Home ಸುದ್ದಿಗಳು  ಕ್ರಿಕೆಟ್ ಬೆಟ್ಟಿಂಗ್ ಕಡಿವಾಣಕ್ಕೆ ಆಗ್ರಹ : ಸಂತೋಷ ಗುಳೇದಹಟ್ಟಿ
ಸುದ್ದಿಗಳು

 ಕ್ರಿಕೆಟ್ ಬೆಟ್ಟಿಂಗ್ ಕಡಿವಾಣಕ್ಕೆ ಆಗ್ರಹ : ಸಂತೋಷ ಗುಳೇದಹಟ್ಟಿ

Share
Share

ಹರಪನಹಳ್ಳಿ : ತಾಲ್ಲೂಕಿನಲ್ಲಿ ಬೆಟ್ಟಿಂಗ್ ಮತ್ತು ಮಟ್ಕಾ ಜೂಜುಕೋರರ ಹಾವಳಿ ಹೆಚ್ಚಾಗಿದ್ದು  ಬುಕ್ಕಿಗಳನ್ನು ಗುರುತಿಸಿ ಗಡಿಪಾರು ಮಾಡಬೇಕ ಎಂದು ಸಿಪಿಐ ಎಂಎಲ್‍ ತಾಲ್ಲೂಕು ಕಾರ್ಯದರ್ಶಿ ಸಂತೋಷ ಗುಳೇದಹಟ್ಟಿ ಒತ್ತಾಯಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ತಾಲೂಕಿನಲ್ಲಿ ಕೆಲವು ಪುಡಾರಿಗಳು ಮತ್ತು ಗೂಂಡಾಗಳು ಬುಕ್ಕಿಗಳಾಗಿ ಅವತಾರ ಎತ್ತಿದ್ದಾರೆ. ಇವರ ಜಾಲಕ್ಕೆ ಸಿಲುಕಿ ಯುವಕರು, ದಿನಗೂಲಿ ಕಾರ್ಮಿಕರು, ಮಾತ್ರವಲ್ಲದೆ ಸರ್ಕಾರಿ ನೌಕರರು ಸಹ ಜೂಜಿನ ಗೀಳಿಗೆ ಬಲಿಯಾಗುತ್ತಿದ್ದಾರೆ. ಐಪಿಎಲ್ ಹುಚ್ಚಿನಿಂದಾಗಿ ಸಾಲದ ಸುಳಿಗೆ ಸಿಲುಕಿ, ಕಿರುಕುಳ ತಾಳಲಾರದೆ ಅನೇಕ ಯುವಕರು ತಮ್ಮ ಜೀವನವನ್ನೇ ಹಾಳುಮಾಡಿಕೊಂಡಿರುವ, ಕುಟುಂಬಗಳು ಬೀದಿಗೆ ಬಂದಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಐಪಿಎಲ್‍ ಬೆಟ್ಟಿಂಗ್ ಮತ್ತು ಮಟ್ಕಾ ದಂಧೆಕೋರರನ್ನು ಬಂಧಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

 

ಪೊಲೀಸ್ ಇಲಾಖೆಗೆ ಸಿಪಿಐ(ಎಂಎಲ್) ಆಗ್ರಹಗಳೇನು?

