Home ವಿಶೇಷ ವರದಿಗಳು ಗೊಲ್ಲರಹಟ್ಟಿ; ಜುಂಜೇಶ್ವರ ಸ್ವಾಮಿ ಜಾತ್ರೆ
ವಿಶೇಷ ವರದಿಗಳು

ಗೊಲ್ಲರಹಟ್ಟಿ; ಜುಂಜೇಶ್ವರ ಸ್ವಾಮಿ ಜಾತ್ರೆ

Share
Gollarhatti Junjeshwara Swami Jatre
Share

ಹರಪನಹಳ್ಳಿ: ಕುಕ್ಕೆ ಸುಬ್ರಹ್ಮಣ್ಯ ಖ್ಯಾತಿಯ ಸರ್ಪದೋಷ ನಿವಾರಕ ತಾಲ್ಲೂಕಿನ ಸತ್ತೂರು ಗೊಲ್ಲರಹಟ್ಟಿ ಗ್ರಾಮದ ಜುಂಜೇಶ್ವರ ಸ್ವಾಮಿ ಜಾತ್ರೆ ಮಂಗಳವಾರ ಸಡಗರ, ಸಂಭ್ರಮದಿಂದ ಆರಂಭಗೊಂಡಿತು.

400 ವರ್ಷಗಳ ಇತಿಹಾಸ ಹೊಂದಿರುವ ಜುಂಜೇಶ್ವರ ಸ್ವಾಮಿ, ಜನ ಜಾನುವಾರನ್ನು ವಿಷ ಜಂತುಗಳಿಂದ ರಕ್ಷಣೆ ಮಾಡುವ ಆರಾಧ್ಯ ದೈವವೆಂದೆ ಪ್ರಸಿದ್ದಿಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಸ್ವಾಮಿಗೆ ಎಲೆಪೂಜೆ, ಅಭಿಷೇಕ, ಹಾಗೂ ಗಂಗಾ ಪೂಜೆ ಬಳಿಕ ಕೆಂಡೋತ್ಸವ ಸಂಪ್ರದಾಯಗಳು ಭಕ್ತಬಾವದಿಂದ ಜರುಗಿದವು.

ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡು ಕಣ್ತುಂಬಿಕೊಂಡರು. ಇದನ್ನು ದರ್ಶಿಸಿದರೆ ನಾಗದೋಷ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆ ಇಲ್ಲಿಗೆ ಬರುವ ಭಕ್ತರದ್ದಾಗಿದೆ. ಹಾಗಾಗಿ ಭಕ್ತರು ಹಲ್ಲಿ, ಹಾವು, ಜರಿ, ಚೇಳು ಆಕಾರದ ತಾಮ್ರ, ಬೆಳ್ಳಿಯ ಸಾಮಾಗ್ರಿಗಳನ್ನು ಹರಕೆ ಸಲ್ಲಿಸುತ್ತಾರೆ. ಬೆಲ್ಲದ ಬಂಡಿ ಉತ್ಸವ ಇಲ್ಲಿನ ಮತ್ತೊಂದು ಆಕರ್ಷಣೆ, ಬೆಲ್ಲದ ನೀರನ್ನು ತೀರ್ಥ ರೂಪದಲ್ಲಿ ಸ್ವೀಕರಿಸಲಾಗುತ್ತದೆ. ಗ್ರಾಮದ ಪುರಾತನ ಬಾವಿಯಿಂದ ತಂದ ನೀರನ್ನು ಎತ್ತಿನಗಾಡಿಯಲ್ಲಿಟ್ಟು ಬಂದು ಭಕ್ತರಿಗೆ ವಿತರಿಸಲಾಗುತ್ತಿದೆ.

‘ಬೆಲ್ಲದ ಬಂಡಿ ನೀರು ಸೇವಿಸಿದರೆ ವಿಷ ಜಂತುಗಳಿಂದ ಕಡಿತಕ್ಕೆ ಒಳಗಾದ ಪ್ರಾಣಿ, ಪಕ್ಷಿ, ಮನುಷ್ಯರ ಪ್ರಾಣಕ್ಕೆ ಅಪಾಯ ಆಗುವುದಿಲ್ಲ.ಸಂತಾನ ಭಾಗ್ಯ, ವಿವಾಹದಲ್ಲಿ ಅಡೆತಡೆಗಳು ಸೇರಿದಂತೆ ಯಾವುದೇ ತರಹದ ದೋಷಗಳು ಪರಿಹಾರಕ್ಕೆ ಇಲ್ಲಿ ಹರಕೆ ಕಟ್ಟಿಕೊಂಡರೆ ಈಡೇರುತ್ತವೆ’ ಎನ್ನುತ್ತಾರೆ ದೇವಸ್ಥಾನ ಸಮಿತಿ ಮುಖಂಡ ಹುಲಿಕಟ್ಟೆ ದಾಸಪ್ಪ.

