Home ಕ್ರೀಡೆ ಹಂಪಿ ಉತ್ಸವ ಮಹಿಳಾ ಕುಸ್ತಿ ಪಂದ್ಯಾವಳಿ : ಮಹಿಳಾ ಕಂಠೀರವ ಪ್ರಶಸ್ತಿ ಮುಡಿಗೇರಿಸಿಕೊಂಡ ರಾಧಿಕಾ ವಿಶ್ವನಾಥ ತೊಂಡಿಹಾಳ
ಕ್ರೀಡೆಸುದ್ದಿಗಳು

ಹಂಪಿ ಉತ್ಸವ ಮಹಿಳಾ ಕುಸ್ತಿ ಪಂದ್ಯಾವಳಿ : ಮಹಿಳಾ ಕಂಠೀರವ ಪ್ರಶಸ್ತಿ ಮುಡಿಗೇರಿಸಿಕೊಂಡ ರಾಧಿಕಾ ವಿಶ್ವನಾಥ ತೊಂಡಿಹಾಳ

Share
Share

ವಿಜಯನಗರ :
ಹಂಪಿ ಉತ್ಸವ-2026 ಅಂಗವಾಗಿ ಜರುಗಿದ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ 58 ಕೆ.ಜಿ. ಮೇಲ್ಪಟ್ಟ ವಿಭಾಗದಲ್ಲಿ ರಾಧಿಕಾ ವಿಶ್ವನಾಥ ತೊಂಡಿಹಾಳ ಪ್ರಥಮ ಸ್ಥಾನ ಪಡೆದು, ಮಹಿಳಾ ಕಂಠೀರವ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದೇ ವಿಭಾಗದಲ್ಲಿ ರಕ್ಷಿತಾ ನಾರಾಯಣ ಸೂರ್ಯವಂಶಿ ದ್ವಿತೀಯ ಸ್ಥಾನ ಪಡೆದು ರನ್ನರ್ ಅಪ್ ಆಗಿದ್ದಾರೆ.
ಉತ್ಸವ ಎರಡನೇ ದಿನವಾದ ಶನಿವಾರ ಹೊಸಮಲಪನಗುಡಿಯ ಗಾಳೆಮ್ಮ ದೇವಸ್ಥಾನದ ಹಿಂಭಾಗದಲ್ಲಿನ ವಿದ್ಯಾರಣ್ಯ ಪೀಠದÀ ಹೈಸ್ಕೂಲ್ ಮೈದಾನದಲ್ಲಿ ಮಹಿಳಾ ಕುಸ್ತಿ ಪಂದ್ಯಾವಳಿಗಳು ಜರುಗಿದವು.
55 ರಿಂದ 57 ಕೆ.ಜಿ.ವಿಭಾಗದ ಅಂತಿಮ ಪಂದ್ಯದಲ್ಲಿ ಕಾವ್ಯ ತುಕರಾಮ ದಾನ್ವೇನವರ ಪ್ರತಿಸ್ಪರ್ಧಿ ಸೋನಿಯಾ ಗೋಪಾಲ ಜಾಧವ ಅವರ ವಿರುದ್ದು ಸೆಣಸಾಡಿ ಪ್ರಥಮ ಸ್ಥಾನ ಹಂಪಿ ಮಹಿಳಾ ಕೇಸರಿ ಪಟ್ಟ ತಮ್ಮದಾಗಿಸಿಕೊಂಡರು. ಸೋನಿಯಾ ಗೋಪಾಲ ಜಾಧವ ದ್ವೀತಿಯ ಸ್ಥಾನಕ್ಕೆ ತೃಪ್ತಿ ಪಟ್ಟಕೊಂಡರು.
51 ರಿಂದ 54 ಕೆ.ಜಿ.ವಿಭಾಗದಲ್ಲಿ ಐಶ್ವರ್ಯ ಪಿ ಕರಿಗಾರ ಪ್ರಥಮ ಸ್ಥಾನ ಪಡೆದುಕೊಂಡು ಹಂಪಿ ಕುಮಾರಿ ಎನಿಸಿಕೊಂಡರು. ಗಂಗೋತ್ರಿ ಮಾರುತಿ ಹುಲಿಕೊಪ್ಪನವರ ದ್ವಿತೀಯ ಸ್ಥಾನ ಪಡೆದರು.
50 ಕೆ.ಜಿ. ವಿಭಾಗದಲ್ಲಿ ಬಾಲಕಿ ಗೋಪನ್ವ ಮಂಜುನಾಥ ಖೋಡ್ಕಿ ಹಂಪಿ ಕಿಶೋರಿ ಎಂದೆನಿಸಿದರು. ಬಾಲಕಿ ಜಾನವಿ ದ್ವಿತೀಯ ಸ್ಥಾನ ಪಡೆದರು.
ವಿಜೇತ ಅಭ್ಯರ್ಥಿಗಳಿಗೆ ಹಂಪಿ ಉತ್ಸವ ಕ್ರೀಡಾ ಸಮಿತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಜಿ.ಪಂ.ಸಹಾಯಕ ಯೋಜನಾಧಿಕಾರಿ ಉಮೇಶ್ ಸೇರಿದಂತೆ ಮತ್ತಿತರು ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹ: ತಹಸೀಲ್ದಾರರಿಗೆ ಬಿಜೆಪಿ ವತಿಯಿಂದ ಮನವಿ ಸಲ್ಲಿಕೆ

 ಹರಪನಹಳ್ಳಿ : ಇಂದು ಮಂಡಲ ಬಿಜೆಪಿ ವತಿಯಿಂದ ಬರಗಾಲದ ಕಾರಣದಿಂದ ಹರಪನಹಳ್ಳಿ ತಾಲೂಕನ್ನು ಬರಪೀಡಿತ ತಾಲೂಕನ್ನಾಗಿ...

Homeಸುದ್ದಿಗಳು

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ತಾಲೂಕಿನ ವಿವಿಧ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಖಾಲಿಯಿರುವ...

Homeಸುದ್ದಿಗಳು

ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ಹೊಸಪೇಟೆ ತಾಲೂಕಿನ ಸಮಗ್ರ ಗಣಿ ಪರಿಸರ ಪುನಶ್ಚೇತನ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ...

Homeಸುದ್ದಿಗಳು

ಲಾಕಪ್ ಡೆತ್ ಪ್ರಕರಣ ಸಿಬಿಐ ತನಿಖೆಗೆ ಆಗ್ರಹ

ಹರಪನಹಳ್ಳಿ: ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಯುವಕನ ಲಾಕಪ್ ಡೆತ್ ಪ್ರಕರಣವನ್ನು ತೀವ್ರವಾಗಿ ಖಂಡಿಸಿ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು  ಸಿಪಿಐ(ಎಂಎಲ್) ಹಾಗೂ ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘಗಳ ಮುಖಂಡರು ಆಗ್ರಹಿಸಿದ್ದಾರೆ. ಚಿತ್ತಾರಗೇರಿಯಲ್ಲಿರುವ  ಮೃತ ಖಲೀಲ್‌ ಅವರ ಮನೆಗೆ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.