Home ಹಂಪಿ ಉತ್ಸವ ವಸ್ತು ಪ್ರದರ್ಶನ ಮಳಿಗೆಗಳಿಗೆ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಚಾಲನೆ
Homeಕಲೆಸುದ್ದಿಗಳು

ಹಂಪಿ ಉತ್ಸವ ವಸ್ತು ಪ್ರದರ್ಶನ ಮಳಿಗೆಗಳಿಗೆ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಚಾಲನೆ

Share
Share

ಹಂಪಿ ಉತ್ಸವ -2026 ಅಂಗವಾಗಿ ಹಂಪಿ ಗ್ರಾಮದ ಮಾತಂಗ ಪರ್ವತ ಮೈದಾನದಲ್ಲಿ ಆಯೋಜಿಸಲಾಗಿರುವ ತೋಟಗಾರಿಕೆ ಮತ್ತು ಫಲಪುಷ್ಪ, ಕೃಷಿ, ಅರಣ್ಯ, ಮತ್ಸ್ಯ ಹಾಗೂ ವ್ಯಾಪಾರ ಮಳಿಗೆಗಳಿಗೆ ಶುಕ್ರವಾರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಉದ್ಘಾಟಿಸಿ, ವಸ್ತು ಪ್ರದರ್ಶನಗಳಿಗೆ ಚಾಲನೆ ನೀಡಿದರು.
ಪುಷ್ಪಲೋಕದಲ್ಲಿ ಅರಳಿದ ಬಡವಿ ಶಿವಲಿಂಗ, ಸಾಸಿವೆಕಾಳು ಗಣಪ:

       

ಫಲಪುಷ್ಪ ಪ್ರದರ್ಶನ ಜನಮನ ಸೂರೆಗೊಳ್ಳುತ್ತಿದೆ. ಪುಷ್ಪಲೋಕದಲ್ಲಿ ಅರಳಿದ ಬೃಹತ್ ಬಡವಿ ಶಿವಲಿಂಗ, ಸಾಸಿವೆಕಾಳು ಗಣಪತಿ ಪ್ರಮುಖ ಆಕರ್ಷಣೆ ಎನಿಸಿವೆ. ಬಿಳಿ,ಕೆಂಪು,ನೇರಳೆ, ಹಳದಿ ಬಣ್ಣದ ಸೇವಂತಿ, ಗುಲಾಬಿ, ಚಂಡು ಹೂಗಳಿಂದ ಬಡವಿ ಶಿವಲಿಂಗ ಹಾಗೂ ಸಾಸಿವೆ ಕಾಳು ಗಣಪ ನಿರ್ಮಿಸಲಾಗಿದೆ. ಬಡವಿ ಶಿವಲಿಂಗ ನಿರ್ಮಾಣಕ್ಕೆ 10 ಸಾವಿರ ಹಾಗೂ ಸಾಸಿವೆ ಕಾಳು ಗಣಪತಿ ನಿರ್ಮಾಣಕ್ಕೆ 5 ಸಾವಿರ ಹೂಗಳು ಬಳಕೆಯಾಗಿವೆ. ಎರಡು ಕಲಾಕೃತಿಗಳು ಹೊಸಪೇಟೆ ಕಲಾವಿದ ಜಗದೀಶ್ ಕೈಚಳದಲ್ಲಿ ಮೂಡಿಬಂದಿದೆ.
ಸುವರ್ಣಯುಗದ ರಾಜಬೀದಿ ವೈಭವ ಅನಾವರಣ:
ವಿಜಯನಗರ ಸಾಮ್ರಾಜ್ಯದ ಸುವರ್ಣಯುಗ ನೆನಪಿಸುವ ಮುತ್ತು,ವಜ್ರ,ವೈಡೂರ್ಯ,ಸ್ವರ್ಣಗಳ ಮಾರಾಟ ರಾಜಬೀದಿ ನಾಡಿನ ಗತವೈಭವ ಸಾರುತ್ತಿವೆ. ಹೂಗಳಿಂದ ನಿರ್ಮಿತವಾದ ರಾಯರರಾಯ, ಯವನರಾಜ್ಯಪ್ರತಿಷ್ಠಾಪನಾಚಾರ್ಯ ಕೃಷ್ಣದೇವರಾಯರ ಪ್ರತಿಮೆ ಗಾಂಭೀರ್ಯ ಮೆಚ್ಚುವಂತಿದೆ. ಸಿರಿಧಾನ್ಯಗಳಲ್ಲಿ ಮೂಡಿಬಂದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವಿನೀತಳಾಗಿ ಕೈಮುಗಿದು ನಿಂತ ಪ್ರತಿಮೆ, ಪರಿಸರ ರಕ್ಷಣೆ ನೋಡುಗರನ್ನು ಪ್ರೇರೆಪಿಸುತ್ತದೆ. ಕುಬ್ಜಮರಗಳ ಬೆಳಸುವ ಬೋನ್ಸಾಯ್ ಕಲೆ, ಜಿಲ್ಲೆಯ ತೋಟಗಾರಿಕೆ ಬೆಳೆಗಳ ಪರಿಚಯ ಪಲಫುಷ್ಪ ಪ್ರದರ್ಶನ ದೊರೆಯುತ್ತಿದೆ.
ಹಂಪಿ ಉತ್ಸವದಲ್ಲಿ ಸುಗ್ಗಿ ಸಂಭ್ರಮ : ರೈತರ ಬದುಕು ಅನಾವರಣಗಳಿಸಿದ ಕೃಷಿ ವಸ್ತುಪ್ರದರ್ಶ


