Home ಗ್ರಾಮ ಒನ್ ಕೇಂದ್ರಗಳ ನಿರ್ವಹಣೆಗೆ ಅರ್ಜಿ ಆಹ್ವಾನ
Homeಸುದ್ದಿಗಳು

ಗ್ರಾಮ ಒನ್ ಕೇಂದ್ರಗಳ ನಿರ್ವಹಣೆಗೆ ಅರ್ಜಿ ಆಹ್ವಾನ

Share
Share

ವಿಜಯನಗರ  : ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಗ್ರಾಮ ಒನ್ ಕೇಂದ್ರಗಳ ನಿರ್ವಹಣೆಗಾಗಿ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ನವೆಂಬರ್ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.  ಜಿಲ್ಲೆಯ ಹೊಸಪೇಟೆ ತಾಲೂಕಿನ ಡಾಣಾಪುರ, ಹರಪನಹಳ್ಳಿ ತಾಲೂಕಿನ ಮೈದೂರು, ಉಚ್ಚಂಗಿದುರ್ಗ, ಹಗರಿಬೊಮ್ಮನಹಳ್ಳಿಯ ಬ್ಯಾಸಿಗಿದೇರಿ, ಮೋರಗೇರಿ, ಕೂಡ್ಲಿಗಿಯ ಗುಡೇಕೋಟೆ, ರಾಮಪುರ, ಕೊಟ್ಟೂರು ತಾಲೂಕಿನ ಅಲಬೂರು, ಹಡಗಲಿಯ ದೇವಗೊಂಡನಹಳ್ಳಿ ಒಟ್ಟು 9 ಗ್ರಾಮ ಒನ್ ಕೇಂದ್ರಗಳು ಖಾಲಿ ಇದ್ದು, ಇವುಗಳ ನಿರ್ವಹಣೆಗೆ ಆಸಕ್ತ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು.

ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು https://kal-mys.gramaone.karnataka.gov.in/index.php/    ವೆಬ್‌ಸೈಟ್ ಮೂಲಕ ಸಲ್ಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ನ.6 ರಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ಜಿಲ್ಲಾ ಪ್ರವಾಸ

ವಿಜಯನಗರ : ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ನವೆಂಬರ್ 6 ರಂದು ಮಧ್ಯಾಹ್ನ...

Homeಸುದ್ದಿಗಳು

36 ನೂತನ ಪೊಲೀಸ್ ವಸತಿ ಗೃಹಗಳ ಲೋಕಾರ್ಪಣೆ ಮಾಡಿದ ಸಚಿವ ಕೆ.ಎಸ್. ಬಸವಂತಪ್ಪ

ವಿಜಯನಗರ : ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಯ ವಸತಿ ಸಮಸ್ಯೆಗೆ ಮುಕ್ತಿ...

Homeಸುದ್ದಿಗಳು

ಬಂಜಾರ ಸಮುದಾಯದ ಸಾಮಾಜಿಕ ಜಾಗೃತಿ ಸಭೆ – ವರದಕ್ಷಿಣೆ ಮುಕ್ತ ತಾಂಡಾಗಳಿಗೆ ಮುಖಂಡರ ಶ್ರಮ

ಹರಪನಹಳ್ಳಿ: ತಾಲೂಕಿನ ಬಂಜಾರರು ವರದಕ್ಷಿಣೆ ಹಠಾವೋ-ತಾಂಡ ಬಚಾವೋ ಧ್ಯೇಯಗೆ ಒಗ್ಗೂಡಲು ಸಮುದಾಯದ ಮುಖಂಡರು ಕರೆ ನೀಡಿದರು. ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದ...

Homeಸುದ್ದಿಗಳು

ಸಚಿವ ಕೆ.ಎಸ್. ಬಸವಂತಪ್ಪ ಜಿಲ್ಲಾ ಪ್ರವಾಸ

ವಿಜಯನಗರ  : ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.