Home  ಪ್ರಮೋದ್ ಮುತಾಲಿಕ್ ಹಿಂದೂ ಯುವತಿಯರಿಗೆ ಏನು ಹೇಳಿದ್ರು ?
Homeಸುದ್ದಿಗಳು

 ಪ್ರಮೋದ್ ಮುತಾಲಿಕ್ ಹಿಂದೂ ಯುವತಿಯರಿಗೆ ಏನು ಹೇಳಿದ್ರು ?

Share
 ಪ್ರಮೋದ್ ಮುತಾಲಿಕ್ ಹಿಂದೂ ಯುವತಿಯರಿಗೆ ಏನು ಹೇಳಿದ್ರು ?
Share

 ಹರಪನಹಳ್ಳಿ : ಇನಾಂ ವೀರಾಪುರದಲ್ಲಿ ನಡೆದಿರುವ ಮರ್ಯಾದೆ ಗೇಡು ಹತ್ಯೆ ಹೀನಾಯ ಕೃತ್ಯ, ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ. ಮಾನ್ಯಾಳ ತಂದೆ ಎದುರಿಗೆ ಸಿಕ್ಕರೆ ಕೊಚ್ಚಿ ಕೊಲೆ ಮಾಡುವಷ್ಟು ಆಕ್ರೋಶವಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಎಂದು ಹೇಳಿದರು.

ತಾಲ್ಲೂಕಿನ ಕುಮಾರನಹಳ್ಳಿ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.  ಹಿಂದೂಗಳು ಯಾವುದೇ ಜಾತಿಯ ಯುವಕ-ಯುವತಿಯರು ಪ್ರೀತಿಸಿ ಅಂತರ್ಜಾತಿ ವಿವಾಹವಾಗಲು ಒಪ್ಪಿ ನಮ್ಮ ಬಳಿ ಬಂದರೆ, ನಮ್ಮ ಶ್ರೀರಾಮ ಸೇನೆ ಕಾರ್ಯಕರ್ತರ ನೇತೃತ್ವದಲ್ಲಿ ಮದುವೆ ಮಾಡಿಸುತ್ತೇವೆ, ಅವರಿಗೆ ರಕ್ಷಣೆ ಕೊಟ್ಟು, ಉದ್ಯೋಗ ಕೊಡಿಸುತ್ತೇವೆ. ಆದರೆ ಹಿಂದೂ ಯುವತಿಯರು ಮುಸ್ಲೀಂರನ್ನು ಪ್ರೀತಿಸಿ, ಲವ್ ಜಿಹಾದ್ ಗೆ ಒಳಗಾಗದಿರಿ ಎಂದು ಸಲಹೆ ನೀಡಿದರು.

ಭಾರತವಷ್ಟೆ ಅಲ್ಲ ಜಗತ್ತಿನಲ್ಲಿ ಇಸ್ಲಾಂ ಪ್ರತಿಷ್ಠಾಪನೆ ಷಡ್ಯಂತ್ರ ನಡೆದಿದೆ. ಅದರ ಭಾಗವಾಗಿ ಲವ್ ಜಿಹಾದ್ ಕೆಲಸ ಮಾಡುತ್ತಿದೆ. ಶ್ರೀರಾಮ ಸೇನೆ ಸಹಾಯವಾಣಿ ಆರಂಭಿಸಿದ ನಂತರ 4670 ಹಿಂದೂ ಹುಡುಗಿಯರನ್ನು ನಮ್ಮ ಸಂಘಟನೆ ಮುಸ್ಲೀಂರಿಂದ ರಕ್ಷಿಸಿದೆ. ನರೇಂದ್ರ ಮೋದಿ ಅವರು ಹಿಂದೂಗಳನ್ನು ಜೀವಂತ ಸುಟ್ಟು ಹಾಕುತ್ತಿರುವ ಬಾಂಗ್ಲಾಕ್ಕೆ ಬುದ್ದಿಕಲಿಸಬೇಕು. ಕೂಡಲೇ ಭಾರತದಿಂದ ಅಲ್ಲಿಗೆ ಎಲ್ಲ ಉತ್ಪನ್ನಗಳ ರಫ್ತು ನಿಲ್ಲಿಸಬೇಕು ಎಂದು ಕಿಡಿಕಾರಿದರು.  ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕ್ಷೇತ್ರದಲ್ಲಿಯೇ 25 ಸಾವಿರ ಬಾಂಗ್ಲಾ ಜನ ಸೇರಿಕೊಂಡಿದ್ದಾರೆ. ಹಿಂದೂಗಳಿಗೆ ಮನೆ ಕಟ್ಟಿಸಿಕೊಡದ ಸರ್ಕಾರ, 2ನೇ ದಿನದಲ್ಲಿ ಮುಸ್ಲೀಂರಿಗೆ ಮನೆ ಕೊಡುತ್ತಾರೆ ಎಂದರೆ ಇದು ಎಂತಹ ಸರ್ಕಾರ ಎಂದು ಪ್ರಶ್ನಿಸಿದರು.

