Home ಸುದ್ದಿಗಳು ಹರಪನಹಳ್ಳಿ ನ್ಯಾಯಾಲಯದಲ್ಲಿ ಗಮನಸೆಳೆದ ಲೋಕ ಅದಾಲತ್
ಸುದ್ದಿಗಳು

ಹರಪನಹಳ್ಳಿ ನ್ಯಾಯಾಲಯದಲ್ಲಿ ಗಮನಸೆಳೆದ ಲೋಕ ಅದಾಲತ್

Share
ಹರಪನಹಳ್ಳಿ ನ್ಯಾಯಾಲಯದಲ್ಲಿ ಗಮನಸೆಳೆದ ಲೋಕ ಅದಾಲತ್
Share

 ಹರಪನಹಳ್ಳಿ : ಇಲ್ಲಿಯ ನ್ಯಾಯಾಲಯ ಆವರಣದಲ್ಲಿ ಶನಿವಾರ ಜರುಗಿದ ಲೋಕ ಅದಾಲತ್ ನಲ್ಲಿ ಇತ್ಯರ್ಥಗೊಂಡಿರುವ 2123 ಪ್ರಕರಣಗಳ ಪೈಕಿ ಹೆಚ್ಚಿನ ಸಂಖ್ಯೆಯ ವ್ಯಾಜ್ಯಪೂರ್ವ ಪ್ರಕರಣಗಳ ವಾದಿ ಪ್ರತಿವಾದಿಗಳು ರಾಜೀಸಂಧಾನ ಮಾಡಿಕೊಂಡಿರುವುದು ಗಮನ ಸೆಳೆದಿದೆ.

ಹಿರಿಯ ಮತ್ತು ಕಿರಿಯ ನ್ಯಾಯಾಲಯದಲ್ಲಿ ಕೈಗೆತ್ತಿಕೊಂಡಿದ್ದ ಒಟ್ಟು 3317 ಪೈಕಿ ₹ 1.52 ಕೋಟಿ ಮೌಲ್ಯದ 2123 ಪ್ರಕರಣ ಇತ್ಯರ್ಥಗೊಂಡಿವೆ. ಹಿರಿಯ ಸಿವಿಲ್ ನ್ಯಾಯಧೀಶೆ ಆರ್.ಉಷಾರಾಣಿ ಅವರ ಪೀಠದಡಿ ನಡೆದ ಪರಸ್ಪರ ರಾಜೀಸಂಧಾನದಲ್ಲಿ ವ್ಯಾಜ್ಯಪೂರ್ವ 897 ಪ್ರಕರಣ ಪೈಕಿ ₹ 5.34 ಲಕ್ಷ ಮೌಲ್ಯದ 390 ಪ್ರಕರಣ ಪರಿಹರಿಸಲಾಗಿದೆ. ನ್ಯಾಯಾಲಯದಿಂದ ಕೈಗೆತ್ತಿಕೊಂಡಿದ್ದ  902 ಪೈಕಿ ₹ 63,89,510 ಮೌಲ್ಯದ 653 ಪ್ರಕರಣ ಇತ್ಯರ್ಪಡಿಸಲಾಗಿದೆ.

