Home ಕೃಷಿ ರೇಷ್ಮೆ ಬೆಳೆಗಾರರಿಗೆ ಸಲಕರಣೆ, ಸ್ಮಾರ್ಟ್ ಕಾರ್ಡ್ ವಿತರಣೆ
ಕೃಷಿ

ರೇಷ್ಮೆ ಬೆಳೆಗಾರರಿಗೆ ಸಲಕರಣೆ, ಸ್ಮಾರ್ಟ್ ಕಾರ್ಡ್ ವಿತರಣೆ

Share
harapanahalli-silk-farmers-equipment-smart-card-distribution-latha-mallikarjun
Share

ಹರಪನಹಳ್ಳಿ : ತಾಲ್ಲೂಕಿನಲ್ಲಿ ರೇಷ್ಮೆ ಕೃಷಿ ಲಾಭದಾಯಕವಾಗಿ ಬೆಳೆಯುತ್ತಿದ್ದು, ಬೆಳೆಗಾರರಿಗೆ ಅಗತ್ಯ ಪ್ರೋತ್ಸಾಹ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹರಪನಹಳ್ಳಿ ಕ್ಷೇತ್ರದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ತಿಳಿಸಿದರು.

ತಾಲ್ಲೂಕಿನ ರೇಷ್ಮೆ ಇಲಾಖೆ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ರೇಷ್ಮೆ ಬೆಳೆಗಾರರಿಗೆ ಸಾಕಾಣಿಕೆ ಸಲಕರಣೆ ಹಾಗೂ ಸೋಂಕು ನಿವಾರಕಗಳನ್ನು ವಿತರಿಸಿ ಅವರು ಮಾತನಾಡಿದರು.

ರೇಷ್ಮೆ ಉಪನಿರ್ದೇಶಕ ಹರ್ಷ ಎಸ್.ಎ., ಮಾತನಾಡಿ, ಪ್ರಸ್ತುತ 1,050 ರೇಷ್ಮೆ ಬೆಳೆಗಾರರು ಇದ್ದು, ಸುಮಾರು 875 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಕೃಷಿ ವಿಸ್ತರಿಸಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಗೂಡಿಗೆ ₹ 700 ರಿಂದ ₹ 800 ರವರೆಗೆ ಉತ್ತಮ ಧಾರಣೆ ಸಿಗುತ್ತಿರುವುದು ರೈತರಲ್ಲಿ ಉತ್ಸಾಹ ಮೂಡಿಸಿದೆ ಎಂದು  ಮಾಹಿತಿ ನೀಡಿದರು.

‘ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ’ ಯೋಜನೆಯಡಿ ಇ.ಬೇಬಿನಹಳ್ಳಿ ಗ್ರಾಮದ ರೇಷ್ಮೆ ಬೆಳೆಗಾರ ಬಿ. ಬಸವರಾಜ ಸೇರಿ ಹಲವು ರೈತರಿಗೆ ಸ್ಮಾರ್ಟ್ ಕಾರ್ಡ್‌ ವಿತರಿಸಲಾಯಿತು. ತಾಲ್ಲೂಕು ರೇಷ್ಮೆ ನಿರೀಕ್ಷಕ ಕೆ. ನಾಗರಾಜ, ಸಿಬ್ಬಂದಿ ಎಚ್.ಎನ್. ಅಭಿಷೇಕ್, ಎಸ್. ಕುಮಾರಸ್ವಾಮಿ ಹಾಗೂ ರೈತರು ಉಪಸ್ಥಿತರಿದ್ದರು.

 

 

Share

Leave a comment

Leave a Reply

Your email address will not be published. Required fields are marked *

Related Articles
myduru formers
Homeಕೃಷಿ

400 ಕೆವಿ ವಿದ್ಯುತ್ ಗೋಪುರ ನಿರ್ಮಾಣಕ್ಕೆ ರೈತರ ತೀವ್ರ ವಿರೋಧ 

ಹರಪನಹಳ್ಳಿ: ಜಮೀನುಗಳಲ್ಲಿ 400 ಕೆವಿ ವಿದ್ಯುತ್ ಟವರ್ (ಗೋಪುರ) ನಿರ್ಮಿಸುವ ಸರ್ಕಾರದ ಯೋಜನೆಗೆ ಹರಪನಹಳ್ಳಿ ಹಾಗೂ...

sunflower
ಕೃಷಿಸುದ್ದಿಗಳು

ವಿಜಯನಗರ ಜಿಲ್ಲೆಯ ಎಲ್ಲೆಲ್ಲಿ ಸೂರ್ಯಕಾಂತಿ ಖರೀದಿಸುತ್ತಾರೆ ?

ವಿಜಯನಗರ (ಹೊಸಪೇಟೆ) :   ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿನ ಹಿಂಗಾರು...

RAIN DAMAGES
ಕೃಷಿ

ಹರಪನಹಳ್ಳಿಯಲ್ಲಿ ವೀಕೆಂಡ್ ಬಿರುಗಾಳಿ ಮಳೆಯ ಆರ್ಭಟ: ತತ್ತರಿಸಿದ ಹಳ್ಳಿಗಳು!

ಹರಪನಹಳ್ಳಿ: ತಾಲ್ಲೂಕಿನಲ್ಲಿ ಶನಿವಾರ ಸಂಜೆ ದಿಢೀರ್‌ ಅಪ್ಪಳಿಸಿದ ರಭಸದ ಬಿರುಗಾಳಿ ಮತ್ತು ಧಾರಾಕಾರ ಮಳೆಗೆ ಜನಜೀವನ...

kodihalli bheemanna
ಕೃಷಿ

ಪಕ್ಷಿಗಳಿಗೆ ನೀರುಣಿಸುವ ಕಾಯಕ ಮಾದರಿ : ಕೋಡಿಹಳ್ಳಿ ಭೀಮಪ್ಪ

ಹರಪನಹಳ್ಳಿ: ಜೆಸಿಐ ಸಂಸ್ಥೆಯು ಮರಗಿಡಗಳಲ್ಲಿ ಮಡಿಕೆಗಳನ್ನು ಕಟ್ಟಿ ಪಕ್ಷಿಗಳಿಗೆ ನೀರುಣಿಸುವ ಕಾಯಕದಲ್ಲಿ ತೊಡಗಿರುವುದು ಅತ್ಯಂತ ಮಾದರಿಯಾಗಿದೆ....

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.