ಕಡಗಂಚಿ: ಗುಲ್ಬರ್ಗ ಧರ್ಮಕ್ಷೇತ್ರದ ದುಡಿಮೆಗಾರರ ಆಯೋಗ ಹಾಗೂ ಇಲ್ಲಿನ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌ನ ಜಂಟಿ ಆಶ್ರಯದಲ್ಲಿ, ಅಸಂಘಟಿತ ಕಾರ್ಮಿಕರಿಗಾಗಿ ನೋಂದಣಿ ಮತ್ತು ಸ್ಮಾರ್ಟ್ ಕಾರ್ಡ್ ವಿತರಣಾ ಶಿಬಿರವನ್ನು ಇತ್ತೀಚೆಗೆ ಯಶಸ್ವಿಯಾಗಿ ಆಯೋಜಿಸಲಾಯಿತು.
ದುಡಿಮೆಗಾರರ ಆಯೋಗದ ಕಾರ್ಯದರ್ಶಿ ಸಿಸ್ಟರ್ ಸಿಂತಿಯಾ ಅವರು ಗಿಡಕ್ಕೆ ನೀರು ಎರೆಯುವ ಮೂಲಕ ಈ ಜನಸ್ನೇಹಿ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಕುಮಾರಿ ಮಾಲಾಶ್ರೀ ಅವರು, ಕಾರ್ಮಿಕರ ಕಾರ್ಡ್ ಎಂದರೇನು? ಅದನ್ನು ಸುಲಭವಾಗಿ ಪಡೆಯುವುದು ಹೇಗೆ? ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು ಯಾವುವು? ಮತ್ತು ಈ ಸ್ಮಾರ್ಟ್ ಕಾರ್ಡ್‌ನಿಂದ ಕಾರ್ಮಿಕರಿಗೆ ಹಾಗೂ ಅವರ ಕುಟುಂಬಕ್ಕೆ ಏನೆಲ್ಲಾ ಸವಲತ್ತುಗಳು ದೊರೆಯಲಿವೆ ಎಂಬುದರ ಕುರಿತು ನೆರೆದಿದ್ದ ಕಾರ್ಮಿಕರಿಗೆ ಅತ್ಯಂತ ಸರಳವಾಗಿ ವಿವರಣೆ ನೀಡಿದರು. ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌ನ ನಿರ್ದೇಶಕ ಹಾಗೂ ಶಿಬಿರದ ರೂವಾರಿ ಫಾ. ವಿಲಿಯಂ ಮಿರಾಂದ ಮತ್ತು ಕಾರ್ಮಿಕ ಆಯೋಗದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ವಿಶೇಷ ಶಿಬಿರದಲ್ಲಿ ಸುಮಾರು 35ಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಂಡು ಯೋಜನೆಯ ಸದುಪಯೋಗ ಪಡೆದುಕೊಂಡರು. ಎಲ್ಲಾ ಅಗತ್ಯ ದಾಖಲೆಗಳನ್ನು ಸಮರ್ಪಕವಾಗಿ ತಂದಿದ್ದ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ಸಿದ್ಧಪಡಿಸಿ ವಿತರಿಸಲಾಯಿತು.
Leave a comment