Home ಸುದ್ದಿಗಳು ಕರ್ನಾಟಕ ಸಮರ ಸೇನೆ : ರಾಜ್ಯ ಘಟಕ ಪುನರ್  ರಚನೆ
ಸುದ್ದಿಗಳು

ಕರ್ನಾಟಕ ಸಮರ ಸೇನೆ : ರಾಜ್ಯ ಘಟಕ ಪುನರ್  ರಚನೆ

Share
ಕರ್ನಾಟಕ ಸಮರ ಸೇನೆ, ದಾವಣಗೆರೆ
Share

ದಾವಣಗೆರೆ : ಹಲವಾರು ವರ್ಷಗಳಿಂದ ಕನ್ನಡ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ಸಮರ ಸೇನೆಯು ಕನ್ನಡ ನಾಡು ನುಡಿಯ ಸೇವೆಗೆ ಸದಾ  ಮುಂಚೂಣಿಯಲ್ಲಿದೆ. ಸಂಘಟನೆ ಕಾರ್ಯಕ್ರಮಗಳನ್ನು ಇನ್ನೂ ಚುರುಕುಗೊಳಿಸುವ ಹಾಗೂ ರಾಜ್ಯಾದ್ಯಂತ ಪರಿಣಾಮ ಕಾರಿಯಾಗಿ ವಿಸ್ತರಿಸುವ ಉದ್ದೇಶದಿಂದ ರಾಜ್ಯ ಘಟಕವನ್ನು ಪುನರ್ರ್‍ಅಚನೆ ಮಾಡಲಾಗಿದೆ” ಎಂದು ಕರ್ನಾಟಕ ಸಮರ ಸೇನೆಯ ಸಂಸ್ಥಾಪಕ ಕಾರ್ಯಧ್ಯಕ್ಷ  ಬಿ ವಾಸುದೇವ ತಿಳಿಸಿದರು.

ದಾವಣಗೆರೆಯಲ್ಲಿ ಹಲವರನ್ನು ಸಂಘಟನೆಗೆ ಬರಮಾಡಿಕೊಳ್ಳುವ ಮೂಲಕ ಮಾತನಾಡಿದ ಅವರು,”ಕರ್ನಾಟಕ ಸಮರ ಸೇನೆಯ ರಾಜ್ಯ ಘಟಕವನ್ನು ಮರು ರಚನೆ ಮಾಡಲಾಗಿದ್ದು ಈ ಹಿಂದೆ ಕಾರ್ಯ ನಿರ್ವಹಿಸಿದ ಹಲವು ಪದಾಧಿಕಾರಿಗಳು ಸೇರಿದಂತೆ ರಾಜ್ಯಾದ್ಯಂತ ಸಂಘಟನೆಯನ್ನು ವಿಸ್ತರಿಸುವ ಉದ್ದೇಶದಿಂದ ಹೊಸಬರು ಸೇರಿದಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪುನರ್ರ್‍ಅಚನೆ ಮಾಡಲಾಗಿದೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಮಾಜಿ ಸಚಿವ ಆರ್ ಶಂಕರ್, ರಾಜ್ಯ ಮಹಿಳಾ ಘಟಕ ಅಧ್ಯಕ್ಷರಾಗಿ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್ ಮುಂದುವರೆದಿದ್ದಾರೆ. ರಾಜ್ಯ ಉಪಾಧ್ಯಕ್ಷರಾಗಿ ಪತ್ರಕರ್ತ ಎಚ್.ಎನ್. ಪ್ರಕಾಶ್, ಸೈಯದ್ ರಿಯಾಜ್,ವೈಭಾಗ್ಯದೇವಿ, ಶಿವಪುತ್ರಪ್ಪ ಪಾಟೀಲ್, ಆರ್ ಅಬ್ದುಲ್ ಅವರನ್ನು ಆಯ್ಕೆ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ವಿನಯ್ ಚಿಕ್ಕಂದವಾಡಿ, ರಾಜ್ಯ ಕಾರ್ಯದರ್ಶಿಗಳಾಗಿ ಬಿ ರೇವಣಸಿದ್ದಪ್ಪ,  ಅಲ್ಲಾಭಕ್ಷಿ, ಬೀಬಿ ಹಾಜಿರ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ಜಮಾಲುದ್ದೀನ್ ಮೂಲಿಮನಿ,ಗಿರೀಶ್ ಎನ್ ಹೆಗಡೆ, ವೀರಯ್ಯ ಸ್ವಾಮಿ,ಪ್ರಕಾಶ್ ಹರಿಹರ, ಕಾರ್ಯ ನಿರ್ವಹಿಸಲಿದ್ದಾರೆ. ಕರ್ನಾಟಕ ಸಮರ ಸೇನೆಯ ನಿರ್ದೇಶಕ,ಕಾನೂನು ಸಲಹೆಗಾರರಾಗಿರಾಗಿ ವಕೀಲ ನಾಗರಾಜ್ ಹಲವಾಗಲು, ನಿರ್ದೇಶಕರಾಗಿ ಅಹಮದ್ ಶರೀಫ್, ಮಂಜುಳಾ ಬೆಣ್ಣಿ, ಸುನಂದಾ ಸುಂಕದಕಟ್ಟಿ ಹಾಗೂ ಸೈಯದ್ ಫಾಜಿಲ್   ಅವರನ್ನು ನಿಯೋಜಿಸಲಾಗಿದೆ” ಎಂದು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಹರಪನಹಳ್ಳಿ : ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ 

ಪ್ರಜಾಸೇವ ಆಂದೋಲನ ಜನರ ಹೃದಯಕ್ಕೆ ಮುಟ್ಟುವಂತಿರಲಿ ಹರಪನಹಳ್ಳಿ :  ಹಿಂದೆ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಭರವಸೆಯಿಲ್ಲದೆ...

Homeಸುದ್ದಿಗಳು

ಬಾಲಕನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ 

ಹೊಸಪೇಟೆ (ವಿಜಯನಗರ ಜಿಲ್ಲೆ ) : ಏಳು ವರ್ಷದ ಬಾಲಕನನ್ನು ಅಪಹರಿಸಿ ಕಾಲುವೆಗೆ ಎಸೆದು ಕೊಲೆ...

Homeಸುದ್ದಿಗಳು

ಜೆಡಿಎಸ್ ಅಧ್ಯಕ್ಷರಾಗಿ ವಿ. ಮಲ್ಕಪ್ಪ ಆಯ್ಕೆ

ಹರಪನಹಳ್ಳಿ : ತಾಲ್ಲೂಕು ಜಾತ್ಯಾತೀತ ಜನತಾದಳದ (ಜೆಡಿಎಸ್) ನೂತನ ಅಧ್ಯಕ್ಷರಾಗಿ ತಾವರೆಗೊಂದಿ ಗ್ರಾಮದ ವಿ. ಮಲ್ಕಪ್ಪ...

Homeಸುದ್ದಿಗಳು

ಮಕ್ಕಳಿಗೆ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರ ನೀಡುವ ಹೊಣೆ ಎಲ್ಲರದ್ದು: ಪ್ರಾಂಶುಪಾಲ ಡಾ. ಎಂ. ಸುರೇಶ್

ಹರಪನಹಳ್ಳಿ : 'ಇಂದಿನ ಮಕ್ಕಳಿಗೆ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುವ ಹೊಣೆಯನ್ನು ಪ್ರತಿಯೊಬ್ಬರೂ ಹೊರಬೇಕು'...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.