Home ತುಂಗಭದ್ರಾ ತಟದಲ್ಲಿ ವಿಜೃಂಭಿಸಿದ ‘ಜಾನಪದ ಸಂಕ್ರಾಂತಿ’
Homeಸುದ್ದಿಗಳು

ತುಂಗಭದ್ರಾ ತಟದಲ್ಲಿ ವಿಜೃಂಭಿಸಿದ ‘ಜಾನಪದ ಸಂಕ್ರಾಂತಿ’

Share
ತುಂಗಭದ್ರಾ ತಟದಲ್ಲಿ ವಿಜೃಂಭಿಸಿದ 'ಜಾನಪದ ಸಂಕ್ರಾಂತಿ'
Share

ಹರಪನಹಳ್ಳಿ : ತಾಲ್ಲೂಕಿನ ತಾವರಗುಂದಿ ಗ್ರಾಮ ಸಮೀಪ ತುಂಗಭದ್ರಾ ನದಿ ತೀರದಲ್ಲಿ ಸಂಕ್ರಾಂತಿ ಪ್ರಯುಕ್ತ ಗುರುವಾರ ಜರುಗಿದ ಮಕರ ಸಂಕ್ರಮಣ ಔತಣಕೂಟ ಮತ್ತು ಜಾನಪದ ಸಂಕ್ರಾಂತಿ ಕಾರ್ಯಕ್ರಮಕ್ಕೆ ಸಾವಿರಾರು ಜನರು ಸಾಕ್ಷಿಯಾದರು.

ಎಂ.ಪಿ.ರವೀಂದ್ರ ಪ್ರತಿಷ್ಠಾನ, ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಜಾನಪದ ಸಂಕ್ರಾಂತಿ ವೇದಿಕೆಯಲ್ಲಿ ಕಲಾವಿದರಾದ ಕುಮಾರ ಪತ್ತರ್ ಹಾಗೂ ಪ್ರಸಿದ್ದ ಜಾನಪದ ಗಾಯಕಿ ಸವಿತಕ್ಕ ಅವರ ಕಂಠಸಿರಿಯಲ್ಲಿ ಹೊರಹೊಮ್ಮಿದ ಜಾನಪದ ಹಾಡುಗಳಿಗೆ ನೆರೆದವರು ತಲೆತೂಗಿದರು. ಸ್ಥಳೀಯ ಕಲಾವಿದ ನಾಗಪ್ಪ, ಅಂಧ ಬಾಲಕಿ ಸಿಂಚನಾ ಅವರು ಸಹ ಗಾಯನ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು. ಡೋಲಕ್ ತಂಡ, ಬಾಗಳಿ ಕೋಲಾಟ ಕಲಾವಿದರು ಸಹ ಕೋಲಾಟ ನುಡಿಸಿ ಜಾನಪದ ಸಂಕ್ರಾಂತಿಯ ಮೆರಗು ಹೆಚ್ಚಿಸಿದರು.

ಸಂಕ್ರಾಂತಿ ಪ್ರಯುಕ್ತ ಬಣ್ಣಗಳಿಂದ ಅಲಂಕೃತ ಎತ್ತಿನ ಬಂಡಿಗಳು, ಮಡಕೆ, ತೆಂಗಿನಗರಿ, ಕಬ್ಬು ಬೆಳೆ ಗಿಡಗಳಿಂದ ರಚಿಸಲಾಗಿದ್ದ ಹಳ್ಳಿಯ ಸೊಗಡಿನ ಚಿತ್ತಾರ ಗಮನ ಸೆಳೆಯಿತು. ಜುಳು ಜುಳು ಹರಿಯುತ್ತಿದ್ದ ನದಿಗಿಳಿದು ಸ್ನಾನ ಮಾಡಿದ ಜನರು ಹಬ್ಬವನ್ನು ಸಂಭ್ರಮಿಸಿದರು.  ಔತಣಕ್ಕೆ ಆಗಮಿಸಿದ್ದ ಜನರಿಗೆ ಶಾಸಕಿ ಎಂ.ಪಿ.ಲತಾ ಅವರು ಎಳ್ಳು ಬೆಲ್ಲ ವಿತರಿಸಿ, ಮಹಿಳೆಯರಿಗೆ ಉಡಿ ತುಂಬಿ ಶುಭಹಾರೈಸಿದರು.  ಔತಣಕೂಟದಲ್ಲಿ ಭಾಗಿಯಾಗಿದ್ದ ಸಾವಿರಾರು ಜನರು ರೊಟ್ಟಿ, ಚಟ್ನಿ, ಮೊಸರು, ಹೋಳಿಗೆ, ಮೈಸೂರುಪಾಕ್, ಕಾಳು, ಮೆಣಸಿನ ಪಲ್ಲೆ, ಬುತ್ತಿ, ಅನ್ನ, ಸಾರು ಸವಿದರು. ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಉದ್ಘಾಟಿಸಿದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರು, ಸಂಕ್ರಾಂತಿ ಆಚರಣೆ ವಿಭಿನ್ನವಾಗಿ ಮಾಡುತ್ತಿರುವ ಲತಾಕ್ಕ ಅವರು ಜನಪ್ರಿಯತೆ ಗಳಿಸಿದ್ದಾರೆ ಎಂದರು.

