲೇಶ್ ಮಾತನಾಡಿ, ಕೆರೆಗುಡಿಹಳ್ಳಿಯಿಂದ ಗಡಿ ಗುಡಾಳುವರೆಗೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಬೂದಿಹಾಳು ಸಿದ್ದೇಶ್ ಮಾತನಾಡಿ, ಶಾಸಕರ ಗಮನಕ್ಕೆ ತಂದರೂ ಸಾರಿಗೆ ಬಸ್ ಸಮಸ್ಯೆ, ರಸ್ತೆ ಅಬಿವೃದ್ದಿ ಆಗುತ್ತಿಲ್ಲ ಎಂದು ದೂರಿದರು. ದಲಿತ ಮುಖಂಡ ಕಬ್ಬಳ್ಳಿ ಮೈಲಪ್ಪ , ನಿವೃತ್ತ ಶಿಕ್ಷಕ ಜಾತಪ್ಪ, ಮಾದಿಹಳ್ಳಿ ಬೊಮ್ಮಲಿಂಗಪ್ಪ, ಡಿ.ಹೆಚ್.ಅರುಣ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ನಾಗಪ್ಪ ಮಾತನಾಡಿದರು. ಎಇಇ ಕುಬೇಂದ್ರ ನಾಯ್ಕ್, ಕೆ.ಎಸ್.ಆರ್.ಟಿ.ಸಿ. ಘಟಕ ವ್ಯವಸ್ಥಾಪಕಿ ಮಂಜುಳಾ ಮನವಿ ಸ್ವೀಕರಿಸಿದರು.
ಉಪ ತಹಶೀಲ್ದಾರ್ ಚಂದ್ರಮೋಹನ್, ಪಿಡಿಒ ಎಚ್.ಎಸ್.ಹೇಮಂತ್ ಕುಮಾರ್, ಶ್ರೀನಿವಾಸ್, ಪುಣಭಘಟ್ಟ ಮಂಜು,ಹಗರಿ ಗುಡಿಹಳ್ಳಿ ಶಿವರಾಮ್,ಪ್ರದೀಪ್, ಕೆರೆಗುಡಿಹಳ್ಳಿ ಶಿವಣ್ಣ ಇದ್ದರು.
Leave a comment