Home ಉಪನ್ಯಾಸಕ ಡಾ. ಅಜ್ಜಯ್ಯಗೆ ಅಂತರರಾಷ್ಟ್ರೀಯ ‘ಗೋಲ್ಡನ್ ಐಕಾನ್’ ಪ್ರಶಸ್ತಿ ಗರಿ
Homeಸುದ್ದಿಗಳು

ಉಪನ್ಯಾಸಕ ಡಾ. ಅಜ್ಜಯ್ಯಗೆ ಅಂತರರಾಷ್ಟ್ರೀಯ ‘ಗೋಲ್ಡನ್ ಐಕಾನ್’ ಪ್ರಶಸ್ತಿ ಗರಿ

Share
Share

ಹರಪನಹಳ್ಳಿ : ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರಬಂಧ ಮಂಡನೆ ಮಾಡಿದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಬೆಣ್ಣೆಹಳ್ಳಿ ಗ್ರಾಮದ ಉಪನ್ಯಾಸಕ ಡಾ. ಅಜ್ಜಯ್ಯ ಅವರಿಗೆ ಪ್ರತಿಷ್ಠಿತ ‘ದಿ ಹ್ಯುಮಾನಿಟಿ ಎಕ್ಸಲೆನ್ಸ್ ಅವಾರ್ಡ್’ ಹಾಗೂ ಅಂತರರಾಷ್ಟ್ರೀಯ ಮಟ್ಟದ ‘2026ನೇ ಸಾಲಿನ ಗೋಲ್ಡನ್ ಐಕಾನ್ ಅವಾರ್ಡ್’ ನೀಡಿ ಗೌರವಿಸಲಾಗಿದೆ.

‘ಏಷಿಯಾ ಇಂಟರ್‌ನ್ಯಾಷನಲ್ ಕಲ್ಚರ್ ರಿಸರ್ಚ್ ಅಕಾಡೆಮಿ ಮತ್ತು ರಿಸರ್ಚ್ನಿ ಯುನಿವರ್ಸಿಟಿ’ಯು ಡಾ. ಅಜ್ಜಯ್ಯ ಅವರು ಮಂಡಿಸಿದ ಪ್ರಬಂಧಗಳ ವೈಶಾಲ್ಯತೆ ಹಾಗೂ ವಿಷಯದ ಗಾಂಭೀರ್ಯತೆಯನ್ನು ಅರಿತು, ಅವರ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಈ ಮನ್ನಣೆ ನೀಡಿದೆ.

ತಮಿಳುನಾಡಿನ ಹೊಸೂರಿನಲ್ಲಿರುವ ಫಾರ್ಚುನರ್ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶೇಷ ಸಮಾರಂಭದಲ್ಲಿ ಡಾ. ಅಜ್ಜಯ್ಯ ಅವರಿಗೆ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಗ್ರಾಮೀಣ ಭಾಗದ ಉಪನ್ಯಾಸಕರೊಬ್ಬರ ಈ ಶೈಕ್ಷಣಿಕ ಸಾಧನೆಗೆ ತಾಲೂಕಿನಾದ್ಯಂತ ಶೈಕ್ಷಣಿಕ ವಲಯದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಈ ವೇಳೆ ಸಂಸ್ಥೆ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎ.ಮನೋಕರಣ್, ಆರ್.ಮನೋಜ್, ಎಲ್‍.ರವಿಕುಮಾರ, ಕಾಳೆಗೌಡ ಅವರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಅಕ್ಟೋಬರ್ 2 ಮತ್ತು 4 ರಂದು ಕೆಇಎ ನೇಮಕಾತಿ ಪರೀಕ್ಷೆ: ಪಾರದರ್ಶಕತೆಗೆ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಸೂಚನೆ

ವಿಜಯನಗರ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಕ್ಟೋಬರ್ 2 ಮತ್ತು 4 ರಂದು ನಡೆಯಲಿರುವ ಭೂ...

Homeಸುದ್ದಿಗಳು

ದೀಕ್ಷಾಭೂಮಿ ಯಾತ್ರೆಗೆ ಅರ್ಜಿ ಆಹ್ವಾನ

ವಿಜಯನಗರ : ಪ್ರಸಕ್ತ ಸಾಲಿನಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾಭೂಮಿಯಲ್ಲಿ ಅಕ್ಟೋಬರ್ 21 ರಂದು ನಡೆಯಲಿರುವ ಪ್ರವರ್ತನಾ...

Homeಸುದ್ದಿಗಳು

ಎಕರೆಗೆ 25 ಸಾವಿರ ಪರಿಹಾರಕ್ಕೆ ಒತ್ತಾಯ

ಹರಪನಹಳ್ಳಿ : ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ತಕ್ಷಣವೇ ಎಕರೆಗೆ...

Homeಸುದ್ದಿಗಳು

ನನ್ನೊಳಗಿನ ಮೌನದ ಮಾತು’ ಕವನ ಸಂಕಲನ

ಹರಪನಹಳ್ಳಿ: ಇಂದಿನ ದಿನಗಳಲ್ಲಿ ಓದುಗರ ಕೊರತೆಯಿಂದಾಗಿ ಕಾವ್ಯದ ಅಭಿರುಚಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ಸಾಹಿತಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.