Home ಸುದ್ದಿಗಳು ಕಲೆ ಹಂಪಿ ಉತ್ಸವ : ಶ್ರೀ ವಿರೂಪಾಕ್ಷ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಸಾಂಸ್ಕೃತಿಕ ರಸಮಂಜರಿ
ಕಲೆಸುದ್ದಿಗಳು

ಹಂಪಿ ಉತ್ಸವ : ಶ್ರೀ ವಿರೂಪಾಕ್ಷ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಸಾಂಸ್ಕೃತಿಕ ರಸಮಂಜರಿ

Share
Share

ವಿಜಯನಗರ:
ಹಂಪಿ ಉತ್ಸವದ ಎರಡನೆಯ ದಿನವಾದ ಶನಿವಾರ ಶ್ರೀ ವಿರೂಪಾಕ್ಷ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳಿಂದ ನಾಡಿನ ಸಂಸ್ಕೃತಿ, ಸೊಗಡು, ಜನಪದ ಕಲೋಕ್ತಿ ಒಳಗೊಂಡತೆ ವಿವಿಧ ಕಲಾಪ್ರಕಾರಗಳ ಸಾಂಸ್ಕೃತಿಕ ರಸಮಂಜರಿ ಅನಾವರಣಗೊಂಡಿತು.
ಹೊಸಪೇಟೆಯ ಕೆ.ಪ್ರೇಮ ಮತ್ತು ತಂಡವು ‘ನಮ್ಮಮ್ಮ ಶಾರದೆ..ಉಮಾ ಮಹೇಶ್ವರಿ’ ವಚನ ಗಾಯನ ಹಾಡುವ ಮೂಲಕ ಸಾಂಸ್ಕೃತಿಕ ಸಂಜೆ ಆರಂಭಿಸಿದರು. ಹರಪನಹಳ್ಳಿಯ ಶರಣಬಸವ ಶಾಸ್ತ್ರಿ ಹಿರೇಮಠ ಮತ್ತು ತಂಡವು ಕಥಾ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು. ಹುಬ್ಬಳ್ಳಿಯ ಮಯೂರ ನೃತ್ಯ ಮಂದಿರ ತಂಡದಿಂದ ನೃತ್ಯರೂಪಕ ಪ್ರದರ್ಶಿಸಿದರು. ಹೊಸಪೇಟೆ ಸುಮಂಗಲ ಕಾಳಗಟ್ಟ ಮತ್ತು ತಂಡವು ದಾಸರ ಪದಗಳ ಗಾಯನ ಪ್ರಸ್ತುತಪಡಿಸಿದರು.
ಕಂಪ್ಲಿಯ ಅಶ್ವಿನಿ.ಡಿ ತಂಡವು ಭರತನಾಟ್ಯ, ಕುರಿಹಟ್ಟಿ ಗ್ರಾಮದ ಎಚ್.ರಾಜಣ್ಣ ಮತ್ತು ತಂಡ ವಚನ ಗಾಯನಗಳ ಮೂಲಕ ವಚನಸಾಹಿತ್ಯಲೋಕ ಅನಾವರಣಗೊಳಿಸಿದರು. ಕೂಡ್ಲಿಗಿ ಸುಧಾ ದಿಬ್ಬದಹಳ್ಳಿ ಮತ್ತು ತಂಡ ಜಾನಪದ ಗಾಯನದ ಮೂಲಕ ಜನಪದ ಸೊಗಡು ತೆರೆದಿಟ್ಟರು.

