ಅರಸೀಕೆರೆ (ಹರಪನಹಳ್ಳಿ) : ತಾಲೂಕಿನ ಅರಸೀಕೆರೆ ಗ್ರಾಮದ ಪೊಲೀಸ್ ಠಾಣೆಯಲ್ಲಿ ಭಾನುವಾರ ಅರಸೀಕೆರೆ ಹೋಬಳಿಯ ಹಳ್ಳಿಗಳ ಸಾರ್ವಜನಿಕರ ಸಭೆ ಜರುಗಿತು.
ಸಿಪಿಐ ಮಹಾಂತೇಶ್ ಸಜ್ಜನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ಹಬ್ಬ-ಹರಿದಿನಗಳಲ್ಲಿ ಕುಡಿತಕ್ಕೆ ಹಾಗೂ ಡಿಜೆ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಹಿಂದಿನ ದಿನಗಳಲ್ಲಿ ಪ್ರತಿಯೊಂದು ಹಬ್ಬವನ್ನು ಹಿರಿಯರ ಮಾರ್ಗದರ್ಶನದಲ್ಲಿ ಶಾಂತಿಯುತವಾಗಿ ಆಚರಿಸಲಾಗುತ್ತಿತ್ತು ಎಂದು ಅವರು ತಿಳಿಸಿದರು.
ಅರಸೀಕೆರೆ ಹಾಗೂ ಅರಸೀಕೆರೆ ಹೋಬಳಿಯಲ್ಲಿ ಹಿಂದೂ–ಮುಸ್ಲಿಂ ಸೇರಿದಂತೆ ಎಲ್ಲಾ ಸಮಾಜದವರು ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸುತ್ತಾ ಬಂದಿರುವುದು ವಿಶೇಷ. ಮುಂದೆಯೂ ಇದೇ ರೀತಿಯಲ್ಲಿ ಸೌಹಾರ್ದತೆ ಕಾಪಾಡಿಕೊಂಡು ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪಿಎಸ್ಐ ವಿಜಯ್ ಕೃಷ್ಣ, ಮುಖಂಡರಾದ ಪೂಜಾರ್ ಮರಿಯಪ್ಪ, ಜಾಮಿಯಾ ಮಸೀದಿ ಅಧ್ಯಕ್ಷ ಅಬೀಬ್ ಸಾಹೇಬ್, ಕಾರ್ಯದರ್ಶಿ ಖಾಜಿ ಮಹಮ್ಮದ್ ಸಾಹೇಬ್, ಐ. ಸಲಾಂ ಸಾಹೇಬ್, ಕೆ. ಮಹಾಂತೇಶ್, ಅಜೀಮ್ ಸಾಹೇಬ್, ದಸ್ತಗಿರಿ ಸಾಹೇಬ್, ರಹಮ್ಮತ್ ಉಲ್ಲಾ ಸಾಹೇಬ್, ಹೆಚ್. ನವೀನ್, ಅಬ್ದುಲ್ ಸಾಹೇಬ್ ಸೇರಿದಂತೆ ಮಾದಿಹಳ್ಳಿ ಉಚ್ಚಂಗಿದುರ್ಗ, ಹನುಮನಹಳ್ಳಿ, ಜಂಬುಲಿಂಗನಹಳ್ಳಿ, ಕಂಚಿಕೆರೆ ಹಾಗೂ ಅರಸೀಕೆರೆ ಗ್ರಾಮಸ್ಥರು ಭಾಗವಹಿಸಿದ್ದರು. ಪೊಲೀಸ್ ಸಿಬ್ಬಂದಿ ಕೂಲಹಳ್ಳಿ ಎಂ. ಕೊಟ್ರೇಶ್, ರವಿನಾಯ್ಕ್, ಪೂರ್ಯನಾಯ್ಕ್, ರವಿಕುಮಾರ್, ಗುರುರಾಜ್, ಹರೀಶ್, ಗೂರ್ಯನಾಯ್ಕ್, ವೀರಮ್ಮ ಹಾಗೂ ಕೊಟ್ರಮ್ಮ ಶಾಂತಿ ಸಭೆಯಲ್ಲಿ ಉಪಸ್ಥಿತರಿದ್ದರು.
ವರದಿ : ಮಹೇಶ್ ಅರಸೀಕೆರೆ
Leave a comment