Home ಕೃಷಿ ತೌಡೂರು ಸಹಕಾರ ಸಂಘಕ್ಕೆ ಮರುಜೀವ : ವೈ.ಡಿ.ಅಣ್ಣಪ್ಪ
ಕೃಷಿ

ತೌಡೂರು ಸಹಕಾರ ಸಂಘಕ್ಕೆ ಮರುಜೀವ : ವೈ.ಡಿ.ಅಣ್ಣಪ್ಪ

Share
TODURU,SAHAKAR SANGA,YD ANNAPPA,DEVENDRAPPA,BDCC PRSIDENT
ಹರಪನಹಳ್ಳಿ ತಾಲ್ಲೂಕು ತೌಡೂರು ಗ್ರಾಮದಲ್ಲಿ ಜರುಗಿದ ಸಮಾರಂಭದಲ್ಲಿ ಸಂಘದ ಗೋದಾಮು ಮತ್ತು ವ್ಯಾಪಾರಿ ಮಳಿಗೆ ಉದ್ಘಾಟಿಸಲಾಯಿತು.
Share

ಹರಪನಹಳ್ಳಿ : ಸಹಕಾರ ಸಂಘಗಳ ಯಶಸ್ಸಿಗೆ ಆಡಳಿತ ಮಂಡಳಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೆಸ್ವಾಮಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ತೌಡೂರು ಗ್ರಾಮದಲ್ಲಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ, ಸಂಘದ ಗೋದಾಮು ಮತ್ತು ವ್ಯಾಪಾರಿ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಒಂದು ಗ್ರಾಮದಲ್ಲಿ ಶಾಲೆ, ಆಸ್ಪತ್ರೆ ಜೊತೆಗೆ ಸಹಕಾರ ಸಂಘವೂ ಇರಬೇಕು. ಸಹಕಾರ ಸಂಘದ ನಿರ್ವಹಿಸುವ ಆಡಳಿತ ಮಂಡಳಿ ಜವಾಬ್ದಾರಿ ಮರೆತರೆ ಜನರಿಗೆ ಅನ್ಯಾಯ ಆಗುತ್ತದೆ ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಮಾತನಾಡಿ, ತೌಡೂರು ಸಹಕಾರ ಸಂಘ ಮುಟ್ಟುಗೋಲು ಆಗಿ ಕಾಮಗಾರಿ ಅಪೂರ್ಣಗೊಂಡಿದ್ದವು. ಪುನಃ ಸಂಘಕ್ಕೆ ಮರುಜೀವ ಕೊಟ್ಟು ಅನ್ಯಾಯಕ್ಕೆ ಒಳಗಾದ ರೈತರಿಗೆ ನ್ಯಾಯ ಕಲ್ಪಿಸುವ ಪ್ರಯತ್ನ ಮಾಡಲಾಗಿದೆ. ನಷ್ಟದಲ್ಲಿರುವ ಸಹಕಾರ ಸಂಘದ ಏಳಿಗೆಗೆ ಪ್ರತಿಯೊಬ್ಬರು ಕೈಜೋಡಿಸಿ ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿದ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಸಹಕಾರ ಸಂಘಗಳು ಜಾತಿ, ಧರ್ಮ ಮುಕ್ತವಾಗಿರುವ ಅಗತ್ಯವಿದೆ ಎಂದರು. ಸಹಕಾರ ಸಂಘದ ಅಧ್ಯಕ್ಷ ಕೆ.ಜಿ.ಶಿವಯೋಗಿ ಅಧ್ಯಕ್ಷತೆ ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್, ಕೆ.ಪರಸಪ್ಪ, ಕೆ.ಮಂಜುನಾಥಯ್ಯ, ಎಂ.ವಿಜಯಕುಮಾರ, ಕೊಟ್ರಗೌಡ, ಕೆ.ಭರಮಪ್ಪ, ಪುಟ್ಟಣ್ಣ, ಎಸ್.ಕಾಮಪ್ಪ, ಪುತ್ರಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಗಮ್ಮ, ಕಾವಲಹಳ್ಳಿ ಶೇಖರಪ್ಪ, ಡಿ.ಸಿದ್ದಪ್ಪ, ರಾಝಾನಾಯ್ಕ, ಕೆಂಚಪ್ಪ, ರಾಮನಗೌಡ ಇದ್ದರು.

“ತೌಡೂರು ಸಹಕಾರ ಸಂಘ ಸೂಪರ್‍ಸಿಡ್ ಆಗಿತ್ತು. ನಾನು ನಿರ್ದೇಶಕನಾದ ಮೇಲೆ ತೌಡೂರು ಗ್ರಾಮಸ್ಥರಿಗೆ, ಗ್ರಾಹಕ ರೈತರಿಗೆ ಅನ್ಯಾಯ ಆಗಬಾರದು ವಿವಿದೋದ್ದೇಶ ಸಹಕಾರ ಸಂಘಕ್ಕೆ ಮರುಜೀವ ಕೊಡಲಾಗಿದೆ. ಪ್ರತಿಯೊಬ್ಬ ಗ್ರಾಹಕರು ಸಹಕರಿಸಿ ಸಹಕಾರ ಸಂಘ ಉಳಿಸಿ, ಬೆಳೆಸಬೇಕು”

ವೈ.ಡಿ.ಅಣ್ಣಪ್ಪ, ನಿರ್ದೇಶಕ, ಬಿಡಿಸಿಸಿ ಬ್ಯಾಂಕ್. ವಿಜಯನಗರ.

Share

Leave a comment

Leave a Reply

Your email address will not be published. Required fields are marked *

Related Articles
Homeಕೃಷಿ

ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ

ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂದು ಆಗ್ರಹಿಸಿ...

Homeಕೃಷಿ

ಜಿಲ್ಲೆಯಲ್ಲಿ ಭೀಕರ ಬರಛಾಯೆ: ಬರ ಅಧ್ಯಯನಕ್ಕೆ ಅಖಾಡಕ್ಕಿಳಿದ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ

ವಿಜಯನಗರ(ಹೊಸಪೇಟೆ) : ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ  ಜಿಲ್ಲೆಯಾದ್ಯಂತ ಬರ ಹಾಗೂ ಮಳೆ ಅಭಾವದ ಛಾಯೆ ಆವರಿಸಿದೆ....

Homeಕೃಷಿ

ತುಂಗಭದ್ರ ಜಲಾಶಯದ ನೀರು ಕೇವಲ ಕುಡಿಯಲು ಮಾತ್ರ  ರೈತರು ಪರ್ಯಾಯ ಬೆಳೆ ಆಶ್ರಯಿಸಿ : ಡಿಸಿ ಮನವಿ

ವಿಜಯನಗರ (ಹೊಸಪೇಟೆ) : ಮುಂಗಾರು ಮಳೆಯ ಕೊರತೆಯ ಹಿನ್ನೆಲೆಯಲ್ಲಿ ಜಲಾಶಯದ ನೀರಿನ ಮಟ್ಟ ಕ್ಷೀಣಿಸುತ್ತಿದೆ ಜನ...

ಮೀನು ಗಾರಿಕೆ ಇಲಾಖೆ
Homeಕೃಷಿ

ಮೀನುಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : 2026-27 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳಡಿ ಉಚಿತ ಮೀನುಗಾರಿಕೆ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.