ಹರಪನಹಳ್ಳಿ: ಪರಿಸರವೇ ನಮ್ಮ ಜೀವನದ ಆಧಾರ. ಮರಗಳು, ನೀರು, ಗಾಳಿ ಮತ್ತು ಪ್ರಕೃತಿಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಭೂಗೋಳ ಶಾಸ್ತ್ರದ ಉಪನ್ಯಾಸಕ ಹೆಚ್. ಶಿವಾನಂದ ಹೇಳಿದರು.
ಪಟ್ಟಣದ ಎಚ್ ಪಿ ಎಸ್ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ “ವಿಶ್ವ ಪರಿಸರ ದಿನಾಚರಣೆಯ”ಕಾರ್ಯಕ್ರಮವನ್ನುಸಸಿ ನೆಟ್ಟು ಅವರು ಮಾತನಾಡುತ್ತಾ
ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪರಿಸರ ಸಂರಕ್ಷಣೆಯ ಮಹತ್ವವನ್ನು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.
ಪರಿಸರವು ನಮ್ಮ ಜೀವನದ ಆಧಾರವಾಗಿದೆ. ಗಾಳಿ, ನೀರು, ಮಣ್ಣು, ಮರಗಳು ಹಾಗೂ ಜೀವಜಾಲಗಳು ಪರಿಸರದ ಅವಿಭಾಜ್ಯ ಅಂಗಗಳಾಗಿವೆ. ಆದರೆ ಇಂದು ಮಾನವನ ಅತಿಯಾದ ಚಟುವಟಿಕೆಗಳಿಂದ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಅರಣ್ಯನಾಶ, ಪ್ಲಾಸ್ಟಿಕ್ ಬಳಕೆ, ಕೈಗಾರಿಕಾ ತ್ಯಾಜ್ಯ ಮತ್ತು ವಾಹನಗಳಿಂದ ಹೊರಬರುವ ಹೊಗೆ ಪರಿಸರಕ್ಕೆ ಹಾನಿಯನ್ನು ಉಂಟುಮಾಡುತ್ತಿವೆ.
ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶಿವಗಂಗಮ್ಮ. ಪಿ ಮಾತನಾಡಿ ನಾವು ಹೆಚ್ಚು ಮರಗಳನ್ನು ನೆಡಬೇಕು, ನೀರನ್ನು ಮಿತವಾಗಿ ಬಳಸಬೇಕು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಮತ್ತು ಸ್ವಚ್ಛತೆಯನ್ನು ಕಾಪಾಡ ಬೇಕು,
“ಇಂದಿನ ಪರಿಸರ ಸಂರಕ್ಷಣೆ, ನಾಳಿನ ಸುಂದರ ಭವಿಷ್ಯಕ್ಕೆ ಭದ್ರ ಅಡಿಪಾಯ” ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಹಸಿರು
ಪರಿಸರ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತಿ ಉಪನ್ಯಾಸಕರಾದ ಬಸವರಾಜ್ ಸಿ.ಎಸ್, ಕೆ.ಬಿ ರವೀಂದ್ರ, ವೀರೇಶ್ ಎಂ.ಎಸ್, ಎಂ.ಬಿ ಗೌಡರ, ಸಂತೋಷ್ ಎಂ.ಇ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಮಂಜುನಾಥ್ ಮಾಳ್ಗಿ, ಗುರುಬಸವರಾಜ್. ಹೆಚ್, ಶಂಕ್ರಪ್ಪ ಹೆಚ್ , ನರೇಂದ್ರ.ಎಸ್,ಶ್ವೇತ ಎಂ.ಬಿ, ಅವಿನಾಶ್ ಡಿ.ಬಿ, ಮತ್ತಿತರರು ಉಪಸ್ಥಿತರಿದ್ದರು.
Leave a comment