Home ದಾವಣಗೆರೆ ಹೆಸರುವಾಸಿಗೆ ಶಿವಶಂಕರಪ್ಪ ಕೊಡುಗೆ ಅಪಾರ
Homeರಾಜಕೀಯ

ದಾವಣಗೆರೆ ಹೆಸರುವಾಸಿಗೆ ಶಿವಶಂಕರಪ್ಪ ಕೊಡುಗೆ ಅಪಾರ

Share
ದಾವಣಗೆರೆ ಹೆಸರುವಾಸಿಗೆ ಶಿವಶಂಕರಪ್ಪ ಕೊಡುಗೆ ಅಪಾರ
Share

ಹರಪನಹಳ್ಳಿ : ದಾವಣಗೆರೆ ನಗರ ಪ್ರದೇಶವಾಗಿ, ಶಿಕ್ಷಣ ಕೇಂದ್ರವಾಗಿ ದೇಶದ ಗಮನ ಸೆಳೆಯುವಂತೆ ಮಾಡುವಲ್ಲಿ ಹಿರಿಯ ರಾಜಕಾರಣಿಯಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ಪಾತ್ರ ದೊಡ್ಡದು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶಾಮನೂರು ಶಿವಶಂಕರಪ್ಪ ಅವರ ಶ್ರದ್ಧಾಂಜಲಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ದಕ್ಷಿಣ ಭಾರತವೇ ತಿರುಗಿ ನೋಡುವಂತಹ ಶಿಕ್ಷಣ ಮತ್ತು ಉದ್ಯಮ ಸಾಮ್ರಾಜ್ಯ ಕಟ್ಟಿ ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ಅವರು ತಳಮಟ್ಟದಿಂದ ಕೆಲಸ ಮಾಡಿ, ಮರವಾಗಿ ಲಕ್ಷಾಂತರ ಜನತೆಗೆ ನೆರಳು ಕೊಟ್ಟಿದ್ದಾರೆ. ಅಂತಹ ಮಹನೀಯ ರಾಜಕಾರಣಿ ನಮಗೆಲ್ಲಾ ಆದರ್ಶವಾಗಿದ್ದಾರೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ. ಎಚ್.ಕೆ.ಹಾಲೇಶ ಮಾತನಾಡಿ, 10ನೇ ತರಗತಿ ಮಾತ್ರ ಓದಿದ್ದ ಶಿವಶಂಕರಪ್ಪ ಅವರು ಉದ್ದಿಮೆ, ಶಿಕ್ಷಣ ಕ್ಷೇತ್ರವನ್ನು ಕಟ್ಟಿ ಬೆಳೆಸುವ ಮೂಲಕ ದಾವಣಗೆರೆ ನಗರವನ್ನು ಕರ್ನಾಟಕದ ಮ್ಯಾಂಚೆಸ್ಟರ್ ಆಗಿಸುವಲ್ಲಿ ಪ್ರಮುಖರಾಗಿದ್ದಾರೆ. ಅವರು ಕಟ್ಟಿ ಬೆಳೆಸಿದ ಬಾಪೂಜಿ ವಿದ್ಯಾಸಂಸ್ಥೆ ಪ್ರಪಂಚದಲ್ಲಿಯೇ ಪ್ರಸಿದ್ಧಿಯಾಗಿದೆ ಎಂದು ಅವರ ಸಾಧನೆಗಳನ್ನು ವಿವರಿಸಿದರು.  ಸಾಧರ ಲಿಂಗಾಯತ  ಸಮಾಜದ ತಾಲ್ಲೂಕು ಅಧ್ಯಕ್ಷ ಗುಂಡಗತ್ತಿ ಬಂದೋಳ್ ಮಂಜುನಾಥ ಮಾತನಾಡಿ, ಶಿವಶಂಕರಪ್ಪ ಅವರಿ ಜನಕಲ್ಯಾಣ ಟ್ರಸ್ಟ್ ಸ್ಥಾಪಿಸಿ, ಬಡ ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ ಶಿಪ್ ಕೊಡಲು ರೂ.5 ಕೋಟಿ ಠೇವಣಿ ಇಟ್ಟಿದ್ದಾರೆ. ಇದರಿಂದ ಸಾವಿರಾರು ಮಕ್ಕಳು ವಿದ್ಯಾಭ್ಯಾಸದ ನೆರವು ಪಡೆದಿದ್ದಾರೆ. ಪತ್ರಕರ್ತರ ಮಕ್ಕಳಿಗಾಗಿ ರೂ.1 