ಹರಪನಹಳ್ಳಿ: ವಯಸ್ಸಾದ ತಂದೆ ತಾಯಿ ನೋಡಿಕೊಳ್ಳಲು ಆಗಲಿಲ್ಲ ಎನ್ನುವ ಬೇಸರದ್ದಲ್ಲಿದ್ದ ಸರ್ಕಾರಿ ಶಾಲೆ ಶಿಕ್ಷಕರೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಕ್ರವಾರ ಜರುಗಿದೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕು ಮರಬ್ಬಿಹಾಳು ಸರ್ಕಾರಿ ಶಾಲೆಯ ಜಗದೀಶ (41) ಸಾವನ್ನಪ್ಪಿದ ಹಿಂದಿ ಶಿಕ್ಷಕ.
ಈಚೆಗೆ ಜಾತಿ ಸಮೀಕ್ಷೆ ಗಣತಿ ಕಾರ್ಯ ಮುಗಿಸಿ ಹರಪನಹಳ್ಳಿ ನಗರದ ಬಾಡಿಗೆ ಮನೆಗೆ ಬಂದಿದ್ದರು. ಮೃತ ಶಿಕ್ಷಕನಿಗೆ ಪತ್ನಿ, ತಂದೆ, ತಾಯಿ ಹಾಗೂ ಪುತ್ರ, ಪುತ್ರಿ ಇದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.