ಹರಪನಹಳ್ಳಿ: 2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಮರು ಮೌಲ್ಯಮಾಪನದಲ್ಲಿ ನಗರದ ಕೆಸಿಎ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಅತ್ಯುನ್ನತ ಸಾಧನೆಗೈದಿದ್ದು, ರಾಜ್ಯಕ್ಕೇ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ
ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿನಿ ಸುರಭಿ ವಿ.ಎಚ್. ಅವರು ಪರೀಕ್ಷೆ-1ರ ಫಲಿತಾಂಶದಲ್ಲಿ 621 ಅಂಕಗಳನ್ನು ಗಳಿಸಿದ್ದರು. ನಂತರ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಇದೀಗ ಕನ್ನಡದಲ್ಲಿ 2 ಹಾಗೂ ಹಿಂದಿ ವಿಷಯದಲ್ಲಿ 2 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದಿದ್ದಾರೆ. ಈ ಮೂಲಕ ಒಟ್ಟು 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಮತ್ತೋರ್ವ ವಿದ್ಯಾರ್ಥಿನಿ ಪ್ರಾಂಜಲ ಬಿ. ಅವರು ಪರೀಕ್ಷೆ-1ರಲ್ಲಿ 623 ಅಂಕಗಳನ್ನು ಪಡೆದಿದ್ದರು. ಮರು ಮೌಲ್ಯಮಾಪನದಲ್ಲಿ ಇಂಗ್ಲಿಷ್ ವಿಷಯದಲ್ಲಿ 1 ಅಂಕ ಹೆಚ್ಚಾಗುವ ಮೂಲಕ ಒಟ್ಟು 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
- 625 Marks
- 625ಕ್ಕೆ 625 ಅಂಕ
- Harapanahalli
- Karnataka State Topper
- KCA English Medium School
- Pranjala B
- School Achievement
- Sirisuddi
- SSLC Exam 1
- SSLC Revaluation Results 2026
- Surabhi VH
- Vijayanagara district news
- ಎಸ್ಸೆಸ್ಸೆಲ್ಸಿ ಫಲಿತಾಂಶ 2026
- ಎಸ್ಸೆಸ್ಸೆಲ್ಸಿ ಮರುಮೌಲ್ಯಮಾಪನ
- ಕೆಸಿಎ ಆಂಗ್ಲ ಮಾಧ್ಯಮ ಶಾಲೆ
- ಪ್ರಾಂಜಲ ಬಿ
- ರಾಜ್ಯಕ್ಕೆ ಪ್ರಥಮ ಸ್ಥಾನ
- ವಿಜಯನಗರ ಜಿಲ್ಲೆ ಸುದ್ದಿ
- ಶೈಕ್ಷಣಿಕ ಸಾಧನೆ
- ಸುರಭಿ ವಿ ಎಚ್
- ಹರಪನಹಳ್ಳಿ
Leave a comment