ಕೊಟ್ಟೂರು : ಇಲ್ಲಿಯ ಗಂಗೋತ್ರಿ ಪದವಿಪೂರ್ವ ಕಾಲೇಜಿನಲ್ಲಿ ಮೇರಾ ಯುವ ಭಾರತ ಕಾರ್ಯಕ್ರಮ ಜರುಗಿತು.
ಕಿತ್ತೂರು ರಾಣಿ ಚೆನ್ನಮ್ಮ ಸ್ವ ಸಹಾಯ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮೇರಾ ಯುವ ಭಾರತ ಉದ್ದೇಶಗಳನ್ನು ವಿವರಿಸಲಾಯಿತು. ನಾರಾಯಣ ಅವರು ಮಾತನಾಡಿ, ಸುಕನ್ಯಾ ಸಮೃದ್ದಿ ಯೋಜನೆ, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸಂಸ್ಥೆಯ ರವಿ ಅವರು ಮಾತನಾಡಿ, ಪ್ರದಾನಮಂತ್ರಿ ಕಿಸಾನ್ ಯೋಜನೆ, ಮುದ್ರಾ ಯೋಜನೆಗಳಿಂದ ರೈತರು, ವ್ಯಾಪಾರಿಗಳಿಗೆ ಆಗಿರುವ ಲಾಭಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಕೊಟ್ರೇಶ್ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಶಿವು, ಭರತ್ ಹಾಗೂ ವಿದ್ಯಾರ್ಥಿಗಳಿದ್ದರು.
Leave a comment