ಹರಪನಹಳ್ಳಿ : ಸರ್ಕಾರದ ಆದೇಶದನ್ವಯ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ವಿವಿಧ ಶಾಲೆಗಳಲ್ಲಿ ಶನಿವಾರ ಆಚರಿಸಲಾಯಿತು.
ನಗರದ ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದಲ್ಲಿ, ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರಿಗೆ ಮರುಸಿಂಚನ ತರಬೇತಿ ಕಾರ್ಯಾಗಾರದಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಟಿ.ಎಚ್.ಎಂ.ಲತಾ ಅವರು ಮಾತನಾಡಿ, ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಂತಹ ಮಹನೀಯ ಮಹಿಳೆ ಸ್ಮರಿಸಬೇಕು ಎಂದರು. ವಿವಿಧ ಶಾಲೆಗಳಲ್ಲಿ ಜರುಗಿದ ಸಾವಿತ್ರಬಾಯಿ ಫುಲೆ ಜಯಂತಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ಚಾಲನೆ ನೀಡಿದರು. ಶಾಲಾ ಶಿಕ್ಷಣ ಇಲಾಖೆ ಬಿಆರ್ಪಿ, ನೋಡಲ್ ಅಧಿಕಾರಿ ವಾಗೀಶ, ಶಿಕ್ಷಣ ಸಂಯೋಜಕ ವೀರೇಶ, ದಕ್ಷಿಣ ಸಿಆರ್ಪಿ ಮೈಲಾರಿ, ಶೋಭಾಕುಮಾರಿ, ಶಿಲ್ಪಾ, ಶೋಭಾ, ಮಂಜುಳಾ ಇದ್ದರು.
Leave a comment