ಶಿರಾದಿಂದ ಬಂದ ಜುಂಜೇಶ್ವರ
400 ವರ್ಷಗಳ ಹಿಂದೆ ಗೊಲ್ಲರಹಟ್ಟಿಯಲ್ಲಿ ಹುಚ್ಚು ನಾಯಿ ದಾಳಿ ಸಾಂಕ್ರಾಮಿಕ ಸೋಂಕು ತಗುಲಿತ್ತು, ಇದರ ಪರಿಣಾಮ ಹಟ್ಟಿಯೇ ಒದ್ದಾಡಿತ್ತು. ಅಂಟಿದ್ದ ಸೋಂಕು ವಾಸಿ ಮಾಡಲು ಶಿರಾ ತಾಲ್ಲೂಕು ಬೇವಿನಹಳ್ಳಿಯಿಂದ ಜುಂಜೇಶ್ವರನ ಪ್ರತಿರೂಪ ತಂದು ಗೊಲ್ಲರಹಟ್ಟಿಯಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ಗೊಲ್ಲರಹಟ್ಟಿಗೆ ಜೋತುಬಿದ್ದಿದ್ದ ಸೋಂಕು ತೊಲಗಲು ಆರಂಭಿಸಿತ್ತು. ಹಟ್ಟಿಯ ಜನರು ಅಂದಿನಿಂದ ದೀಪಾವಳಿ ದಿನ ಜುಂಜೇಶ್ವರ ಸ್ವಾಮಿ ಜಾತ್ರೆ ಮಾಡಲು ಆರಂಭಿಸಿದ್ದಾರೆ ಎನ್ನುವ ಐತಿಹ್ಯವಿದೆ.

ಜಾತ್ರೆ ನಿಮಿತ್ತ ಪಿಎಸ್ಐ ವಿಜಯಕೃಷ್ಣ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿತ್ತು. ಮುಖಂಡರಾದ ಎಚ್.ಎಂ.ಮಲ್ಲಿಕಾರ್ಜುನ, ಗುಮಾಸ್ತ ಗಂಗಾಧರ, ಹುಲಿಕಟ್ಟೆ ದಾಸಪ್ಪ, ದಾಸಪ್ಪ ಹನುಮಂತಪ್ಪ, ರಮೇಶ್, ಚಿಕ್ಕಪ್ಪ, ನಾಗೇಂದ್ರಪ್ಪ, ಗಿರೀಶ ಮಲ್ಲೇಶಪ್ಪ, ಹೇಮಣ್ಣ, ಜೆ.ರಮೇಶ್ ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeವಿಶೇಷ ವರದಿಗಳು

ಜು.05 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ :  ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 110/11ಕೆವಿ ಸೌತ್ ವಿದ್ಯುತ್...

Homeವಿಶೇಷ ವರದಿಗಳು

ವ್ಯಕ್ತಿ ಕಾಣೆ : ಪತ್ತೆಗೆ ಮನವಿ

ಬಳ್ಳಾರಿ :  ತಾಲ್ಲೂಕಿನ ಸಂಗನಕಲ್ಲು ಗ್ರಾಮದ ಸಂಗಮೇಶ್ವರ ಶಾಲೆ ಹತ್ತಿರದ ನಿವಾಸಿಯಾದ ಗುರುರಾಜ್ ರಾವ್.ಬಿ ಎನ್ನುವ...

Homeವಿಶೇಷ ವರದಿಗಳು

ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ : ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮ್ಮದ್

ವಿಜಯನಗರ :  ರಾಜ್ಯದಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಸುಮಾರು 2.7 ಲಕ್ಷ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು...

Homeವಿಶೇಷ ವರದಿಗಳು

ಅರಸೀಕೆರೆಯಲ್ಲಿ ಮೋಹರಂ ಆಚರಣೆ : ಸೌಹಾರ್ಧತೆಯ ಮೆರವಣಿಗೆ

ಹರಪನಹಳ್ಳಿ : ತಾಲ್ಲೂಕಿನ ಅರಸೀಕೆರೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಪವಿತ್ರ 'ಮೊಹರಂ' ಹಬ್ಬವನ್ನು ಭಕ್ತಿ, ಸಡಗರ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.