ನಮ್ಮ ಮೇಲೆ ಲಾಠಿಚಾರ್ಚ್ ಮಾಡಿ, ಗಲ್ಲಿಗೇರಿಸಿದರೂ ಆಟವಾಡಲು ಬಿಡುವುದಿಲ್ಲ. ಬಾಂಗ್ಲಾದೇಶ ತಂಡದ ಜೊತೆ ಕ್ರಿಕೆಟ್ ಆಟವನ್ನು ಬಿಸಿಸಿಐ ನಿಲ್ಲಿಸಬೇಕು, ಭಾರತದಲ್ಲಿ ಎಲ್ಲೆ ಆಟವಾಡಿದರೂ ಶ್ರೀರಾಮ ಸೇನೆ ಸಾವಿರ ಕಾರ್ಯಕರ್ತರು ಮೈದಾನಕ್ಕೆ ತೆರಳಿ ಘೇರಾವ್ ಹಾಕುತ್ತೇವೆ ಎಂದರು.

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಹತ್ಯೆಯನ್ನು ಶ್ರೀರಾಮ ಸೇನೆ ಬಲವಾಗಿ ಖಂಡಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಾಯಿ ಮುಚ್ಚಿಕೊಂಡಿರುವುದು ಸರಿಯಲ್ಲ, ಹಿಂದೂಗಳ ರಕ್ಷಣೆಗಾಗಿ ನಿಮ್ಮನ್ನು ಮೂರುಬಾರಿ ಗೆಲ್ಲಿಸಿದ್ದೇವೆ. ಆದರೆ ಬಾಂಗ್ಲಾ ವೈರಸ್‍ ಗಳನ್ನು ಕಿತ್ತೆಸೆಯಲು ವಿಳಂಬ ಮಾಡುತ್ತಿದ್ದಿರಿ. ಯಾವುದೇ ದಾಖಲೆಗಳಿಲ್ಲದ 5 ಲಕ್ಷ ಬಾಂಗ್ಲಾ ಜನರನ್ನು ಒದ್ದು ಓಡಿಸಬೇಕು. ಯಲ್ಲಾಪುರದಲ್ಲಿ ದಲಿತ ಮಹಿಳೆ ಹತ್ಯೆ ಖಂಡನೀಯ, ಆರೋಪಿಗೆ ಅಲ್ಲಾನೆ ಶಿಕ್ಷ ಕೊಟ್ಟಿದ್ದಾರೆ. ಬಳ್ಳಾರಿ ಪ್ರಕರಣದಲ್ಲಿ ಎಲ್ಲ ಭ್ರಷ್ಟ ರಾಜಕಾರಣಗಳು ಸೇರಿಕೊಂಡಿದ್ದಾರೆ, ಅದರ ಬಗ್ಗೆ ನಾನು ಮಾತನಾಡಲ್ಲ ಎಂದರು.

ದಕ್ಷಿಣ ಪ್ರಾಂತ ಶ್ರೀರಾಮಸೇನೆ ಸಂಚಾಲಕ ನರೆಗಲ್ ಸುದರ್ಶನ ಮಾತನಾಡಿ, ಜೆಜೆನಗರ ಬ್ಯಾಟರಾಯನಪುರದಲ್ಲಿ ಅಯ್ಯಪ್ಪಸ್ವಾಮಿ ಮಾಲೆಧಾರಿಗಳ ಮೆರವಣಿಗೆಯಲ್ಲಿ ರಾತ್ರಿ ಕಲ್ಲುತೂರಾಟ ನಡೆದಿದೆ. ಕಲ್ಲು ಹೊಡೆದವರು ಯಾರು ಎಂಬುದು ಸಾಭೀತಾಗಿದೆ, ಆದರೆ ನಮ್ಮ ಕಾರ್ಯಕರ್ತರ ಮೇಲೆ ಅಟ್ರಾಸಿಟಿ ಕೇಸು ಹಾಕಿದ್ದಾರೆ, ಸ್ವತಃಸಚಿವ ಜಮೀರ್ ಅಹ್ಮದ್ ಖಾನ್ ಅವರು, ಹಿಂದೂಗಳ ಮೇಲೆ ಲಾಠಿ ಚಾರ್ಚ್‍ ಮಾಡಿಸಿದ್ದಾರೆ. ಆದರೆ ಕಲ್ಲು ಹೊಡೆದ ಆರೋಪಿಗಳನ್ನು ಇನ್ನೂ ಪೊಲೀಸರು ಬಂಧಿಸಿಲ್ಲ, ಲಾಠಿ ಚಾರ್ಚ್‍ ನಲ್ಲಿ ನಮ್ಮ ಇಬ್ಬರು ಕಾರ್ಯಕರ್ತರು ಗಾಯಗೊಂಡಿದ್ದಾರೆ. ನಮಗೆ ನ್ಯಾಯ ಸಿಗುವ ತನಕ ಹೋರಾಟ ನಿಲ್ಲಿಸಲ್ಲ . ಆಸ್ಪತ್ರೆ ಮಾಧ್ಯಮ ವಿಭಾಗದ ಮುಖ್ಯಸ್ಥ ಉದಯಶಂಕರ ಭಟ್, ಪ್ರಾಂಶುಪಾಲ ಡಾ.ರಾಜೇಶ ಪಾದೆಕಲ್ ಉಪಸ್ಥಿತರಿದ್ದರು.

