ಹರಪನಹಳ್ಳಿ : ಮಹಿಳೆಯರು ಶಿಕ್ಷಣದಿಂದ ದೂರ ಉಳಿದಿದ್ದ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ನಗರದ ತೆಗ್ಗಿನಮಠ ಸಭಾಂಗಣದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ತಾಲ್ಲೂಕು ಸರ್ಕಾರಿ ನೌಕರರ ಸಂಘಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ 195 ನೇ ಸಾವಿತ್ರಿಬಾಯಿ ಫುಲೆ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಅಂದು ಹೋರಾಟ ಮಾಡಿ, ಎಲ್ಲ ಸಮಸ್ಯೆ ಎದುರಿಸಿ ಗುರುಮಾತೆ ಸ್ಥಾನ ಪಡೆದ ಮೊದಲ ಮಹಿಳೆ ಸಾವಿತ್ರಿಬಾಯಿ ಫುಲೆ ಅವರ ಹೋರಾಟ ನಮಗೆಲ್ಲಾ ಸ್ಪೂರ್ತಿಯಾಗಿದೆ. ಅಂತಹ ಮಹನೀಯರ ಹೆಸರಿನಲ್ಲಿ ಸಂಘ ಕಟ್ಟುವುದು ಮುಖ್ಯವಲ್ಲ, ಅವರಿಹೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಶಿಕ್ಷಕರ ಸಂಘಟನೆಗಳ ನೆಪದಲ್ಲಿ ಕೆಲವು ಶಿಕ್ಷಕರು ಪಾಠ ಬೋಧನೆಗಿಂತ ಹೆಚ್ಚು ರಾಜಕಾರಣದಲ್ಲಿ ತಲ್ಲೀನ ಆಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸಾನ್ನಿಧ್ಯವಹಿಸಿದ್ದ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಷ್ಟ್ರೀಯ ಅಧ್ಯಕ್ಷೆ ಲತಾ ಮಳ್ಳೂರು, ಜಿಲ್ಲಾಧ್ಯಕ್ಷೆ ಟಿ.ಎಚ್.ಎಂ. ಲತಾ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಿ.ಮನೋಹರ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್.ಚಂದ್ರಶೇಖರ್, ಸಂಪನ್ಮೂಲ ವ್ಯಕ್ತಿ ದಿವಾಕರ ನಾರಾಯಣ ಮಾತನಾಡಿದರು.

ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶಿಕ್ಷಕಿ ಕೃಷ್ಣವೇಣಿ ಸೇರಿದಂತೆ ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು 12 ಜನ ಶಿಕ್ಷಕಿಯರು ಹಾಗೂ ತಾಲ್ಲೂಕು ಮಟ್ಟದ ಪ್ರಶಸ್ತಿಗೆ ಭಾಜನರಾದ 42 ಜನ ಶಿಕ್ಷಕಿಯರಿಗೆ ಪ್ರಶಸ್ತಿ ಪ್ರಧಾನ ಮಾಡಿ, ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಆರುಂಡಿ ಸುವರ್ಣಮ್ಮ, ಕಂಚಿಕೇರಿ ಜಯಲಕ್ಷ್ಮಿ, ಸರ್ಕಾರಿ ನೌಕರರ ಸಂಘದ ರಾಜ್ಯಪರಿಷತ್ ಸದಸ್ಯ ಮಂಜುನಾಥ ಪೂಜಾರ, ಎಂ.ಶರೀಫ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಅದ್ಯಕ್ಷ ಗುರುಮೂರ್ತಿ, ಸಂಗಯ್ಯ ಹಿರೇಮಠ, ಕೆ.ಉಚ್ಚೆಂಗೆಪ್ಪ, ಮಂಜುನಾಥ ಪೂಜಾರ, ಎನ್.ಟಿ.ಸೋಮಪ್ಪ, ಬಿ.ಸೂರ್ಯನಾಯ್ಕ, ಕೆ.ಅಂಜಿನಪ್ಪ, ಕೆ.ಮರಿಯಪ್ಪ, ಗೂರಪ್ಪ ಪವಾರ್, ಗಿರಿರಾಜ ಎಲ್., ಲತಾಶ್ರೀ, ಶೋಭಾರಾಣಿ, ವಸಂತಮ್ಮ, ಶೈಲಜಾ, ಜೆ.ಬಸವಕುಮಾರ, ಜಮಾಲುದ್ದೀನ್, ಮಕ್ಬುಲ್ ಭಾಷ, ದೀಪಕ್, ವಿಜಯಕುಮಾರ, ಚನ್ನವೀರಪ್ಪ, ಮಂಜಪ್ಪ ಬಣಕಾರ, ಎಸ್.ಎಂ.ಕೊಟ್ರೇಶಯ್ಯ ಇದ್ದರು.
Leave a comment