  • ಮುಂಜಾಗ್ರತಾ ಕ್ರಮ: ಐಪಿಎಲ್ ಆರಂಭಕ್ಕೂ ಮುನ್ನವೇ ಬುಕ್ಕಿಗಳ ಮೇಲೆ ನಿಗಾ ಇಡಬೇಕು.
  • ಗಡಿಪಾರಿಗೆ ಒತ್ತಾಯ: ತಾಲೂಕಿನಲ್ಲಿ ಜೂಜು ಆಡಿಸುವ ಬುಕ್ಕಿಗಳನ್ನು ಗುರುತಿಸಿ, ಐಪಿಎಲ್ ಟೂರ್ನಿ ಮುಗಿಯುವವರೆಗೂ ಅವರನ್ನು ಗಡಿಪಾರು ಮಾಡಬೇಕು.
  • ಕಠಿಣ ಕಾನೂನು ಕ್ರಮ: ಗೂಂಡಾ ಹಾಗೂ ಪುಡಾರಿತನದಿಂದ ಬೆಟ್ಟಿಂಗ್ ದಂಧೆ ನಡೆಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
  • ಗ್ಯಾಂಬ್ಲಿಂಗ್ ಮುಕ್ತ ತಾಲೂಕು: ಹರಪನಹಳ್ಳಿಯನ್ನು ಜೂಜು ಮುಕ್ತ ತಾಲೂಕನ್ನಾಗಿ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳು ಶ್ರಮಿಸಬೇಕು.

ಇದೇ ವೇಳೆ, “ಈ ಬೆಟ್ಟಿಂಗ್ ಜಾಲದಲ್ಲಿ ಇಲಾಖೆಯ ಕೆಲವು ಸಿಬ್ಬಂದಿಯೂ ಶಾಮೀಲಾಗಿರುವ ಬಗ್ಗೆ ಈ ಹಿಂದೆಯೂ ವರದಿಗಳಾಗಿವೆ. ಹೀಗಾಗಿ ಹಿರಿಯ ಅಧಿಕಾರಿಗಳು ಖುದ್ದು ಮುತುವರ್ಜಿ ವಹಿಸಿ ಈ ಜಾಲವನ್ನು ಭೇದಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಸಾರ್ವಜನಿಕರಿಗೆ ಎಚ್ಚರಿಕೆಯ ಕರೆ

ಯುವಕರು, ಜವಾಬ್ದಾರಿಯುತ ನೌಕರರು ಹಾಗೂ ಕಾರ್ಮಿಕರು ಯಾವುದೇ ಕಾರಣಕ್ಕೂ ಐಪಿಎಲ್ ಬೆಟ್ಟಿಂಗ್‌ನಂತಹ ಜೂಜಿನ ಗೀಳಿಗೆ ಬೀಳಬಾರದು. ಶ್ರಮದ ಹಣವನ್ನು ಉಳಿಸಿ, ತಮ್ಮ ಕುಟುಂಬವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕು ಎಂದು ಸಂತೋಷ್ ಗುಳದಟ್ಟಿ ಅವರು ಈ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

 

 

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರಸ್ತೆ ನಿರ್ಮಾಣಕ್ಕೆ ಜಾಗ ತ್ಯಾಗ ಮಾಡಿದ ಗ್ರಾಮಸ್ಥರ ಋಣ ತೀರಿಸಲಾಗದು: ಶಾಸಕ ಹೆಚ್.ಆರ್. ಗವಿಯಪ್ಪ

ವಿಜಯನಗರ (ಹೊಸಪೇಟೆ) : ಊರಿನ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ತಮ್ಮ ಜಾಗ...

Homeಸುದ್ದಿಗಳು

ಕೊಪ್ಪಳ : ಪ್ರತಿಭಾ ಪುರಸ್ಕಾರಕ್ಕೆ ಬನ್ನಿ

ಹರಪನಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲೂಕು ಘಟಕದ ವತಿಯಿಂದ 2026-27ನೇ ಸಾಲಿನ...

Homeಸುದ್ದಿಗಳು

ಜಿಲ್ಲೆಯ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಶೇ.100 ಇ-ಫಾರ್ಮ್ ವಿತರಣೆ ಪೂರ್ಣ

ವಿಜಯನಗರ (ಹೊಸಪೇಟೆ)  : ಜಿಲ್ಲೆಯ ಐದು ತಾಲೂಕಿನಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ...

Homeಸುದ್ದಿಗಳು

ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ಆಯ್ಕೆಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : 2026ನೇ ಸಾಲಿಗೆ ಜಿಲ್ಲೆಯಲ್ಲಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟು ಜಿಲ್ಲಾ ಮಟ್ಟದ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.