ಕಲಬುರಗಿ ಪ್ರಶಾಂತ್ ಈ.ಕಂಬಾರ್ ಮತ್ತು ತಂಡ ಸುಗಮ ಸಂಗೀತ, ದಾವಣಗೆರೆ ರುದ್ರಾಕ್ಷಿಬಾಯಿ ಸಿ.ಕೆ., ಮತ್ತು ತಂಡ ಲಂಬಾಣಿ ನೃತ್ಯ, ಮೋರಿಗೇರಿ ಬಿ.ಯುವರಾಜ ಗೌಡ ಮತ್ತು ತಂಡ ದಾಸರ ಪದಗಳ ಗಾಯನ ಪ್ರಸ್ತುತಪಡಿಸಿದರು.
ಹಗರಿಬೊಮ್ಮನಹಳ್ಳಿ ಗೀತಾ ಈರಣ್ಣ ಮತ್ತು ತಂಡ, ಸಮೂಹ ನೃತ್ಯ ರೂಪಕ, ಕೊಟ್ಟೂರು ಬಿ. ಸೌಮ್ಯ ಮತ್ತು ತಂಡ ಭರತನಾಟ್ಯ, ಕೂಡ್ಲಿಗಿ ನರಸಿಂಹಪ್ಪ ಮತ್ತು ತಂಡ ವಚನ ಸಂಗೀತ, ಚಿತ್ರದುರ್ಗ ಡಾ.ಭವ್ಯರಾಣಿ.ಟಿ ತಂಡ ವಯಲಿನ್ ವಾದನ ನಡೆಸಿಕೊಟ್ಟರು.
ಸಂಡೂರು ಅಪ್ಪು ಡ್ಯಾನ್ಸ್ ಸ್ಟುಡಿಯೋ ಸಮೂಹ ನೃತ್ಯ ಪ್ರದರ್ಶಿಸುವ ಮೂಲಕ ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿಕೊಂಡರು. ಕಂಪ್ಲಿಯ ಸಿ.ಡಿ. ಮೌನೇಶ್ ಮತ್ತು ತಂಡ ತತ್ವಪದ ಗಾಯನ, ಹೊಸಪೇಟೆಯ ಎಚ್.ಎಂ. ಲಲಿತಾ ಮತ್ತು ತಂಡ ಹಿಂದೂಸ್ತಾನಿ ಸಂಗೀತ. ತಂಬ್ರಹಳ್ಳಿಯ ಕುಮಾರ್ ಭಜಂತ್ರಿ ಮತ್ತು ತಂಡದಿಂದ ಸಾಕ್ರೋಪೋನ್. ಬಳ್ಳಾರಿಯ ಹೊಸಯರಗುಡಿ ರೇಖಾ ಎಸ್.ವಿ ತಂಡ ಸುಗಮ ಸಂಗೀತ, ಹಗರಿಬೊಮ್ಮನಹಳ್ಳಿಯ ಕೊಟ್ರಗೌಡ ಎಂ. ತಂಡದಿಂದ ಕೊಳಲು ವಾದನ ನುಡಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವೈ.ಎ.ಕಾಳೇಶ್ ಅವರು ವೇದಿಕೆಯ ನೋಡೆಲ್ ಅಧಿಕಾರಿಯಾಗಿ ಉಸ್ತುವಾರಿ ವಹಿಸಿದ್ದರು.
ಈ ವೇಳೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ಸೇರಿದಂತೆ ನೋಡೆಲ್ ಅಧಿಕಾರಿಗಳಾದ ಮಲ್ಲೇಶ್, ಕೊಟ್ರೇಶ್ ಹಾಗೂ ಇತರರು ಇದ್ದರು.
ವೇದಿಕೆಯಲ್ಲಿ ಭಾಗವಹಿಸಿದ್ದ 33 ಕಲಾತಂಡಗಳಿಗೂ ಪ್ರಮಾಣಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026: 12,97, 419  ನಮೂನೆಗಳ  ಗಣಕೀಕರಣ

ದಾವಣಗೆರೆ : ಆಗಸ್ಟ್‌ 06 (ಕರ್ನಾಟಕ ವಾರ್ತೆ): ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿ ಸಮಗ್ರ...

Homeಸುದ್ದಿಗಳು

ರೈತರು ಆಧುನಿಕ ತೋಟಗಾರಿಕೆ ಪದ್ದತಿಯನ್ನು ಅಳವಡಿಸಿಕೊಳ್ಳುವಂತೆ ಶಾಸಕ ಸಮರ್ಥ ಶಾಮನೂರು ಕರೆ

ದಾವಣಗೆರೆ : ಆಧುನಿಕ ತೋಟಗಾರಿಕೆ ಪದ್ದತಿಯನ್ನು ರೈತರು ಅಳವಡಿಸಿಕೊಳ್ಳಬೇಕು , ಪ್ರಸ್ತುತ ರೈತರು ಉಪಯೋಗಿಸುತ್ತಿರುವ ಸಾಂಪ್ರದಾಯಿಕ...

Homeಸುದ್ದಿಗಳು

ವಸತಿ ಶಾಲೆಗಳ 6ನೇ ತರಗತಿ : ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಾತಿಗಾಗಿ...

Homeಸುದ್ದಿಗಳು

ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹ: ತಹಸೀಲ್ದಾರರಿಗೆ ಬಿಜೆಪಿ ವತಿಯಿಂದ ಮನವಿ ಸಲ್ಲಿಕೆ

 ಹರಪನಹಳ್ಳಿ : ಇಂದು ಮಂಡಲ ಬಿಜೆಪಿ ವತಿಯಿಂದ ಬರಗಾಲದ ಕಾರಣದಿಂದ ಹರಪನಹಳ್ಳಿ ತಾಲೂಕನ್ನು ಬರಪೀಡಿತ ತಾಲೂಕನ್ನಾಗಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.