ಸುಗ್ಗಿ ಸಂಭ್ರಮ, ಕೃಷಿ ವಸ್ತುಗಳ ಪ್ರದರ್ಶನ ನಾಡಿನ ರೈತರ ಬದುಕನ್ನು ಅನಾವರಣಗೊಳಿಸಿತು. ಪಾರಂಪರಿಕ ಹಾಗೂ ಆಧುನಿಕ ಕೃಷಿ ಪದ್ಧತಿಗಳ ಸಂಯೋಗದೊAದಿಗೆ ಸುಸ್ಥಿರ ಕೃಷಿ ಅಭಿವೃದ್ಧಿಯನ್ನು ಸಾಧ್ಯತೆಯನ್ನು ವಸ್ತುಪ್ರದರ್ಶನ ಸಾರುತ್ತಿದೆ. ಸುಗ್ಗಿ ಸಂಭ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ದವಸ ಧಾನ್ಯಗಳ ರಾಶಿ ಪೂಜೆ ನೆರವೇರಿಸಿದರು.
ಸುಗ್ಗಿ ಸಂಭ್ರಮದಲ್ಲಿ ಸಂಕ್ರಾAತಿ ಹಬ್ಬ, ರಾಶಿಪೂಜೆ, ಬೀಜಗಳ ಒಕ್ಕಣೆ ಮಾಡುತ್ತಾ ಹಾಗೂ ಒಳಕಲ್ಲಿನಲ್ಲಿ ಧಾನ್ಯ ಬೀಸುತ್ತಾ ಜನಪದ ಗೀತೆ ಹಾಡುವ ಗ್ರಾಮೀಣ ಮಹಿಳೆಯರು, ಎತ್ತಿನ ಬಂಡಿ ಹಳ್ಳಿ ಸೊಗಡನ್ನು ಚಿತ್ರಣವನ್ನು ನೋಡುಗರ ಕಣ್ಣಿಗೆ ಕಟ್ಟಿಕೊಡುತ್ತಿವೆ.
ಕೃಷಿ ವಸ್ತು ಪ್ರದರ್ಶನದಲ್ಲಿ ದೇಶಿ ಪಾರಂಪರಿಕ ಕೃಷಿ ಉತ್ಪನ್ನಗಳು ರೈತರ ಜೀವನ ತರೆದಿಡುತ್ತಿವೆ. ಕುಲಾಂತರಿ ಹಾಗೂ ವಿದೇಶಿ ಬೀಜಗಳ ನಡುವೆಯೂ ಜವಾರಿ ಹಾಗೂ ನಾಟಿ ಬೀಜ ಸಂಪತ್ತು, ಜೀವ ಹಾಗೂ ಸಸ್ಯ ವೈವಿಧ್ಯತೆ ಕಾಪಾಡುವ ಮಹತ್ವ ಸಾರುತ್ತಿವೆ.
ಸಿರಿಧಾನ್ಯಗಳಲ್ಲಿ ಮೂಡಿಬಂದ ಗಣಪತಿ, ಕೆ.ಎಸ್.ಡಿ.ಎ ಲಾಂಚನ ಹಾಗೂ ನಂದಿ ಜನರನ್ನು ಸಳೆಯುತ್ತಿವೆ. ಇದರೊಂದಿಗೆ ಕೃಷಿಯಲ್ಲಿ ದ್ರೋಣಗಳ ಬಳಕೆ, ಟ್ರಾಕ್ಟರ್, ಪಶುಪಾಲನೆಯೊಂದಿಗೆ ಸಮಗ್ರ ಕೃಷಿ ಪದ್ದತಿ ಬಗ್ಗೆ ತಿಳಿಸುವ ಕೃಷಿ ಬ್ರಹ್ಮಾಂಡ, ರೇಷ್ಮೆ ಕೃಷಿ, ಸಿರಿಧಾನ್ಯಗಳ ಖಾದ್ಯಗಳ ಹಾಗೂ ಸಾವಯವ ಕೃಷಿ ಉತ್ಪನ್ನ ಮಾರಾಟ ಈ ಬಾರಿಯ ಕೃಷಿ ಪ್ರದರ್ಶನದಲ್ಲಿ ಪ್ರಮುಖ ಎನಿಸಿವೆ.

