ಹರಪನಹಳ್ಳಿ : ನಟರಾಜ ಕಲಾ ಭವನದಲ್ಲಿ ತಾಲ್ಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ ಜರುಗಿತು.
ಉದ್ಘಾಟಿಸಿ ಶಾಸಕಿ ಲತಾ ಮಲ್ಲಿಕಾರ್ಜುನ್ ಮಾತನಾಡಿ, ದೇಶದ ಸ್ವಾತಂತ್ರ್ಯ ಹಾಗೂ ನ್ಯಾಯಕ್ಕಾಗಿ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಅವರ ಹೋರಾಟ ಸ್ಮರಿಸಿದರು. ನಾವು ಮಾಡುವ ಕೆಲಸವನ್ನು ಜನ ಮೆಚ್ಚುವುದಕ್ಕಿಂತ ದೇವರು ಮೆಚ್ಚುವಂತೆ ಮಾಡಬೇಕು. ನಮ್ಮ ತಂದೆ ತೋರಿದ ಹಾದಿಯಲ್ಲೇ ನಮ್ಮ ಕಾರ್ಯಗಳು ಸಾಗುತ್ತಿವೆ. ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಂಡು ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಯಾರಿಗೂ ಅನ್ಯಾಯ ಆಗದಂತೆ ನ್ಯಾಯದ ಪರವಾಗಿ ಕೆಲಸ ಮಾಡೋಣ ಎಂದರು.
ಅತ್ಯುತ್ತಮ ಪ್ರಶ್ನೆಗಳನ್ನು ಕೇಳುತ್ತಿದ್ದರೆ ಮಾತ್ರ ಉತ್ತಮ ಸಮಾಜ ಕಟ್ಟಲು ಸಾಧ್ಯ. ಇಲ್ಲವಾದರೆ ನಾವು ಆರ್ಥಿಕ ಮತ್ತು ಸಾಮಾಜಿಕ ನ್ಯಾಯದಿಂದ ದೂರ ಉಳಿಯುತ್ತೇವೆ. ಪ್ರತಿಯೊಬ್ಬರೂ ಪ್ರಶ್ನಿಸುವ ಸಾಮರ್ಥ್ಯ ಹಾಗೂ ನಿರಂತರ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ರಾಜಕೀಯ ಭಿನ್ನಾಭಿಪ್ರಾಯ ಮರೆತು ಮಕ್ಕಳ ಭವಿಷ್ಯ ಕಟ್ಟುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ” ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಕನ್ನಡ ಪ್ರಾಧ್ಯಾಪಕ ಸತೀಶ ಪಾಟೀಲ್ ಮಾತನಾಡಿ, ಪ್ರತಿಯೊಬ್ಬರಲ್ಲೂ ವಿಶೇಷ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಸಮಾಜದ ಮುಂದೆ ತರುವ ಕೆಲಸವನ್ನು ಈ ಸಂಘಟನೆ ಮಾಡುತ್ತಿರುವುದು ಎಲ್ಲರಿಗೂ ಮಾದರಿ ಎಂದು ತಿಳಿಸಿದರು.
ಪಂಚಮಸಾಲಿ ಸಮಾಜದ ಮುಖಂಡ ವೀರಣ್ಣ ಮಾತನಾಡಿ, ಹರಪನಹಳ್ಳಿಯ ವೃತ್ತವೊಂದಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರಿಡಲು ಈಗಾಗಲೇ ಮನವಿ ಮಾಡಲಾಗಿದೆ. ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಹೆಸರಿನಲ್ಲಿ ಒಂದು ಬಾಲಕಿಯರ ವಸತಿ ನಿಲಯ ಮಾಡಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಜಿ.ಮನೋಹರ, ಪಂಚಮಸಾಲಿ ನೌಕರರ ಸಂಘದ ಅಧ್ಯಕ್ಷ ಜಿ.ಕರಿಬಸಪ್ಪ, ಮುಖಂಡರಾದ ಶಶಿಧರ್ ಪೂಜಾರ, ವೀರಣ್ಣ ಅಂಗಡಿ, ಕನ್ನಿಹಳ್ಳಿ ಪ್ರಭಾಕರ್, ಎಚ್.ನಾಗರಾಜ್ , ಪೂಜಾರ ವಿ. ಮಹೇಶ್, ಕರಿಬಸಪ್ಪ, ರಾಜೇಂದ್ರ, ಅರುಂಡಿ ನಾಗರಾಜ್, ಅಡವಿಹಳ್ಳಿ ಮಂಜುನಾಥ್, ಓಂಕಾರ ಗೌಡ, ಸತೀಶ್, ಕರಿಬಸವರಾಜ, ವಿನಯ ದಿವಾಕರ, ಚೆನ್ನನಗೌಡ, ಹೆಚ್. ಮಲ್ಲಿಕಾರ್ಜುನ, ರಾಜೇಂದ್ರ ಗೌಡ, ಜಿ.ಕೆ. ಮಲ್ಲಿಕಾರ್ಜುನ್, ಅರಸೀಕೆರೆ ಪಂಪಣ್ಣ, ಉಮಾ, ಅಡವಿಹಳ್ಳಿ ಬಸವರಾಜ, ವೀರಣ್ಣ , ಲಕ್ಷ್ಮಣ ಇತರರು ಉಪಸ್ಥಿತರಿದ್ದರು.
- Felicitation Program
- Harapanahalli
- HARAPANAHALLI NEWS
- Kittur Rani Chennamma
- MLA Latha Mallikarjun
- Nataraja Kala Bhavana
- Panchamasali Employees Association
- Pratibha Puraskar
- Satish Patil
- Talent Awards
- ಕಿತ್ತೂರು ರಾಣಿ ಚೆನ್ನಮ್ಮ
- ನಟರಾಜ ಕಲಾ ಭವನ
- ನಿವೃತ್ತ ನೌಕರರ ಸನ್ಮಾನ
- ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘ
- ಪ್ರತಿಭಾ ಪುರಸ್ಕಾರ
- ಲತಾ ಮಲ್ಲಿಕಾರ್ಜುನ್
- ಶಾಸಕಿ
- ಶೈಕ್ಷಣಿಕ ಸುದ್ದಿ
- ಸತೀಶ ಪಾಟೀಲ್
- ಹರಪನಹಳ್ಳಿ
Leave a comment