ಹರಪನಹಳ್ಳಿ: ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಯುವಕನ ಲಾಕಪ್ ಡೆತ್ ಪ್ರಕರಣವನ್ನು ತೀವ್ರವಾಗಿ ಖಂಡಿಸಿ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ(ಎಂಎಲ್) ಹಾಗೂ ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘಗಳ ಮುಖಂಡರು ಆಗ್ರಹಿಸಿದ್ದಾರೆ. ಚಿತ್ತಾರಗೇರಿಯಲ್ಲಿರುವ ಮೃತ ಖಲೀಲ್ ಅವರ ಮನೆಗೆ ಬೇಟಿಕೊಟ್ಟು ಕುಟುಂಬದವರಿಗೆ ಸಾಂತ್ವನ ಹೇಳಿದರು. ಪೊಲೀಸರ ಹಲ್ಲೆಯಿಂದ ಠಾಣೆಯಲ್ಲಿ ಮೃತಪಟ್ಟಿದ್ದ ಖಲೀಲ್ ಅವರ ಕುಟುಂಬಕ್ಕೆ...