Home ಸುದ್ದಿಗಳು ಹರಪನಹಳ್ಳಿ : ಜನವರಿ ಅಂತ್ಯಕ್ಕೆ ಹಿಂದೂ ಸಮ್ಮೇಳನ
ಸುದ್ದಿಗಳು

ಹರಪನಹಳ್ಳಿ : ಜನವರಿ ಅಂತ್ಯಕ್ಕೆ ಹಿಂದೂ ಸಮ್ಮೇಳನ

Share
ಹರಪನಹಳ್ಳಿ : ಜನವರಿ ಅಂತ್ಯಕ್ಕೆ ಹಿಂದೂ ಸಮ್ಮೇಳನ
Share

ಹರಪನಹಳ್ಳಿ :  ಇಲ್ಲಿಯ ತರಳಬಾಳು ಕಲ್ಯಾಣಮಂಟಪದಲ್ಲಿ ಜರುಗಿದ ಹಿಂದೂ ಸಮ್ಮೇಳನ ಸದಸ್ಯರ ಸಭೆಯಲ್ಲಿ ಜನವರಿ ಕೊನೆ ವಾರ ಹಿಂದೂ ಜಾಗೃತಿ ಸಮ್ಮೇಳನ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಆರ್‍.ಎಸ್.ಎಸ್. ದಕ್ಷಿಣ ಪ್ರಾಂತ ಬೌದ್ದಿಕ್ ಪಿ.ದುರ್ಗಣ್ಣ ಮಾತನಾಡಿ, ವೇದ ಉಪನಿಷತ್ತು, ಪುರಾಣಗಳಲ್ಲಿ ವೈಚಾರಿಕ ಕ್ರಾಂತಿ ಅಡಗಿದೆ. ಇದರಡಿ ಋಷಿಮುನಿಗಳು ಸರ್ವೆ ಜನ ಸುಖಿನೊ ಭವಂತು, ವಸುದೈವ ಕುಟುಂಬಕಂ ಎನ್ನುವ ತತ್ವಗಳನ್ನು ಪ್ರಚುರಪಡಿಸಿದರು. ಅಸಮಾನತೆ ಅಸ್ತ್ರವಾಗಿಸಿಕೊಂಡ ಬ್ರಿಟೀಷರು ದೇಶವನ್ನು ಆಕ್ರಮಿಸಿ 200 ವರ್ಷ ಆಳ್ವಿಕೆ ಮಾಡಿದರು.  ಅಖಂಡ ಹಿಂದೂಗಳಲ್ಲಿ ಒಗ್ಗಟ್ಟಿನ ಕೊರತೆ ಕಾರಣ ಅನಿಷ್ಠ ಪದ್ದತಿಗಳಾದ ಮೌಢ್ಯಾಚರಣೆಗಳನ್ನು ತೊಲಗಿಸಲು ಆಗುತ್ತಿಲ್ಲ. ಸಮಾನತೆಯು ಸಾಧ್ಯವಾಗುತ್ತಿಲ್ಲ ಎಂದರು.

ಅಖಂಡ ಹಿಂದೂಗಳಲ್ಲಿ ಒಗ್ಗಟ್ಟು ಗಳಿಸುವ ಉದ್ದೇಶದಿಂದ ಹಿಂದೂ ಜಾಗೃತಿ ಸಮ್ಮೇಳನ ಜರುಗುತ್ತಿವೆ. ಇವುಗಳ ಮೂಲಕ ಎಲ್ಲರನ್ನೂ ಒಂದೆಡೆ ಸೇರಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು. ಸುದೀರ್ಘ ಚರ್ಚೆ ಬಳಿಕ  ಹಿಂದೂ  ಸಮ್ಮೇಳನ ಸಮಿತಿ ರಚಿಸಲಾಯಿತು. ಹಿಂದೂ ಸಮ್ಮೇಳನ ಸಮಿತಿಗೆ ವಕೀಲರಾದ ಬೆಣ್ಣಿಹಳ್ಳಿ ರಾಮನಗೌಡ (ಅಧ್ಯಕ್ಷ), ಕೆ.ಸಿ.ಗಂಗಾಧರ,  ಎಚ್.ಎ.ಸುರೇಂದ್ರ ಬಾಬು (ಕಾರ್ಯದರ್ಶಿ), ಎಸ್.ಎನ್.ಸುಬ್ರಹ್ಮಣ್ಯ (ಖಜಾಂಚಿ) ಅವರು ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಕಿರಣ್ ಶಾನಬೋಗ, ರವಿನಾಯ್ಕ, ಓಂಕಾರಗೌಡ, ಪಶುಪತಿ, ಎಚ್.ಎಂ.ಅಶೋಕ, ಕೃಷ್ಣಮೂರ್ತಿ, ದೇವರಾಜ, ಸಪ್ನ ಮಲ್ಲಿಕಾರ್ಜುನ, ಕುಸುಮ ಜಗದೀಶ್ ಇದ್ದರು.

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ನೀರು ಪೋಲು: ಕುಡಿಯುವ ನೀರಿನ ಸಂಪರ್ಕ ಕಡಿತ, ಮಾಲೀಕರಿಗೆ ದಂಡ

ದಾವಣಗೆರೆ : ನಗರದಲ್ಲಿ ಕುಡಿಯುವ ನೀರನ್ನು ಪೋಲು ಮಾಡುತ್ತಿದ್ದ ಮನೆಗಳ ವಿರುದ್ಧ ಮಹಾನಗರ ಪಾಲಿಕೆ ಕಠಿಣ ಕ್ರಮ...

Homeಸುದ್ದಿಗಳು

ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026: 12,97, 419  ನಮೂನೆಗಳ  ಗಣಕೀಕರಣ

ದಾವಣಗೆರೆ : ಆಗಸ್ಟ್‌ 06 (ಕರ್ನಾಟಕ ವಾರ್ತೆ): ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿ ಸಮಗ್ರ...

Homeಸುದ್ದಿಗಳು

ರೈತರು ಆಧುನಿಕ ತೋಟಗಾರಿಕೆ ಪದ್ದತಿಯನ್ನು ಅಳವಡಿಸಿಕೊಳ್ಳುವಂತೆ ಶಾಸಕ ಸಮರ್ಥ ಶಾಮನೂರು ಕರೆ

ದಾವಣಗೆರೆ : ಆಧುನಿಕ ತೋಟಗಾರಿಕೆ ಪದ್ದತಿಯನ್ನು ರೈತರು ಅಳವಡಿಸಿಕೊಳ್ಳಬೇಕು , ಪ್ರಸ್ತುತ ರೈತರು ಉಪಯೋಗಿಸುತ್ತಿರುವ ಸಾಂಪ್ರದಾಯಿಕ...

Homeಸುದ್ದಿಗಳು

ವಸತಿ ಶಾಲೆಗಳ 6ನೇ ತರಗತಿ : ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಾತಿಗಾಗಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.