ವಿಜಯನಗರ(ಹೊಸಪೇಟೆ) : 2026-27 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳಡಿ ಉಚಿತ ಮೀನುಗಾರಿಕೆ ಸಲಕರಣೆ ಕಿಟ್, ಮತ್ಸ್ಯ ಯೋಜನೆಯಡಿ ಮೊಪೆಡ್ ಖರೀದಿಗೆ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 17 ಕೊನೆಯ ದಿನವಾಗಿದೆ.
ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಯೋಜನೆಯಡಿ ಮೀನುಗಾರರಿಗೆ ರೂ.20 ಸಾವಿರ ವೆಚ್ಚದಲ್ಲಿ ಉಚಿತ ಮೀನುಗಾರಿಕೆ ಸಲಕರಣೆ ಕಿಟ್, ಮೀನು ಮಾರುಕಟ್ಟೆಗಳ ನಿರ್ಮಾಣ ಮತ್ತು ಮೀನು ಮಾರಾಟಕ್ಕೆ ಸಹಾಯ ಮತ್ಸ್ಯವಾಹಿನಿ ಯೋಜನೆಯಡಿ ಐಸ್ ಬಾಕ್ಸ್ ನೊಂದಿಗೆ ಮೊಪೆಡ್ ಖರೀದಿಸಲು ಸಹಾಯಧನ ನೀಡಲಾಗುವುದು.
ಜಿಲ್ಲೆಯಲ್ಲಿ ಬರುವ ಗ್ರಾಮ ಪಂಚಾಯಿತಿ ಕೆರೆಗಳಲ್ಲಿ ಮತ್ತು ಹೂವಿನಹಡಗಲಿ ತಾಲ್ಲೂಕಿನ ಸಿಂಗಟಲೂರು ಏತ ನೀರಾವರಿ ಬ್ಯಾರೇಜ್ ಕಂ ಡ್ಯಾಂನ ಹಿನ್ನೀರು ಪ್ರದೇಶದಲ್ಲಿ ಇಲಾಖೆ ನೊಂದಾಯಿತ ಖಾಸಗಿ ಮೀನು ಕೃಷಿಕರಿಂದ ಬಲಿತ ಬಿತ್ತನೆ ಮೀನುಮರಿ ಸರಬರಾಜು ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ಅಗತ್ಯ ದಾಖಲೆಗಳೊಂದಿಗೆ ಇಲಾಖೆ ವೆಬ್ಸೈಟ್ ವಿಳಾಸ https://vijayanagara.nic.in ನಲ್ಲಿ ಅಥವಾ ಆಯಾ ತಾಲ್ಲೂಕಿನ ಮೀನುಗಾರಿಕೆ ಇಲಾಖೆಯ ಕಛೇರಿಯ ಮುಖಾಂತರ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಭಂದಿಸಿದ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಮತ್ತು ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
- application invited
- August 17
- Fish Seed Supply
- Fisheries Department
- Free Fishing Kit
- Govt Schemes 2026
- Hoovina Hadagali
- hosapete
- Inland Fisheries
- Matsyavahini Scheme
- Moped Subsidy
- Singatalur Dam
- Sirisuddi
- VIJAYANAGARA
- ಅರ್ಜಿ ಆಹ್ವಾನ
- ಆಗಸ್ಟ್ 17
- ಉಚಿತ ಮೀನುಗಾರಿಕೆ ಕಿಟ್
- ಒಳನಾಡು ಮೀನುಗಾರಿಕೆ
- ಮತ್ಸ್ಯವಾಹಿನಿ ಯೋಜನೆ
- ಮೀನುಗಾರಿಕೆ ಇಲಾಖೆ
- ಮೀನುಮರಿ ಸರಬರಾಜು
- ಮೊಪೆಡ್ ಸಹಾಯಧನ
- ವಿಜಯನಗರ
- ಸರ್ಕಾರಿ ಯೋಜನೆಗಳು 2026
- ಸಿಂಗಟಲೂರು ಡ್ಯಾಂ
- ಸಿರಿಸುದ್ದಿ
- ಹೂವಿನಹಡಗಲಿ
- ಹೊಸಪೇಟೆ
Leave a comment