Home ಅಪರಾಧ ಹರಪನಹಳ್ಳಿ ಪೊಲೀಸ್ ಕಾರ್ಯಾಚರಣೆ
ಅಪರಾಧ

ಹರಪನಹಳ್ಳಿ ಪೊಲೀಸ್ ಕಾರ್ಯಾಚರಣೆ

Share
Harapanahalli-police-trace-mobile
Share

ಹರಪನಹಳ್ಳಿ :  ವಿವಿಧೆಡೆ ಕಳ್ಳತನವಾಗಿದ್ದ 35 ಮೊಬೈಲ್ ಗಳನ್ನು ಪತ್ತೆಹಚ್ಚಿರುವ ಹರಪನಹಳ್ಳಿ ಠಾಣೆ ಪೊಲೀಸರು ಸಾರ್ವಜನಿಕರಿಗೆ ಹಿಂತಿರುಗಿಸಿದರು.

2025ನೇ ಸಾಲಿನಲ್ಲಿ ನಗರದ ಬಸ್ ನಿಲ್ದಾಣ, ಸಂತೆ ಮಾರುಕಟ್ಟೆ ಸೇರಿ ಹಲವೆಡೆ ಮೊಬೈಲ್ ಕಳ್ಳತನವಾಗಿದ್ದವು. ಕಳೆದುಕೊಂಡ ಸಾರ್ವಜನಿಕರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಿಇಐಆರ್‍ ತಂತ್ರಾಂಶದ ಸಹಾಯದಿಂದ ರೂ. 4.50 ಲಕ್ಷ ಮೌಲ್ಯದ ಒಟ್ಟು 35 ಮೊಬೈಲ್‍ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬುಧವಾರ ವಾರಸುದಾರರಿಗೆ ಡಿವೈಎಸ್ಪಿ ಸಂತೋಷ್ ಚೌಹಾಣ್, ಸಿಪಿಐ ಮಹಾಂತೇಶ್ ಸಜ್ಜನ್ ಅವರು ಹಸ್ತಾಂತರಿಸಿದರು.

ಪತ್ತೆ ಕಾರ್ಯಾಚರಣೆ ಕರ್ತವ್ಯ ನಿರ್ವಹಿಸಿದ ಪಿಎಸ್ಐ ಶಂಭುಲಿಂಗ ಸಿ.ಹಿರೇಮಠ, ಅಪರಾಧ ವಿಭಾಗದ ಪಿಎಸ್ಐ ಮೀನಾಕ್ಷಿ, ಸಿಬ್ಬಂದಿ ಕೆ.ಎಂ.ಆನಂದ, ರವಿ ದಾದಾಪುರ, ಯು.ನಾಗರಾಜ್, ಠಾಣಾ ಬರಹಗಾರ ಕೆ.ಎಚ್.ಎಂ.ರಾಜಶೇಖರ, ಸಿಡಿಆರ್ ವಿಭಾಗದ ಕುಮಾರ ನಾಯ್ಕ ಅವರ ಶ್ರಮಕ್ಕೆ ಡಿವೈಎಸ್ಪಿ ಸಂತೋಷ್ ಹಾಗೂ ಸಿಪಿಐ ಮಹಾಂತೇಶ್ ಸಜ್ಜನ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles
Homeಅಪರಾಧ

ಹರಪನಹಳ್ಳಿ: ನಕಲಿ ದಾಖಲೆ ಸೃಷ್ಟಿಸಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಹರಪನಹಳ್ಳಿ : ನಕಲಿ ದಾಖಲೆ ಸೃಷ್ಟಿಸಿಕೊಂಡು ತನ್ನ ಹೆಸರಿಗೆ ಆಸ್ತಿ ಪತ್ರಗಳನ್ನು ಮಾಡಿಕೊಂಡು ಪರಾರಿಯಾಗಿದ್ದ 12...

Homeಅಪರಾಧ

ಪೊಲೀಸ್ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ : 4.57ಕೋಟಿ ಸ್ವತ್ತು ವಶ

ವಿಜಯನಗರ(ಹೊಸಪೇಟೆ) : 2025ರ ಜನವರಿ 1 ರಿಂದ ಜೂನ್ 30 ರವರೆಗೆ ಜಿಲ್ಲೆಯ್ಲಲಿ ಸ್ವತ್ತು ಕಳುವಾದ...

ಬಾಗಳಿಯಲ್ಲಿ ಬಾವಿಗೆ ಬಿದ್ದು ಬಾಲಕ ಸಾವು
Homeಅಪರಾಧ

ಬಾವಿಗೆ ಬಿದ್ದು ಬಾಲಕ ಸಾವು

ಹರಪನಹಳ್ಳಿ : ತಾಲೂಕಿನ ಬಾಗಳಿ ಗ್ರಾಮದ ಐತಿಹಾಸಿಕ ಕಲ್ಲೇಶ್ವರ ದೇವಸ್ಥಾನ ವೀಕ್ಷಣೆಗೆ ಬಂದಿದ್ದ 4ನೇ ತರಗತಿಯ...

sandeep kanivihalli
Homeಅಪರಾಧ

ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

ಹರಪನಹಳ್ಳಿ : ತಾಲೂಕಿನ ಕಣಿವಿಹಳ್ಳಿಯಲ್ಲಿ ನೀರು ತರಲು ಹೋಗಿದ್ದ ಬಾಲಕ ಸಂದೀಪ್ (15) ಕೊಳವೆಬಾವಿ ಬಳಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.