ಮಾತಂಗ ಬೆಟ್ಟದ ತಪ್ಪಲಲ್ಲಿ ‘ದರೋಜಿ ಕರಡಿ ಲೋಕ’:

ಐತಿಹಾಸಿಕ ಹಂಪಿ ಉತ್ಸವದ ಸಂಭ್ರಮದ ನಡುವೆ, ವಿಜಯನಗರ ಜಿಲ್ಲೆಯ ಸಮೃದ್ಧ ಜೀವ ವೈವಿಧ್ಯತೆಯನ್ನು ಪರಿಚಯಿಸುವ ಅರಣ್ಯ ಇಲಾಖೆಯ ವಸ್ತು ಪ್ರದರ್ಶನ ಮಳಿಗೆಯು ಪ್ರವಾಸಿಗರ ಮನಗೆಲ್ಲುತ್ತಿದೆ. ಮಾತಂಗ ಪರ್ವತದ ತಪ್ಪಲಿನ ಬಯಲಿನಲ್ಲಿ ನಿರ್ಮಿಸಲಾಗಿರುವ ಈ ಮಳಿಗೆಯು ಸದ್ಯ ಉತ್ಸವದ ಪ್ರಮುಖ ಆಕರ್ಷಣಾ ಕೇಂದ್ರವಾಗಿ ಹೊರಹೊಮ್ಮಿದೆ.
ಕರಡಿ ಧಾಮದ ಮರುಸೃಷ್ಟಿ:
ಏಷ್ಯಾದಲ್ಲೇ ಮೊದಲನೆಯದು ಎನ್ನಲಾದ ಜಿಲ್ಲೆಯ ಹೆಮ್ಮೆಯ ‘ದರೋಜಿ ಕರಡಿಧಾಮ’ವನ್ನು ಹಂಪಿಯ ಅಂಗಳದಲ್ಲಿ ಅರಣ್ಯ ಇಲಾಖೆ ಅತ್ಯಂತ ನೈಜವಾಗಿ ಮರುಸೃಷ್ಟಿಸಿದೆ. ಬೆಟ್ಟಗುಡ್ಡಗಳ ಸಾಲು, ಕಲ್ಲುಗಳ ನಡುವಿನ ಗುಹೆಗಳು ಮತ್ತು ಹಸಿರಿನ ಹೊದಿಕೆಯನ್ನು ಕಂಡು ಪ್ರವಾಸಿಗರು ಅಕ್ಷರಶಃ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಕರಡಿಧಾಮಕ್ಕೆ ಭೇಟಿ ನೀಡಲು ಸಾಧ್ಯವಾಗದವರಿಗೆ, ಈ ಮಳಿಗೆಯು ಅದರ ಸಂಪೂರ್ಣ ಚಿತ್ರಣವನ್ನು ಕಣ್ಣಮುಂದೆ ತರುತ್ತಿದೆ.
ಕಾಡುಪ್ರಾಣಿಗಳ ನಡುವೆ ಒಂದು ‘ಸೆಲ್ಫಿ’:

