ಹರಪನಹಳ್ಳಿ : ಪ್ರತಿಯೊಬ್ಬರು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ತಿಳಿಸಿದರು. ನಗಗರ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬಿಜೆಪಿ ಮಂಡಲದಿಂದ ಶನಿವಾರ ಜರುಗಿದ ವಿಶೇಷ ಮತದಾರರ ಪರಿಷ್ಕರಣೆ ಕುರಿತು ಮಂಡಲ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಬಿಜೆಪಿ ಪಕ್ಷದ ಕಾರ್ಯಕರ್ತರು ಎಸ್‍ಐಆರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತಮ್ಮ ಮತಗಟ್ಟೆಯಲ್ಲಿ ಯಾರಿಗೆ ತೊಡಕು ಉಂಟಾದರೆ, ಖುದ್ದು ನಮ್ಮ ಕಾರ್ಯಕರ್ತರು ಅವರಿಗೆ ಸಹಕರಿಸಿ ಎಂದು ಹೇಳಿದರು.
ಮಂಡಲ ಅಧ್ಯಕ್ಷ ಕೆ.ಶೇಖರಪ್ಪ, ಪ್ರಧಾನ ಕಾರ್ಯದರ್ಶಿ ಪಂಪಾನಾಯ್ಕ, ಎಸ್.ಸಿ.ಮೋರ್ಚಾ ಅಧ್ಯಕ್ಷ ಮಂಜುನಾಥ ಆರ್.ನಾಯ್ಕ, ಜಿಲ್ಲಾ ಕಾರ್ಯದರ್ಶಿ ಆರ್.ಲೋಕೇಶ, ಉದಯಕುಮಾರ, ಪೂರ್ಯನಾಯ್ಕ, ಟಿ.ಮನೋಜ್, ನಿಂಗರಾಜ್, ವಿಜಯಲಕ್ಷ್ಮಿ, ಎಚ್.ಎಂ.ಕೊಟ್ರಯ್ಯ, ಮಂಜುನಾಥ ಹಾಗೂ ಮುಖಂಡರಿದ್ದರು
Leave a comment