ಹರಪನಹಳ್ಳಿ : ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ರೈತರು, ಗ್ರಾಹಕರಿಗೆ ಆರ್ಥಿಕ ಪ್ರಗತಿಗೆ ಸಹಕಾರಿ ಆಗಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಹೇಳಿದರು.
ತಾಲ್ಲೂಕಿನ ಅರಸೀಕೆರೆ ಗ್ರಾಮದ ಬಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಆಯೋಜಿಸಿದ್ದ ಬಿಡಿಸಿಸಿ ಬ್ಯಾಂಕ್ 106ನೇ ವರ್ಷದ ಸಂಸ್ಥಾಪನೆ ದಿನಾಚರಣೆ ಸಂಭ್ರಮಾಚರಣೆಯಲ್ಲಿ ಕೇಕ್ ಕತ್ತರಿಸಿ ಚಾಲನೆ ನೀಡಿ ಅವರು ಮಾತನಾಡಿದರು. ಬಿಡಿಸಿಸಿ ಬ್ಯಾಂಕ್ ನಿಂದ ಸಾವಿರಾರು ಜನರಿಗೆ ಅನುಕೂಲವಾಗಿದೆ. ಸಾಲ ಪಡೆದ ಗ್ರಾಹಕರು ಸಕಾಲಕ್ಕೆ ಮರುಪಾವತಿಸಿದರೆ, ತಮ್ಮ ಏಳ್ಗೆ ಮತ್ತು ಬ್ಯಾಂಕ್ ಏಳ್ಗೆ ಎರಡು ಸಮವಾಗಿ ಬೆಳೆಯುತ್ತವೆ ಎಂದು ಹೇಳಿದರು.
ಬ್ಯಾಂಕ್ ವ್ಯವಸ್ಥಾಪಕ ನಿರಂಜನ್ ಮಾತನಾಡಿ, ಅರಸೀಕೆರೆ ಶಾಖೆಯಿಂದ ಕೃಷಿ ಸಾಲ 37 ಕೋಟಿ, ಕೃಷಿಯೇತರ ಸಾಲ 10 ಕೋಟಿ ಒಟ್ಟು ರೂ.47 ಕೋಟಿ ಸಾಲ ಗ್ರಾಹಕರಿಗೆ ವಿತರಿಸಲಾಗಿದೆ. 2025 ಮಾರ್ಚ್ ಅಂತ್ಯಕ್ಕೆ ಶಾಖೆಯು ಒಟ್ಟು ₹ 2.36 ಕೋಟಿ ಲಾಭಗಳಿಸಿದೆ ಎಂದು ತಿಳಿಸಿದರು. ಮುಖಂಡರಾದ ಪ್ರಶಾಂತ ಪಾಟೀಲ್, ಪೂಜಾರ ಮರಿಯಪ್ಪ, ಕ್ಷೇತ್ರಾಧಿಕಾರಿ ಕೆ.ಎನ್.ಬಸವರಾಜ್ ಇತರರಿದ್ದರು.
Leave a comment