ಮಳಿಗೆಯ ಒಳಗೆ ಕಾಲಿಡುತ್ತಿದ್ದಂತೆ ಹುಲಿ, ಚಿರತೆ, ಕರಡಿ ಹಾಗೂ ವಿವಿಧ ಉರಗಗಳ ಕಲಾಕೃತಿಗಳು ಸ್ವಾಗತಿಸುತ್ತವೆ. ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಈ ಪ್ರತಿಕೃತಿಗಳು ಎಷ್ಟು ನೈಜವಾಗಿವೆ ಎಂದರೆ, ಪ್ರವಾಸಿಗರು ಇವುಗಳ ಮುಂದೆ ನಿಂತು ಫೋಟೋ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ. ವಿಶೇಷವಾಗಿ ಮಕ್ಕಳಿಗೆ ಈ ಮಳಿಗೆಯು ಅರಣ್ಯ ಲೋಕದ ಪಾಠಶಾಲೆಯಂತಾಗಿದೆ.
ಅರಿವು ಮೂಡಿಸುವ ಪ್ರಯತ್ನ:
ಕೇವಲ ಪ್ರದರ್ಶನಕ್ಕಷ್ಟೇ ಸೀಮಿತವಾಗದೆ, ಜಿಲ್ಲೆಯ ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಫಲಕಗಳನ್ನು ಇಲ್ಲಿ ಅಳವಡಿಸಲಾಗಿದೆ. ಹಂಪಿಯ ಸ್ಮಾರಕಗಳ ಜತೆಗೆ ಜಿಲ್ಲೆಯ ನೈಸರ್ಗಿಕ ಸಂಪತ್ತನ್ನು ಪ್ರವಾಸಿಗರಿಗೆ ಉಣಬಡಿಸುವಲ್ಲಿ ಅರಣ್ಯ ಇಲಾಖೆಯ ಈ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಲಂಕಾರಿಕ ಮತ್ಸ್ಯ ಮೇಳ; ತುಂಗಭದ್ರಾ ಜಲಾಶಯದ ಪ್ರತಿಕೃತಿ ಆಕರ್ಷಣೆ:
ಹಂಪಿ ಉತ್ಸವದ ಅಂಗವಾಗಿ ಮಾತಂಗ ಪರ್ವತ ಮೈದಾನದಲ್ಲಿ ಮೀನುಗಾರಿಕೆ ಇಲಾಖೆ ಆಯೋಜಿಸಿರುವ ಮತ್ಸ್ಯ ಮೇಳವು ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಸಾಗರದ ಆಳದಲ್ಲಿನ ಮತ್ಸ್ಯ ಸಂಪತ್ತಿನ ವೈವಿಧ್ಯತೆಯನ್ನು ಪರಿಚಯಿಸುವ ಉದ್ದೇಶದಿಂದ ಏರ್ಪಡಿಸಿರುವ ಪ್ರದರ್ಶನದಲ್ಲಿ ದೇಶಿ ಹಾಗೂ ವಿದೇಶಿ ಮೂಲದ 50ಕ್ಕೂ ಹೆಚ್ಚು ತಳಿಯ ಅಲಂಕಾರಿಕ ಮೀನುಗಳಿವೆ.
ವಿಂಡೋಸ್ ಏಂಜಲ್, ಫ್ಲೋರಾ, ಕ್ಯಾಟ್ ಫಿಶ್, ಕೋಯಿ ರ‍್ಪ್, ಟೈಗರ್ ಆಸ್ಕರ್, ರೆಡ್ ಕ್ಯಾಪ್ ಗೋಲ್ಡ್, ಲಯನ್ ಹೆಡ್, ಫೈಟರ್, ರೆಡ್ ಸ್ಪಾಟ್ ಸ್ಪೋರಮ್, ಚಿಚ್ಲಿಡ್ಸ್, ಮಲಾಬಾರ್ ಗೊರಾಮಿ, ರ‍್ಕ್ ಕ್ಯಾಟ್, ಸ್ನೇಕ್ ಹೆಡ್, ಡಿಸ್ಕಸ್, ಹನಿ ಹಾಗೂ ರ‍್ಲ್ ಗೊರಾಮಿ ಸೇರಿದಂತೆ ಹಲವು ರ‍್ಣರಂಜಿತ ಮೀನುಗಳು ಮೇಳದಲ್ಲಿ ಗಮನ ಸೆಳೆಯುತ್ತಿವೆ. ಬಣ್ಣಬಣ್ಣದ ರೂಪ, ವಿಶಿಷ್ಟ ಚಲನವಲನ ಮತ್ತು ರ‍್ಷಕ ಆಕಾರಗಳಿಂದ ಈ ಮೀನುಗಳು ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರಲ್ಲೂ ಕುತೂಹಲ ಹುಟ್ಟಿಸುತ್ತಿವೆ. ಪ್ರ‍್ಶನ ಮಳಿಗೆಯಲ್ಲಿರುವ ಗಾಜಿನ ಅಕ್ವೇರಿಯಂಗಳಲ್ಲಿ ಈ ಮೀನುಗಳನ್ನು ಅಲಂಕಾರಿಕವಾಗಿ ಸಿದ್ಧಪಡಿಸಿರುವುದು ವಿಶೇಷತೆ.
ಅಲಂಕಾರಿಕ ಮೀನು ಸಾಕಾಣಿಕೆ ಉದ್ಯಮವು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗಕ್ಕೆ ಉತ್ತಮ ಅವಕಾಶಗಳನ್ನು ಒದಗಿಸುತ್ತಿದೆ. ಕಡಿಮೆ ಜಾಗದಲ್ಲಿ, ಕಡಿಮೆ ಹೂಡಿಕೆಯಲ್ಲಿ ಆರಂಭಿಸಬಹುದಾದ ಈ ಉದ್ಯಮಕ್ಕೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ಒಳನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಮೀನು ಸಂಪತ್ತಿನ ವೃದ್ಧಿಗೆ ಜಾರಿಗೆ ತಂದಿರುವ ಯೋಜನೆಗಳ ಕುರಿತು ಬಿತ್ತಿಚಿತ್ರಗಳು ಹಾಗೂ ಮಾಹಿತಿ ಫಲಕಗಳ ಮೂಲಕ ತಿಳಿಸಲಾಗುತ್ತಿದೆ. ಆಹಾರಕ್ಕಾಗಿ ಬಳಸುವ ವಿವಿಧ ಮೀನುಗಳ ಪೋಷಕಾಂಶಗಳ ಮಹತ್ವವನ್ನೂ ವಿವರಿಸಲಾಗಿದೆ.
