Home ಅಪರಾಧ ಉಚ್ಚಂಗಿದುರ್ಗ : ನಾಲ್ವರು ಕಳ್ಳರ ಸೆರೆ ಹಿಡಿದ ಪೊಲೀಸರು
ಅಪರಾಧ

ಉಚ್ಚಂಗಿದುರ್ಗ : ನಾಲ್ವರು ಕಳ್ಳರ ಸೆರೆ ಹಿಡಿದ ಪೊಲೀಸರು

Share
police-arrested-criminals-uchangidurga-arsikere
Share

ಹರಪನಹಳ್ಳಿ :  ತಾಲ್ಲೂಕಿನ ಉಚ್ಚಂಗಿದುರ್ಗ ಸಂತೆ ಮೈದಾನದ ಬಳಿ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಪ್ರತ್ಯೇಕ ಎರಡು ಗುಂಪಿನ ಆರೋಪಿಗಳನ್ನು ಪೊಲೀಸರು  ಭಾನುವಾರ ಬಂಧಿಸಿದ್ದಾರೆ.

ಗಮನ ಬೇರೆಡೆ ಸೆಳೆದು ವಂಚಿಸುತ್ತಿದ್ದ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಸಂತೆಬೆನ್ನೂರು ಗ್ರಾಮದ ಸಿದ್ದರಾಮ, ಪ್ರಕಾಶ್, ಜಯಮ್ಮ, ಕುರಿ ಕಳ್ಳತನ ಮಾಡುತ್ತಿದ್ದ ಕೂಡ್ಲಿಗಿ ತಾಲ್ಲೂಕು ಪಾಲಯ್ಯನ ಕೋಟೆಯ ಹನುಮಂತ ಬಂಧಿತ ಆರೋಪಿಗಳು. ಬಂಧಿತರಿಂದ 3.60 ಲಕ್ಷ ಬೆಲೆ ಬಾಳುವ ಚಿನ್ನಾಭರಣ, ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಜಫ್ತಿ ಮಾಡಲಾಗಿದೆ.

ಬಂಧಿತರಿಂದ ಕಳುವು ಮಾಡಿದ್ದ 3.60 ಲಕ್ಷ  ಬೆಲೆ ಬಾಳುವ ಬಂಗಾರದ ಆಭರಣ,ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಹಾಗೂ ರೂ. 1.30 ಲಕ್ಷ ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಡಿವೈಎಸ್ಪಿ ಸಂತೋಷ ಚೌಹಾಣ್, ಸಿಪಿಐ ಮಹಾಂತೇಶ ಸಜ್ಜನ್, ಪಿಎಸ್ಐ ವಿಜಯಕೃಷ್ಣ, ಸಿಬ್ಬಂದಿಯಾದ ರವಿ ದಾದಾಪುರ, ಮಹಾಂತೇಶ್ ಬಿಳಿಚೋಡು, ಆನಂದ, ದಾದಾಪೀರ, ಅಜ್ಜಪ್ಪ, ಎಚ್.ಹರೀಶ್ , ಗುರ್ಯನಾಯ್ಕ, ಕೆ.ಗುರುರಾಜ್, ಕುಮಾರ ನಾಯ್ಕ ಆರೋಪಿ ಸೆರೆ ತಂಡದಲ್ಲಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಅಪರಾಧ

ಹರಪನಹಳ್ಳಿ: ನಕಲಿ ದಾಖಲೆ ಸೃಷ್ಟಿಸಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಹರಪನಹಳ್ಳಿ : ನಕಲಿ ದಾಖಲೆ ಸೃಷ್ಟಿಸಿಕೊಂಡು ತನ್ನ ಹೆಸರಿಗೆ ಆಸ್ತಿ ಪತ್ರಗಳನ್ನು ಮಾಡಿಕೊಂಡು ಪರಾರಿಯಾಗಿದ್ದ 12...

Homeಅಪರಾಧ

ಪೊಲೀಸ್ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ : 4.57ಕೋಟಿ ಸ್ವತ್ತು ವಶ

ವಿಜಯನಗರ(ಹೊಸಪೇಟೆ) : 2025ರ ಜನವರಿ 1 ರಿಂದ ಜೂನ್ 30 ರವರೆಗೆ ಜಿಲ್ಲೆಯ್ಲಲಿ ಸ್ವತ್ತು ಕಳುವಾದ...

ಬಾಗಳಿಯಲ್ಲಿ ಬಾವಿಗೆ ಬಿದ್ದು ಬಾಲಕ ಸಾವು
Homeಅಪರಾಧ

ಬಾವಿಗೆ ಬಿದ್ದು ಬಾಲಕ ಸಾವು

ಹರಪನಹಳ್ಳಿ : ತಾಲೂಕಿನ ಬಾಗಳಿ ಗ್ರಾಮದ ಐತಿಹಾಸಿಕ ಕಲ್ಲೇಶ್ವರ ದೇವಸ್ಥಾನ ವೀಕ್ಷಣೆಗೆ ಬಂದಿದ್ದ 4ನೇ ತರಗತಿಯ...

sandeep kanivihalli
Homeಅಪರಾಧ

ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

ಹರಪನಹಳ್ಳಿ : ತಾಲೂಕಿನ ಕಣಿವಿಹಳ್ಳಿಯಲ್ಲಿ ನೀರು ತರಲು ಹೋಗಿದ್ದ ಬಾಲಕ ಸಂದೀಪ್ (15) ಕೊಳವೆಬಾವಿ ಬಳಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.