Home ಮನರಂಜನೆ ಹಂಪಿ ಉತ್ಸವದಲ್ಲಿ ಡಾಲಿ ಧನಂಜಯ್ ಘರ್ಜನೆ : ಜನರ ಕೇಕೆ ಹಾಗೂ ಶಿಳ್ಳೆಯಲ್ಲೇ ಶಿವ ಕಾಣುತ್ತಾನೆ
ಮನರಂಜನೆಸುದ್ದಿಗಳು

ಹಂಪಿ ಉತ್ಸವದಲ್ಲಿ ಡಾಲಿ ಧನಂಜಯ್ ಘರ್ಜನೆ : ಜನರ ಕೇಕೆ ಹಾಗೂ ಶಿಳ್ಳೆಯಲ್ಲೇ ಶಿವ ಕಾಣುತ್ತಾನೆ

Share
Share

ವಿಜಯನಗರ:
ಹಂಪಿ ಉತ್ಸವದಲ್ಲಿ ಭಾನುವಾರ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಪಾಲ್ಗೊಂಡು ಅಭಿಮಾನಿಗಳನ್ನು ರಂಜಿಸಿದರು.
ಎಂ.ಪಿ ಪ್ರಕಾಶ್ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಧನಂಜಯ್ ವೇದಿಕೆ ಮೇಲೆ ಬಡವ ರಾಸ್ಕಲ್ ಸಿನಿಮಾ ಗೀತೆ ಸಹ ಕಲಾವಿದರೊಂದಿಗೆ ಹೆಜ್ಜೆ ಹಾಕಿದರು.
ನಂತರ ಮಾತನಾಡಿದ ಡಾಲಿ ಧನಂಜಯ್ ಈ ಬಾರಿಯ ಶಿವರಾತ್ರಿಯನ್ನು ಹಂಪಿಯಲ್ಲಿ ಆಚರಿಸುತ್ತಿರುವುದು ಸಂತಸ ತಂದಿದೆ. ಜನರ ಕೇಕೆ, ಶಿಳ್ಳೇ, ಚಪ್ಪಾಳೆಯಲ್ಲಿ ಕಲಾವಿದರಾದ ನಮಗೆ ಶಿವ ಕಾಣುತ್ತಾನೆ. ಕೆಲಸದಲ್ಲಿಯೇ ನಾನು ಶಿವನನ್ನು ಕಾಣುತ್ತೆನೆ. ಕಾಲಾಂತರದಲ್ಲಿ ಪ್ರಯಾಣ ಮಾಡುವ ಅವಕಾಶ ಸಿಕ್ಕರೆ, ಸಮಯದಲ್ಲಿ ಹಿಂದೆ ಹೋಗಿ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಕಣ್ಣು ತುಂಬಿಕೊಳ್ಳಬೇಕು ಎಂಬುದು ನನ್ನ ಆಸೆಯಾಗಿದೆ ಎಂದು ಹೇಳಿದರು.
‘ಬೆಳಸಿದ್ದಲ್ಲಾ, ಬೆಳದಿದ್ದು, ನುಗ್ಗಿದ್ದು ನಾವು, ಹೊಡೆದಿದ್ದು ನಾವು’ ಎಂಬ ಟಗರು ಚಲನಚಿತ್ರದ ಪ್ರಸಿದ್ದ ಸಂಭಾಷಣೆಯನ್ನು ಧನಂಜಯ್ ಹೇಳುತ್ತಿದಂತೆ ಜನರ ಹರ್ಷೋದ್ಗಾರ ಮೊಳಗಿತು. ‘ನಿಯತ್ತಾಗಿ ಬಾಳುವ, ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ, ಬಡವರ ಮಕ್ಕಳು ಬೆಳೆಯಬೇಕು’ ಎಂದು ಡಾಲಿ ಧನಂಜಯ ತಮ್ಮ ನಿಲುವನ್ನು ಪುನರುಚ್ಛರಿಸಿದರು.
ಬ್ರಿಟೀಷರ ವಿರುದ್ಧ ಹೋರಾಡಿದ ಹಲಗಲಿ ಬೇಡರ ಐತಿಹಾಸಿಕ ಘಟನೆಗಳನ್ನು ಆಧರಿಸಿದ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಸೃಜನಶೀಲ ನಿರ್ದೇಶಕರ ಕೈ ಕೆಳಗೆ ಕೆಲಸ ಮಾಡುವ ಅವಕಾಶ ಲಭಿಸಿದೆ. ಉತ್ತಮ ಸಿನಿಮಾಗಳ ಮೂಲಕ ಜನರ ಮುಂದೆ ಬರುವುದಾಗಿ ಡಾಲಿ ಧನಂಜಯ್ ಹೇಳಿದರು. ಈ ವೇಳೆ ಜಿಲ್ಲಾಡಳಿತದ ವತಿಯಿಂದ ಧನಂಜಯ್ ಅವರನ್ನು ಸನ್ಮಾನಿಸಲಾಯಿತು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಕಲಬುರಗಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ

ಕಲಬುರಗಿ: ಕೊಟನೂರಿನ ಸೇಂಟ್ ಮೇರಿಸ್ ಶಾಲೆಯಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಅಲ್...

Homeಸುದ್ದಿಗಳು

ಕ್ರೀಡಾಕೂಟಗಳು ಸ್ಪರ್ಧೆಯಾಗದೆ,ಹಬ್ಬದ ಸಂಭ್ರಮವಾಗಲಿ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ.

ಹರಪನಹಳ್ಳಿ : ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಾಗದೆ, ಹಬ್ಬದ ಸಂಭ್ರಮ ಮನೆಮಾಡಬೇಕು ಎಂದು ಶಾಸಕ...

Homeಸುದ್ದಿಗಳು

ಸೆ.19ರಂದು ಹರಪನಹಳ್ಳಿಯಲ್ಲಿ ತಾಲ್ಲೂಕು ಮಟ್ಟದ ಪ್ರಜಾಸೇವಾ ಕಾರ್ಯಕ್ರಮ

ವಿಜಯನಗರ : ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ...

Homeಸುದ್ದಿಗಳು

ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ : ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ

ವಿಜಯನಗರ : ಸಾರ್ವಜನಿಕರು ತಮ್ಮ ದಿನನಿತ್ಯದ ಸಮಸ್ಯೆಗಳು, ಬೇಡಿಕೆಗಳು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಿಗಾಗಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.