ನದಿಯಲ್ಲಿ ಗಂಗಾಪೂಜೆ ನೆರವೇರಿಸಿದ  ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು, ನನ್ನ ಸಹೋದರ ಎಂ.ಪಿ.ರವೀಂದ್ರ ತಾಲ್ಲೂಕಿಗೆ 371ಜೆ ಸೌಲಭ್ಯದ ಜೊತೆ ಹಲವು ಅನುಕೂಲ ಮಾಡಿಕೊಟ್ಟಿದ್ದಾರೆ. ಅವರೇ ಆರಂಭಿಸಿದ್ದ ಜಾನಪದ ಸಂಕ್ರಾಂತಿ ನಾವು 8 ವರ್ಷಗಳಿಂದ ಆಚರಿಸುತ್ತಾ ಬಂದಿದ್ದೇವೆ ಎಂದು ಹೇಳಿದರು. ಇದೇ ವೇಳೆ ಈ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಹೊನ್ನಾಳಿ ಶಾಸಕ ಡಿ.ಜೆ.ಶಾಂತನಗೌಡ, ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್, ಹುಡಾ ಅಧ್ಯಕ್ಷ ಹೆಚ್.ಎನ್.ಎಫ್.ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯತ್ ಸಿಇಓ ನೋಂಗ್ಜಾಯ್ ಮಹಮದ್ ಅಲಿ ಅಕ್ರಂ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಮುಖಂಡರಾದ ಎಚ್.ಎಂ.ಮಲ್ಲಿಕಾರ್ಜುನ, ಕೀರ್ತಿ ಕುಮಾರ, ಎಚ್.ಎಂ.ಗೌತಮ್ ಪ್ರಭು, ಯೋಗೇಶ್ವರಿ, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಉದಯಶಂಕರ, ಮತ್ತೂರು ಬಸವರಾಜ, ಸಾಸ್ವಿಹಳ್ಳಿ ನಾಗರಾಜ್  ಸೇರಿದಂತೆ ಅನೇಕ ಮುಖಂಡರು ಆಗಮಿಸಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಕಲಬುರಗಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ

ಕಲಬುರಗಿ: ಕೊಟನೂರಿನ ಸೇಂಟ್ ಮೇರಿಸ್ ಶಾಲೆಯಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಅಲ್...

Homeಸುದ್ದಿಗಳು

ಕ್ರೀಡಾಕೂಟಗಳು ಸ್ಪರ್ಧೆಯಾಗದೆ,ಹಬ್ಬದ ಸಂಭ್ರಮವಾಗಲಿ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ.

ಹರಪನಹಳ್ಳಿ : ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಾಗದೆ, ಹಬ್ಬದ ಸಂಭ್ರಮ ಮನೆಮಾಡಬೇಕು ಎಂದು ಶಾಸಕ...

Homeಸುದ್ದಿಗಳು

ಸೆ.19ರಂದು ಹರಪನಹಳ್ಳಿಯಲ್ಲಿ ತಾಲ್ಲೂಕು ಮಟ್ಟದ ಪ್ರಜಾಸೇವಾ ಕಾರ್ಯಕ್ರಮ

ವಿಜಯನಗರ : ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ...

Homeಸುದ್ದಿಗಳು

ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ : ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ

ವಿಜಯನಗರ : ಸಾರ್ವಜನಿಕರು ತಮ್ಮ ದಿನನಿತ್ಯದ ಸಮಸ್ಯೆಗಳು, ಬೇಡಿಕೆಗಳು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಿಗಾಗಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.