ಹರಪನಹಳ್ಳಿ : ತಾಲ್ಲೂಕಿನ ಅಣಜಿಗೆರೆ ಗ್ರಾಮದ ಹಿರಿಯ ವಕೀಲ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾಗಿದ್ದ ಕೆ.ಡಿ.ಮರಿಯಪ್ಪ (55) ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರಿಗೆ ತಾಯಿ, ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ಮದ್ಯಾಹ್ನ 2ಕ್ಕೆ ಸ್ವ ಗ್ರಾಮ ಅಣಜಿಗೆರೆಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮಾದಿಗ ಸಮಾಜದ ಹಿರಿಯ ಮುಖಂಡರ ಅಗಲಿಕೆಗೆ ದಲಿತಪರ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರು, ಮಾದಿಗ ಸಮಾಜದ ಮುಖಂಡರು ಹಾಗೂ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು, ಮಾದಿಗ ಸಮಾಜದ ನೌಕರರ ಸಂಘದ ಪದಾಧಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
ಪ್ರಗತಿಪರ ಚಿಂತಕರಾದ ಕೋಡಿಹಳ್ಳಿ ಭೀಮಪ್ಪ, ಎ.ಎಂ.ವಿಶ್ವನಾಥ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ಹೆಚ್.ಕೆ.ಹಾಲೇಶ್, ಪುರಸಭೆ ಉಪಾಧ್ಯಕ್ಷ ಹೆಚ್.ಕೊಟ್ರೇಶ್, ವಕೀಲರ ಸಂಘದ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಅರಸೀಕೆರೆ ಪೂಜಾರ ಮರಿಯಪ್ಪ, ಪುಣಬಗಟ್ಟಿ ಹನುಮಂತಪ್ಪ, ಜಯಣ್ಣ, ಕೆ.ಡಿ.ಮರಿಯಪ್ಪ, ಬೆಣ್ಣಿಹಳ್ಳಿ ವಸಂತಪ್ಪ, ಎ.ನಾಗೇಂದ್ರಪ್ಪ, ನಿಚ್ಚವ್ವನಹಳ್ಳಿ ಭೀಮಪ್ಪ, ನಿವೃತ್ತ ಪ್ರಾಚಾರ್ಯ ಪ್ರೊ.ಟಿ.ರಾಜಪ್ಪ
ಮುಖಂಡರಾದ ಕೆ.ಶಿವಪ್ಪ, ಮೈದೂರು ಒ.ರಾಮಪ್ಪ, ಮತ್ತಿಹಳ್ಳಿ ಪಿ ರಾಮಪ್ಪ, ಕಣಿವಿಹಳ್ಳಿ ಭೀಮಪ್ಪ, ಯರಬಳ್ಳಿ ಹನುಮಂತಪ್ಪ, ಕಣಿವಿಹಳ್ಳಿ ಮಂಜುನಾಥ, ಶೃಂಗಾರತೋಟ ನಿಂಗರಾಜ್, ಹನುಮಂತರಾಜ್, ಕಬ್ಬಳ್ಳಿ ಪರಸಪ್ಪ, ಪುಣಬಗಟ್ಟಿ ಹನುಮಂತಪ್ಪ, ಸತೀಶ್, ಒ.ಮಹಾಂತೇಶ್, ಅಣಜಿಗೆರೆ ಕೊಟ್ರೇಶ್, ಹುಲಿಕಟ್ಟೆ ಚಂದ್ರಪ್ಪ, ತಿರುಪತಿ, ಡಗ್ಗಿಬಸವರಾಜ ಬಸವರಾಜ್, ಚಿಗಟೇರಿ ಗೋಣೆಪ್ಪ, ಚಂದ್ರಪ್ಪ, ಪೂಜಾರ ನವೀನ್, ಛತ್ರಪತಿ, ಕೆ.ಸುಭಾಷ್, ಉಚ್ಚಂಗಿದುರ್ಗ ಕೆಂಚಪ್ಪ, ಚಿಕ್ಕಮೇಗಳಗೆರೆ ಚೌಡಪ್ಪ, ಮಾರುತಿ ಅನೇಕರು ಕಂಬನಿ ಮಿಡಿದಿದ್ದಾರೆ.