ಕೋಟಿ ಮೀಸಲಿಟ್ಟಿರುವುದು ಸಹ ಅವರ ಕಾಳಜಿಯನ್ನು ತೋರಿಸುತ್ತದೆ ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡ ಮುತ್ತಿಗಿ ಜಂಬಣ್ಣ, ಶುಕ್ರುಸಾಬ್,    ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ,  ವಾಲ್ಮೀಕಿ ನಾಯಕ ಸಮಾಜದ ಕಾರ್ಯದರ್ಶಿ ಎಚ್.ಕೆ.ಮಂಜುನಾಥ, ನಿವೃತ್ತ ಶಿಕ್ಷಕರಾದ ತೆಲಿಗಿ ಅಂಜಿನಪ್ಪ, ಬಾಲೇನಹಳ್ಳಿ ರೇವಣಸಿದ್ದಪ್ಪ, ಬೇಲೂರು ಸಿದ್ದೇಶ್ ಮಾತನಾಡಿದರು.   ಮುಖಂಡರಾದ ಎಸ್.ಶಿವಪ್ಪ, ಕಡಕೋಳ್ ನೂರುದ್ದೀನ್ , ಸತ್ತರ್ ಸಾಹೇಬ್,  ಭಾವಿಕಟ್ಟಿ ಭರ್ಮಪ್ಪ,  ಮಂಡಕ್ಕಿ ಸುರೇಶ, ತಳವಾರ ರಾಜಪ್ಪ, ಗುಂಡಿ ಮಂಜುನಾಥ, ಪಟ್ನಾಮದ ಪರುಶುರಾಮ,  ಗಿಡ್ಡಳ್ಳಿ  ನಾಗರಾಜ, ಮೈದೂರು ಮಾರುತಿ, ಕವಸರ ವಿಜಯಕುಮಾರ್, ರಾಯದುರ್ಗದ ವಾಗೀಶ, ಮ್ಯಾಕಿ ದುರುಗಪ್ಪ,  ದ್ಯಾಮಜ್ಜಿ ದಂಡ್ಯೆಪ್ಪ   ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರಸ್ತೆ ನಿರ್ಮಾಣಕ್ಕೆ ಜಾಗ ತ್ಯಾಗ ಮಾಡಿದ ಗ್ರಾಮಸ್ಥರ ಋಣ ತೀರಿಸಲಾಗದು: ಶಾಸಕ ಹೆಚ್.ಆರ್. ಗವಿಯಪ್ಪ

ವಿಜಯನಗರ (ಹೊಸಪೇಟೆ) : ಊರಿನ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ತಮ್ಮ ಜಾಗ...

Homeಅಪರಾಧ

ಹರಪನಹಳ್ಳಿ: ನಕಲಿ ದಾಖಲೆ ಸೃಷ್ಟಿಸಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಹರಪನಹಳ್ಳಿ : ನಕಲಿ ದಾಖಲೆ ಸೃಷ್ಟಿಸಿಕೊಂಡು ತನ್ನ ಹೆಸರಿಗೆ ಆಸ್ತಿ ಪತ್ರಗಳನ್ನು ಮಾಡಿಕೊಂಡು ಪರಾರಿಯಾಗಿದ್ದ 12...

Homeಸುದ್ದಿಗಳು

ಕೊಪ್ಪಳ : ಪ್ರತಿಭಾ ಪುರಸ್ಕಾರಕ್ಕೆ ಬನ್ನಿ

ಹರಪನಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲೂಕು ಘಟಕದ ವತಿಯಿಂದ 2026-27ನೇ ಸಾಲಿನ...

Homeಕೃಷಿ

ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ

ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂದು ಆಗ್ರಹಿಸಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.