Home  ಹರಪನಹಳ್ಳಿ : ಗರ್ಭಿಣಿ ಹತ್ಯೆ ಖಂಡಿಸಿ ಪ್ರತಿಭಟನೆ
Homeಸುದ್ದಿಗಳು

 ಹರಪನಹಳ್ಳಿ : ಗರ್ಭಿಣಿ ಹತ್ಯೆ ಖಂಡಿಸಿ ಪ್ರತಿಭಟನೆ

Share
 ಹರಪನಹಳ್ಳಿ : ಗರ್ಭಿಣಿ ಹತ್ಯೆ ಖಂಡಿಸಿ ಪ್ರತಿಭಟನೆ
Share

ಹರಪನಹಳ್ಳಿ : ಇನಾಂ ವೀರಾಪುರ ಗ್ರಾಮದಲ್ಲಿ ಗರ್ಭಿಣಿ ಮಾನ್ಯ ವಿವೇಕಾನಂದ ದೊಡ್ಮನಿ ಅವರ ಮರ್ಯಾದೆ ಹತ್ಯೆ  ಖಂಡಿಸಿ  ಅಂಬೇಡ್ಕರ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಶನಿವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ತಾಲ್ಲೂಕು ಆಡಳಿತ ಆವರಣದಲ್ಲಿ ಜಮಾಯಿಸಿದ ಕಾರ್ಯಕರ್ತರು ಅವಳಿ ಕೊಲೆ ಮಾಡಿದ 6 ಜನ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಉಳಿದ 8 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ, ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮಾದಿಗ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದ ಲಿಂಗಾಯತ ಜನಾಂಗದ ಮಾನ್ಯ ಪಾಟೀಲ್ ಅವರು ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಿದ್ದರು. ಆ ಮದುವೆಯಾಗಿ 7 ತಿಂಗಳು ಗರ್ಭಿಣಿ ಆಗಿದ್ದಾಗ ಆಕೆಯ ಮನೆಯವರು ಮರ್ಯಾದೆ ಹತ್ಯೆ ಮಾಡಿ, ಆಕೆ ಮತ್ತು ಮಗುವನ್ನು ಕೊಂದು ಹಾಕಿದ್ದಾರೆ. ಮಾನವ ಕುಲಕ್ಕೆ ಅಘಾತ ನೀಡಿರುವ ಇಂತಹ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗರ್ಭಿಣಿ ಮಾನ್ಯಳಿಗೆ ತಾಯಿಕಾರ್ಡ್ ಮಾಡುವ ಸಂದರ್ಭದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ತುಂಬಾ ತೊಂದರೆ ಕೊಟ್ಟಿದ್ದಾರೆ. ಆ ಗ್ರಾಮದ ಆಡಳಿತಾಧಿಕಾರಿಯು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೊಡಲು ನಿರಾಕರಿಸಿದ್ದಾರೆ. ಇಂತಹ ಚಿತ್ರಹಿಂಸೆಯ ಜೊತೆ ಬದುಕುತ್ತಿದ್ದ ಕುಟುಂಬಕ್ಕೆ ತೀವ್ರ ಅನ್ಯಾಯವಾಗಿದೆ. ಮಾನ್ಯಗಳನ್ನು ಕಳೆದುಕೊಂಡಿರುವ ಆಕೆಯ ಪತಿ ವಿವೇಕಾನಂದನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು. ಮಾನ್ಯ ಮರ್ಯಾದೆ ಹತ್ಯೆ ವಿಶೇಷ ಕಠಿಣ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಎನ್.ಮಾರುತಿ, ಕಾನೂನು ಸಲಹೆಗಾರ ಎಸ್.ಗೋಣೆಪ್ಪ, ವಸಂತ್ ಬಿ, ಎನ್.ಸಂಜೀವಪ್ಪ, ವಿ.ಮಲ್ಲಿಕಾರ್ಜುನ, ಪಕ್ಕೀರಪ್ಪ ಮೈದೂರು, ಎಸ್.ಪ್ರಭಾಕರ, ಎಚ್.ಪರಶುರಾಮ್, ಜಗದೀಶ ಪೂಜಾರ ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ವಸತಿ ಶಾಲೆಗಳ 6ನೇ ತರಗತಿ : ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಾತಿಗಾಗಿ...

Homeಸುದ್ದಿಗಳು

ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹ: ತಹಸೀಲ್ದಾರರಿಗೆ ಬಿಜೆಪಿ ವತಿಯಿಂದ ಮನವಿ ಸಲ್ಲಿಕೆ

 ಹರಪನಹಳ್ಳಿ : ಇಂದು ಮಂಡಲ ಬಿಜೆಪಿ ವತಿಯಿಂದ ಬರಗಾಲದ ಕಾರಣದಿಂದ ಹರಪನಹಳ್ಳಿ ತಾಲೂಕನ್ನು ಬರಪೀಡಿತ ತಾಲೂಕನ್ನಾಗಿ...

Homeಸುದ್ದಿಗಳು

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ತಾಲೂಕಿನ ವಿವಿಧ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಖಾಲಿಯಿರುವ...

Homeಸುದ್ದಿಗಳು

ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ಹೊಸಪೇಟೆ ತಾಲೂಕಿನ ಸಮಗ್ರ ಗಣಿ ಪರಿಸರ ಪುನಶ್ಚೇತನ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.