ಸಿರಿಸುದ್ದಿ.ಕಾಂ, ಹರಪನಹಳ್ಳಿ : ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ಹೊಸದಾಗಿ ಮೂರು ಜನ ಶಿಕ್ಷಕರು ಶಿಕ್ಷಣ ಸಂಯೋಜಕರು (ಇಸಿಒ)ಗಳಾಗಿ ಗುರುವಾರ ಅಧಿಕಾರ ವಹಿಸಿಕೊಂಡರು.
ಹಿಂದಿನ ಶಿಕ್ಷಣ ಸಂಯೋಜಕರುಗಳ ಅವಧಿ ಮುಕ್ತಾಯದ ಹಿನ್ನೆಲೆಯಲ್ಲಿ ಕೆ.ಕಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ವೀರೇಶ್, ಹರಪನಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಲತಾ ರಾಥೋಡ್,ಪಂಪಾನಾಯ್ಕ ಅವರು ಅಧಿಕಾರ ವಹಿಸಿಕೊಂಡರು. ನೂತನ ಇಸಿಒಗಳಿಗೆ ಶಾಲು ಹೊದಿಸಿ, ಪುಷ್ಪಗುಚ್ಚ ಕೊಡುವ ಮೂಲಕ ಹೃದಯಸ್ಪರ್ಶಿಯಾಗಿ ಸ್ವಾಗತಿಸಲಾಯಿತು. ವರ್ಗಾವಣೆಗೊಂಡ ಶಿಕ್ಷಕ ಸಂಯೋಜಕರಾದ ಕಬೀರ್ ನಾಯ್ಕ, ಘನೀಫ್ ಸಾಬ್ ಅವರನ್ನು ಬೀಳ್ಕೊಡಲಾಯಿತು.
ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಷಣ್ಮುಖಪ್ಪ, ಬಿ.ಆರ್.ಸಿ. ಹೊನ್ನತ್ತೆಪ್ಪ, ವ್ಯವಸ್ಥಾಪಕ ದೇವೋಜಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಪ್ರೌಢಶಾಲೆ ಶಿಕ್ಷಕರಾದ ಎನ್.ಜಿ.ಮನೋಹರ, ರಾಜ್ಯ ಪರಿಷತ್ ಸದಸ್ಯರಾದ ಎಂ.ಶರೀಫ್, ಮಂಜುನಾಥ ಪೂಜಾರ್, ಜಿಲ್ಲಾ ಉಪಾಧ್ಯಕ್ಷ ಕೆ.ಅಂಜಿನಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಸೂರ್ಯನಾಯ್ಕ, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ತಾಲ್ಲೂಕು ಗುರುಮೂರ್ತಿ, ಶಿಕ್ಷಕರ ಕಲಾ ಸಂಘದ ಅಧ್ಯಕ್ಷ ಕರಿಬಸಪ್ಪ, ಪಿ.ಸುಬ್ಬಣ್ಣ, ಡಿ.ಶಶಿಕಲಾ, ಪೂಜಾರ ಮಂಜುನಾಥ, ಹುಸೇನ್ ಪೀರ, ಕಬೀರ್ ನಾಯ್ಕ, ಕೊಟ್ರೇಶ್, ಗಿರಿರಾಜ, ಜಯಮಾಲತೇಶ್, ಸಾವಿತ್ರಿಬಾಪುಲೆ ಸಂಘದ ಟಿ.ಎಚ್.ಎಂ.ಲತಾ, ವೀರಮ್ಮ, ಸಂಗಯ್ಯ, ಬಿಆರ್ಪಿ ವಾಗೀಶ್, ಜಮಾಲುದ್ದೀನ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಶಿವಯೋಗಿ, ಪಿ.ರುದ್ರಚಾರಿ, ರುದ್ರಪ್ಪ, ದಯಾನಂದ, ಶಂಕರಮೂರ್ತಿ ಇದ್ದರು.