ಪ್ರಕೃತಿ ಚಿಕಿತ್ಸೆ ಕೇಂದ್ರ ಬೆಂಬಲಿಸಿ 

ಪ್ರಕೃತಿ, ಯೋಗ ಚಿಕಿತ್ಸೆ ಪ್ರಚಾರ ಪಡಿಸುವ ಸಲುವಾಗಿ  ಆಯುರ್ವೇದ ಪದ್ದತಿ ಕುರಿತು ಪಠ್ಯದಲ್ಲಿ ಅಳವಡಿಸುವ ಅಗತ್ಯವಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ತಿಳಿಸಿದರು. ಇಂಗ್ಲೀಷ್ ಮೆಡಿಸನ್ ಮನುಷ್ಯರ ಆರೋಗ್ಯವನ್ನು ಹಾಳು ಮಾಡುತ್ತದೆ. ಜಗತ್ತು ಆವರಿಸಿರುವ ಇಂಗ್ಲೀಷ್ ಮೆಡಿಸನ್ ದೊಡ್ಡ ಮಾಫಿಯಾ, ಇದರ ಬಗ್ಗೆ ಜನರು ಜಾಗೃತರಾಗಬೇಕು. ಜನನಿ ಯೋಗ ಕೇಂದ್ರದಲ್ಲಿ ಒಂದು ವಾರ ಚಿಕಿತ್ಸೆ ಪಡೆದು, ಸಾಕಷ್ಟು ಉಪಯೋಗವಾಗಿದೆ. ಮದ್ಯಕರ್ನಾಟಕದಲ್ಲಿ ಆರಂಭವಾಗಿರುವ 100 ಹಾಸಿಗೆಯ ಆಸ್ಪತ್ರೆಯಲ್ಲಿ ಪ್ರತಿಯೊಬ್ಬರು ಇಂತಹ ಕೇಂದ್ರದಲ್ಲಿ ಚಿಕಿತ್ಸೆ ಪಡೆದರೆ, ಸದೃಢ ಆರೋಗ್ಯ ನಮ್ಮದಾಗಿಸಿಕೊಳ್ಳಬಹುದು ಎಂದು ತಿಳಿಸಿದರು.

ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರಲ್ಲಿ ಸರಳ ಆಹಾರ ಪದ್ದತಿ, ಯೋಗಾಭ್ಯಾಸ ಹಾಗೂ ಆಧುನಿಕ ಉಪಕರಣ ಜೊತೆ ದೈಹಿಕ ವ್ಯಾಯಾಮ ಇರುತ್ತದೆ. ಇಂತಹ ಆರೋಗ್ಯ ಪದ್ದತಿ ನಮ್ಮ ದೇಶದಲ್ಲಿ ಹೆಚ್ಚು ಪ್ರಚಾರ ಮಾಡುವ ಅಗತ್ಯವಿದೆ ಎಂದು ಹೇಳಿದರು. ಶ್ರೀರಾಮಸೇನೆ ದಕ್ಷಿಣ ಪ್ರಾಂತ ಸಂಚಾಲಕ ನರೆಗಲ್ ಸುದರ್ಶನ್, ಆಸ್ಪತ್ರೆ ಮಾಧ್ಯಮ ವಿಭಾಗದ ಮುಖ್ಯಸ್ಥ ಉದಯಶಂಕರ ಭಟ್, ಪ್ರಾಂಶುಪಾಲ ಡಾ.ರಾಜೇಶ ಪಾದೆಕಲ್ ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ವಸತಿ ಶಾಲೆಗಳ 6ನೇ ತರಗತಿ : ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಾತಿಗಾಗಿ...

Homeಸುದ್ದಿಗಳು

ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹ: ತಹಸೀಲ್ದಾರರಿಗೆ ಬಿಜೆಪಿ ವತಿಯಿಂದ ಮನವಿ ಸಲ್ಲಿಕೆ

 ಹರಪನಹಳ್ಳಿ : ಇಂದು ಮಂಡಲ ಬಿಜೆಪಿ ವತಿಯಿಂದ ಬರಗಾಲದ ಕಾರಣದಿಂದ ಹರಪನಹಳ್ಳಿ ತಾಲೂಕನ್ನು ಬರಪೀಡಿತ ತಾಲೂಕನ್ನಾಗಿ...

Homeಸುದ್ದಿಗಳು

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ತಾಲೂಕಿನ ವಿವಿಧ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಖಾಲಿಯಿರುವ...

Homeಸುದ್ದಿಗಳು

ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ಹೊಸಪೇಟೆ ತಾಲೂಕಿನ ಸಮಗ್ರ ಗಣಿ ಪರಿಸರ ಪುನಶ್ಚೇತನ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.