ಹರಪನಹಳ್ಳಿ : ಮಳೆ ಕೊರತೆಯಾಗಿರುವ ಕಾರಣ ಬಿತ್ತನೆ ಮಾಡಿರುವ ಶೇ.33ರಷ್ಟು ಕಡ್ಡಾಯವಾಗಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಅಧಿಕಾರಿಗಳು ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ತಿಳಿಸಿದರು.
ನಗರದ ಡಾ.ಬಾಬು ಜಗಜೀವನ್ ರಾಮ್ ಭವನದಲ್ಲಿ ಗುರುವಾರ ನಡೆದ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಡಿವೈಎಸ್ಪಿ ಸಂತೋಷ್ ಚವ್ಹಾಣ್ ಮಾತನಾಡಿ, ಪೊಲೀಸ್ ಇಲಾಖೆಯ ಜೊತೆಗೆ ಸಾರ್ವಜನಿಕರು ಕೈ ಜೋಡಿಸಿದಾಗ ಮಾತ್ರ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಮಹಮ್ಮದ್ ಅಶ್ರಫ್ ಮಾತನಾಡಿ, ತಾಲ್ಲೂಕಿನಲ್ಲಿ ಶೇ.64ರಷ್ಟು ಕೊರತೆಯಾಗಿದೆ. ಶೇ.33ರಷ್ಟು ಮಾತ್ರ ಬಿತ್ತನೆಯಾಗಿದೆ. 6063 ರೈತರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ್ದಾರೆ. ಕೃಷಿ ಭಾಗ್ಯ ಯೋಜನೆಯಡಿ 12 ಕೃಷಿ ಹೊಂಡ ನಿರ್ಮಿಸಲಾಗಿದೆ. ಕೃಷಿ ಭಾಗ್ಯ ಯೋಜನೆಯಡಿ ರೂ. 10 ಲಕ್ಷ ಅನುದಾನ ಮುಂಜೂರಾಗಿದೆ ಎಂದರು.
ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎ,ಇ,ಇ ಮಾತನಾಡಿ, 295 ಜೆಜೆಎಂ ಕಾಮಗಾರಿ ಹಾಗೂ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ನೀರಿನ ಕೊರತೆ ಇರುವ ಗ್ರಾಮಗಳಲ್ಲಿ 34 ಖಾಸಗಿ ಕೊಳವೆಬಾವಿ ಬಾಡಿಗೆ ಪಡೆದು ನೀರು ಪೂರೈಸಲಾಗಿದೆ ಎಂದು ಸಭೆ ಗಮನ ಸೆಳೆದರು.
ತಹಶೀಲ್ದಾರ ಬಿ.ವಿ.ಗಿರೀಶ ಬಾಬು ಮಾತನಾಡಿ, ಕುಡಿಯುವ ನೀರಿನ ಬಾಡಿಗೆ ಹಣ ಮುಂಜೂರಾಗಿಲ್ಲ ಎನ್ನುವ ದೂರುಗಳು ಬಂದಿದ್ದು ಶೀಘ್ರ ವಿಲೇವಾರಿಪಡಿಸಲು ಸೂಚಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಅರವಿಂದ ಮಾತನಾಡಿ, ಉಚ್ಚಂಗಿದುರ್ಗದಲ್ಲಿ 1 ಮಲೇರಿಯಾ ಪ್ರಕರಣ ದಾಖಲಾಗಿದೆ. ಶಾಸಕಿ ಲತಾ ಮಲ್ಲಿಕಾರ್ಜುನ್ ಮಾತನಾಡಿ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸಬೇಕು ಸಿಡಿಪಿಒ ಮತ್ತು ಆರೋಗ್ಯಾಧಿಕಾರಿಗೆ ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ಮಾತನಾಡಿ, ತಾಲ್ಲೂಕಿಗೆ 3 ಕೋಟಿ ಅನುದಾನ ಶಾಲಾ ಉಪಕರಣ ಖರೀದಿಗೆ ಬಂದಿದೆ. ಕೆಲವು ಶಿಕ್ಷಕರು ವಿಶೇಷ ಮತದಾರರ ಪಟ್ಟಿ ಪ್ರಾರಂಭಕ್ಕು ಮುನ್ನ ಸರಿಯಾಗಿ ಶಾಲೆಗೆ ತೆರಳುತ್ತಿಲ್ಲ ಎನ್ನುವ ದೂರು ಕೇಳಿ ಬಂದಿದ್ದು, ಸೂಕ್ತ ಕ್ರಮ ವಹಿಸುವುದಾಗಿ ತಿಳಿಸಿದರು.