ಸಿವಿಲ್ ನ್ಯಾಯಧೀಶ ಎಸ್.ಪಿ.ಮನುಶರ್ಮಾ ಅವರು, ವ್ಯಾಜ್ಯಪೂರ್ವದ 428 ಕೈಗೆತ್ತಿಕೊಂಡಿದ್ದು, ಅದರಲ್ಲಿ  ₹ 12.08 ಲಕ್ಷ ಮೌಲ್ಯದ 243 ಪ್ರಕರಣಗಲ್ಲಿ ರಾಜಿ ಮಾಡಿಸಲಾಗಿದೆ. ನ್ಯಾಯಾಲಯದಿಂದ ಕೈಗೆತ್ತಿಕೊಂಡಿದ್ದ 1090 ಪ್ರಕರಣ ಪೈಕಿ, ₹ 82,26,028 ಮೌಲ್ಯದ 837 ಪ್ರಕರಣದಲ್ಲಿ ಗ್ರಾಹಕರು ರಾಜಿಮಾಡಿಕೊಂಡಿದ್ದಾರೆ. ಇವುಗಳಲ್ಲಿ ಮೋಟಾರು ಅಪಘಾತ, ಬ್ಯಾಂಕ್ ಸಾಲ, ವಿವಾಹ ವಿಚ್ಚೇದನ, ಆಸ್ತಿ ವಿವಾದ ಒಳಗೊಂಡಿವೆ ಎಂದು ನ್ಯಾಯಾಲಯ ಮೂಲಗಳು ತಿಳಿಸಿವೆ. ಲೋಕಅದಾಲತ್ ನಲ್ಲಿ ಹಿರಿಯ ವಕೀಲರುಗಳು, ಕಿರಿಯ ವಕೀಲರು, ವಕೀಲರ ಸಂಘದ ಪದಾಧಿಕಾರಿಗಳಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeರಾಜಕೀಯಸುದ್ದಿಗಳು

ಅಡವಿಹಳ್ಳಿಯಲ್ಲಿ ಬಸವೇಶ್ವರ ದೇವಸ್ಥಾನದ ಕಳಸಾರೋಹಣ

ಹರಪನಹಳ್ಳಿ: ಮೊಬೈಲ್ಗೆ ಹೇಗೆ ನೆಟ್ವರ್ಕ್ ಟವರ್ ಮುಖ್ಯವೋ, ಹಾಗೆಯೇ ದೇವಸ್ಥಾನದ ಗೋಪುರಕ್ಕೆ ಕಳಸ ಬಹುಮುಖ್ಯ, ದೇವಸ್ಥಾನಗಳು...

Homeಸುದ್ದಿಗಳು

ಕೋಟೆ ಅಂಜನೇಯ ದೇವಸ್ಥಾನ ಜಾಗ ಒತ್ತುವರಿ ತೆರವುಗೊಳಿಸದಿದ್ದರೆ ಹೋರಾಟದ ಎಚ್ಚರಿಕೆ

ಹರಪನಹಳ್ಳಿ (ವಿಜಯನಗರ ಜಿಲ್ಲೆ ) : ಪಾಳೆಗಾರ ರಾಜಸೋಮಶೇಖರ ನಾಯಕರ ಕಾಲದ ನಿರ್ಮಾಣವಾದ ಕೋಟೆ ಅಂಜನೇಯ...

ssm dvg
ಸುದ್ದಿಗಳು

ಶಾಮನೂರು ಶಿವಶಂಕರಪ್ಪ ಜನ್ಮದಿನ: ಜೂನ್‌ 17ಕ್ಕೆ  ಉಚಿತ ಸಾಮೂಹಿಕ ವಿವಾಹ  

ಹರಪನಹಳ್ಳಿ : ಮಾಜಿ ಶಾಸಕ ದಿವಂಗತ ಶಾಮನೂರು ಶಿವಶಂಕರಪ್ಪ ಅವರ 96ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಜೂನ್...

vijaya vikrama
Homeಸುದ್ದಿಗಳು

ದೇಶದ ಬದಲಾವಣೆಯಲ್ಲಿ ಪತ್ರಕರ್ತರ ಪಾತ್ರ ದೊಡ್ಡದು : ಕೋಡಿಹಳ್ಳಿ ಭೀಮಪ್ಪ

ಹರಪನಹಳ್ಳಿ : ಪತ್ರಿಕೋದ್ಯಮದಲ್ಲಿ ನಿಷ್ಠೆ, ಧೈರ್ಯ ಮತ್ತು ಪ್ರಾಮಾಣಿಕತೆ ಇದ್ದರೆ ಸಮಾಜದ ದಿಕ್ಕು ಬದಲಾಯಿಸಲು ಸಾಧ್ಯವಾಗುತ್ತದೆ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.