ಈ ಬಾರಿ ಮೇಳದ ಪ್ರಮುಖ ಆಕರ್ಷಣೆಯಾಗಿ ಜಿಲ್ಲೆಯ ಮತ್ಸö್ಯ ಸಂಪತ್ತಿನ ಆಕರವಾದ ತುಂಗಭದ್ರಾ ಜಲಾಶಯದ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. ಜಲಾಶಯದ ವಿಹಂಗಮ ನೋಟವನ್ನು ರೂಪಕವಾಗಿ ಪ್ರದರ್ಶಿಸಿರುವುದು ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ. ಜಲಾಶಯದಲ್ಲಿ ದೊರೆಯುವ ಮೀನುಗಳ ವೈವಿಧ್ಯತೆ ಹಾಗೂ ಮೀನುಗಾರರ ಜೀವನೋಪಾಯದಲ್ಲಿ ಅದರ ಪಾತ್ರದ ಕುರಿತು ವಿವರಿಸಲಾಗುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಮೇತರಾಗಿ ಆಗಮಿಸುವ ಸಾರ್ವಜನಿಕರು ಮತ್ಸ್ಯ ಮೇಳವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ, ಈ ಮೇಳವು ಅಲಂಕಾರಿಕ ಮೀನುಗಳ ಅದ್ಭುತ ಲೋಕವನ್ನು ಪರಿಚಯಿಸುವುದರ ಜೊತೆಗೆ ಮತ್ಸೊö್ಯÃದ್ಯಮದ ಮಹತ್ವ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವ ವೇದಿಕೆಯಾಗುತ್ತಿದೆ.
ವಸ್ತುಪ್ರದರ್ಶನ ಮಳಿಗೆಗಳ ಉದ್ಘಾಟನೆ ವೇಳೆ ಉಪವಿಭಾಗಧಿಕಾರಿ ವಿವೇಕ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪ್ರಭುರಾಜ್ ಹಿರೇಮಠ, ಕೃಷಿ ಜಂಟಿ ನಿರ್ದೇಶಕ ಬಿ.ಟಿ.ಮಂಜುನಾಥ, ಉಪನಿರ್ದೇಶಕ ಡಾ.ನಹೀಂಪಾಷ, ಉಪಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ಮೀನುಗಾರಿಕೆ ಇಲಾಕೆ ಉಪನಿರ್ದೇಶಕ ಬಿ.ಮಲ್ಲೇಶ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ವಸತಿ ಶಾಲೆಗಳ 6ನೇ ತರಗತಿ : ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಾತಿಗಾಗಿ...

Homeಸುದ್ದಿಗಳು

ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹ: ತಹಸೀಲ್ದಾರರಿಗೆ ಬಿಜೆಪಿ ವತಿಯಿಂದ ಮನವಿ ಸಲ್ಲಿಕೆ

 ಹರಪನಹಳ್ಳಿ : ಇಂದು ಮಂಡಲ ಬಿಜೆಪಿ ವತಿಯಿಂದ ಬರಗಾಲದ ಕಾರಣದಿಂದ ಹರಪನಹಳ್ಳಿ ತಾಲೂಕನ್ನು ಬರಪೀಡಿತ ತಾಲೂಕನ್ನಾಗಿ...

Homeಸುದ್ದಿಗಳು

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ತಾಲೂಕಿನ ವಿವಿಧ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಖಾಲಿಯಿರುವ...

Homeಸುದ್ದಿಗಳು

ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ಹೊಸಪೇಟೆ ತಾಲೂಕಿನ ಸಮಗ್ರ ಗಣಿ ಪರಿಸರ ಪುನಶ್ಚೇತನ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.