ಹರಪನಹಳ್ಳಿ : ಸಮಾಜದ ಆಗುಹೋಗುಗಳ ಸತ್ಯಾಸತ್ಯತೆ ಘಟನೆಗಳನ್ನು ತೋರಿಸುವ ಮಾದ್ಯಮ ಕ್ಷೇತ್ರ ಕನ್ನಡ ರೀತಿಯಲ್ಲಿ ಕಾರ್ಯನಿರ್ವಹಿಸುತಿದೆ ಎಂದು ಶಾಸಕಿ ಎಂ ಪಿ ಲತಾ ಮಲಲಿಕಾರ್ಜುನ ಹೇಳಿದರು.
ನಗರದ ಬಾಬು ಜಗಜೀವನ್ ರಾಮ್ ಸಭಾ ಭವನದಲ್ಲಿ ಸೊಮವಾರ ಕರ್ನಾಟಕ ಪ್ರೆಸ್ ಕ್ಲಬ್ ತಾಲೂಕು ಸಮಿತಿ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪತ್ರಿಕೋದ್ಯಮ ಸೂಕ್ಷ್ಮ ಸಂವೇದನೆಯಿಂದ ಕೂಡಿದ್ದು ಅನ್ಯಾಯಗಳ ವಿರುದ್ದ ಹೋರಾಡುವ ಶಕ್ತಿ ಪತ್ರಿಕೋದ್ಯಮಕ್ಕಿದೆ, ಪತ್ರಕರ್ತರು ಸಂವಿಧಾನದಡಿ ಕಣ್ಣು, ಕಿವಿ ತೆರೆದು ಸಮಾಜದ ಅಂಕುಡಕುಗಳನ್ನು ಸಾಣೆಯನ್ನು ಹಿಡಿಯುವ ಕೆಲಸ ಮಾಡಬೇಕು, ಪತ್ರಕರ್ತರಿಗೆ ಸರ್ಕಾರದಿಂದ ಯಾವುದೇ ಅನುದಾನವಿಲ್ಲದಿರುವುದು ಬೇಸರದ ಸಂಗತಿ ಹಾಗಾಗಿ ಉಪ ಕಸಬು ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಡಿವೈಎಸ್ಪಿ ಡಾ. ಸಂತೋಷ್ ಚವ್ಹಾಣ್ ಮಾತನಾಡಿ. ಪತ್ರಿಕೆಗಳು ಜ್ಞಾನರ್ಜನೆಯ ಪ್ರತೀಕವಾಗಿದ್ದು, ವಿದ್ಯಾರ್ಥಿ ದಿಸೆಯಿಂದ ಪತ್ರಿಕೆಗಳನ್ನು ರೂಡಿಸಿಕೊಳ್ಳಬೇಕು, ಸಂವಿಧಾನದ ನಾಲ್ಕನೆ ಅಂಗವಾಗಿರುವ ಪತ್ರಿಕಾ ಮಾದ್ಯಮವು ಪೋಲೀಸ್ ಇಲಾಖೆಯ ಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ ಡಿ ಅಣ್ಣಪ್ಪ ಮಾತನಾಡಿ. ಮಾದ್ಯಮಗಳು ಸಂವೇದನೆ ಶೀಲತೆಯನ್ನು ಮೈಗೂಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು, ವರದಿಗಾರರ ಬದುಕು ಶೋಚನೀಯವಾಗಿದೆ, ಸಮಾಜದ ಸೇವೆಯಲ್ಲಿ ತೊಡಗಿರುವ ಪತ್ರಕರ್ತರಿಗೆ ಜೀವನೋಪಾಯಕ್ಕೆ ಕನಿಷ್ಟ ಸೌಲಭ್ಯವನ್ನಾದರೂ ಒದಗಿಸಬೇಕೆಂದರು.
ಅಂಜುಮನ್ ಸಮಿತಿ ಅಧ್ಯಕ್ಷ ಎನ್ ಎಂ ನೂರ್ ಅಹ್ಮದ್ ಮಾತನಾಡಿ. ವಿಶ್ವದಲ್ಲಿ ಚಾಕುವಿಗಿಂತ ಹರಿತವಾದ ಲೇಖನಿ ಕಾರ್ಯನಿರ್ವಹಿಸುತ್ತಿದೆ, ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಬರವಣಿಗೆ ಮೂಲಕ ಜಾಗೃತಿ ಮೂಡಿಸಿ ಹೋರಾಟ ಮಾಡಿವೆ ಎಂದು ಸ್ಮರಿಸಿದರು.
ಪತ್ರಿಕಾ ದಿನಾಚರಣೆ ಅಂಗವಾಗಿ ಸಮಾಜ ಸೇವಕ ಪ್ರಶಸ್ತಿಯನ್ನು ಹಾರಾಳ್ ಅಶೋಕ್, ದಕ್ಷ ಅಧಿಕಾರಿ ಪ್ರಶಸ್ತಿ ಮಾಲತೇಶ್ ಮುದ್ದಜ್ಜಿ, ಶಿಕ್ಷಕ ರತ್ನ ಪ್ರಶಸ್ತಿ ಟಿ ಎಂ ರಾಜಶೇಖರ್, ಆದರ್ಶ ದಂಪತಿ ಪ್ರಶಸ್ತಿ ಸ್ವಪ್ನ ಮಲ್ಲಿಕಾರ್ಜುನ ಹಾಗೂ ಎಚ್. ಮಲ್ಲಿಕಾರ್ಜುನ, ಉತ್ತಮ ಸಮಾಜ ಸೇವೆಗಾಗಿ ಪೂಜಾರ್ ಮರಿಯಪ್ಪ ಅವರಿಗೆ ನೀಡಿ ಗೌರವಿಸಲಾಯಿತು.
ಈ ವೇಳೆ ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ, ಪುರಸಭೆ ಮಾಜಿ ಅಧ್ಯಕ್ಷ ಹಾರಾಳ್ ಅಶೋಕ್, ಚಿತ್ರದುರ್ಗ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ, ಹಾಗೂ ಹರಪನಹಳ್ಳಿ ಸ ನೌ ಸಂ ತಾಲೂಕು ಅಧ್ಯಕ್ಷ ಎನ್ ಜಿ ಮನೋಹರ್, ಕರ್ನಾಟಕ ಪ್ರೆಸ್ ಕ್ಲಬ್ ಜಿಲ್ಲಾಧ್ಯಕ್ಷ ಪ್ರಕಾಶ್ ಕಾಕಬಾಳು, ಪ್ರಧಾನ ಕಾರ್ಯದರ್ಶಿ ಗೀತಾ ಸುರೇಶ್, ಹಾಗೂ ತಾಲೂಕು ಅಧ್ಯಕ್ಷ ಎ ನಾಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಬಿ ವೈ ದುರುಗೇಶ್, ಗೌರವಾದ್ಯಕ್ಷ ಕೆ ಉಚ್ಚೆಂಗೆಪ್ಪ, ರಾಜ್ಯ ಸಮಿತಿ ಸದಸ್ಯ ಡಿ ವಿಶ್ವನಾಥ, ಹಾಗೂ ಅನೇಕರಿದ್ದರು.
Leave a comment