ಕೃಷಿ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿ ಸಭೆಗೆ ಬಾರದಿರುವುದಕ್ಕೆ ಶಾಸಕಿ ಲತಾ ಅವರು ಬೇಸರ ವ್ಯಕ್ತಪಡಿಸಿದರು. ಬಿಸಿಯೂಟ, ಮೊಟ್ಟೆ, ರಾಗಿ ಮಾಲ್ಟ್ ವಿತರಣೆ ಕುರಿತು ಚರ್ಚೆ ನಡೆಯಿತು. ಶಾಸಕಿ ಲತಾ ಮಲ್ಲಿಕಾರ್ಜುನ ಮಾತನಾಡಿ, ಬಿಸಿಯೂಟದಲ್ಲಿ ಗುಣಮಟ್ಟದ ತೊಗರಿಬೇಳೆ ಬಳಸಿ, ಕೋಳಿ ತಿನ್ನಲು ಯೋಗ್ಯವಿಲ್ಲದ ಬೇಳೆ ಪೂರೈಕೆ ಆದರೆ ತಡೆ ಹಿಡಿಯಿರಿ ಎಂದು ಸೂಚಿಸಿದರು.
ಬಾಬು ಜಗಜೀವನ್ ರಾಮ್ ಭವನ ಹೈಟೆಕ್ ಸ್ಪರ್ಶ ನೀಡಲಾಗಿದೆ. ಎಸ್ಸಿ, ಎಸ್ಟಿ ಸಮುದಾಯದವರಿಗೆ ರೂ. 50 ಸಾವಿರ ಬಾಡಿಗೆ, ಸಾಮಾನ್ಯ ವರ್ಗದವರಿಗೆ ರೂ. 75 ಸಾವಿರ ಬಾಡಿಗೆ ನಿಗಧಿ ಪಡಿಸಲಾಗಿದೆ ಎಂದು ಸಹಾಯಕ ನಿರ್ದೇಶಕ ಗಂಗಪ್ಪ ಸಭೆ ಗಮನ ಸೆಳೆದರು. ಪಶು ಸಂಗೋಪನೆ, ಮೀನುಗಾರಿಕೆ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಇಲಾಖೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು. ಸಭೆಯಲ್ಲಿ ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು, ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್.ಚಂದ್ರಶೇಖರ, ಪೌರಾಯುಕ್ತೆ ರೇಣುಕಾ ಎಸ್.ದೇಸಾಯಿ, ಸಿಪಿಐ ಮಹಾಂತೇಶ್ ಸಜ್ಜನ್ ಸೇರಿ ಹಲವರಿದ್ದರು.
- Agriculture Department
- Babu Jagjivan Ram Bhavan
- Crop Insurance
- Drinking Water
- Drugs Free Karnataka
- Harapanahalli
- KDP Meeting
- Latha Mallikarjun
- Mid Day Meals
- Sirisuddi
- Vijayanagara District
- ಕುಡಿಯುವ ನೀರು
- ಕೃಷಿ ಇಲಾಖೆ
- ಕೆಡಿಪಿ ಸಭೆ
- ಡ್ರಗ್ಸ್ ಮುಕ್ತ ಕರ್ನಾಟಕ
- ಬಾಬು ಜಗಜೀವನ್ ರಾಮ್ ಭವನ
- ಬಿಸಿಯೂಟ
- ಬೆಳೆ ವಿಮೆ
- ಲತಾ ಮಲ್ಲಿಕಾರ್ಜುನ
- ವಿಜಯನಗರ ಜಿಲ್ಲೆ
- ಸಿರಿಸುದ್ದಿ
- ಹರಪನಹಳ್ಳಿ
Leave a comment