ವಾಕಿಂಗ್ ಹೋಗಿದ್ದ ವ್ಯಕ್ತಿ ಅಪಹರಣ: 5 ಕೋಟಿ ಹಣಕ್ಕೆ ಬೇಡಿಕೆ

newbietechy.blog@gmail.com
2 Min Read

ಸಿರಿಸುದ್ದಿ.ಕಾಂ.ಹೊಳಲು: ಬೆಳಿಗ್ಗೆ ವಾಕಿಂಗ್ ಹೋಗಿದ್ದ ವ್ಯಕ್ತಿಯನ್ನು ಅಪಹರಣ ಮಾಡಿ 5ಕೋಟಿ ಹಣ ಕೊಡುವಂತೆ ಬೇಡಿಕೆ ಇಟ್ಟ ಘಟನೆ ಹೂವಿನಹಡಗಲಿ ತಾಲೂಕು ಹೊಳಲು ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಮಂಜುನಾಥ ಶೇಜವಾಡಕರ್ ತಂದೆ ನಾಗೇಶ್ ಶೇಜವಾಡಕರ್ 58ವರ್ಷ ಅಪಹರಣವಾದ ವ್ಯಕ್ತಿ.

ಮಂಜುನಾಥ ಪ್ರತಿದಿನ ಬೆಳಿಗ್ಗೆ ಎದ್ದು 5.30ಕ್ಕೆ ಮೈಲಾರ ರಸ್ತೆಯಲ್ಲಿ ದೂರದ ಸಾಧನ ಶಾಲೆಯವರೆಗೂ ವಾಕಿಂಗ್ ಹೋಗಿ 6.30ಕ್ಕೆ ಬರಳಿ ಮನಗೆ ಬರುವುದು ರೂಡಿ. ಶುಕ್ರವಾರ ಬೆಳಿಗ್ಗೆೆ ಎಂದಿನಂತೆ ವಾಕಿಂಗ್ ಹೋಗಿದ್ದು, ಆದರೆ ವಾಕಿಂಗ್ ಹೋದವರು 8 ಗಂಟೆಯಾದರೂ ಮನೆಗೆ ಬಾರದಿದ್ದಾಗ ಮನೆಯಲ್ಲಿದ್ದ ಮಡದಿ ಗಾಬರಿಯಿಂದ ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ.

ಅಷ್ಟೊತ್ತಿಗಾಗಲೆ ಮಂಜುನಾಥ ಇವರ ಮೊಬೈಲ್ ನಿಂದ ಅಪಹರಣಕಾರರು ದಾವಣಗೆರೆಯಲ್ಲಿರುವ ವೈದ್ಯರಾದ ಮಂಜುನಾಥ ಇವರ ಹಿರಿಯ ಸಹೋದರಿ ಡಾ. ಮಂಜುಳಾ ಇವರಿಗೆ ವಾಟ್ಸಾಪ್ ಕಾಲ್‌ಮಾಡಿ ಮಂಜುನಾಥ ಇವರ ಕಡೆಯಿಂದ ಮಾತನಾಡಿಸಿದ್ದಾರೆ.

ಈ ವೇಳೆ ಮಂಜುನಾಥ ನನ್ನನ್ನು ಯಾರೋ ಕಾರಲ್ಲಿ ಅಪಹರಣ ಮಾಡಿ ಕಟ್ಟಿಹಾಕಿದ್ದಾರೆ 5 ಕೋಟಿ ಹಣ ಕೊಡಬೇಕೆಂದು ಹೇಳುತ್ತಿದ್ದಾರೆ ಎಂದು ತಿಳಿಸುತ್ತಲೆ, ಅಪಹರಣ ಕಾರ ನೇರವಾಗಿ ಮಂಜುನಾಥ ಸಹೋದರಿಯ ಹತ್ತಿರ ಮಾತನಾಡಿ ಬೇಗನೆ ಹಣ ನೀಡಿ ನಮಗೂ ಇವರಿಗೂ ಯಾವುದೇ ವಯಕ್ತಿಕ ದ್ವೇಷ ಇಲ್ಲಾ, ನಮಗೆ ಹಣ ಬೇಕು ಅಷ್ಟೆ ಎಂದಿದ್ದಾರೆ. ಅದಕ್ಕೆ ಡಾ.ಮಂಜುಳಾ ಇವರು ಪ್ರತಿಕ್ರಿಯಿಸಿ ಅಷ್ಟೊಂದು ಹಣ ನಮ್ಮಿಂದ ನೀಡಲು ಆಗುವುದಿಲ್ಲಾ ಏನು ಮಾಡುವುದು ನೀವೇ ಹೇಳಿ ಎಂದಾಗ ಅಪಹರಣ ಕಾರ ಎಷ್ಟು ನೀಡುತ್ತೀರಿ ಎಂದು ಕೇಳಿದ್ದಾನೆ.
ಅದಕ್ಕೆ ಇವರು ಒಂದು ಲಕ್ಷ ಮಾತ್ರ ನೀಡಲು ಸಾಧ್ಯ ಎಂದಾಗ ನಾವು ಕೇಳಿದಷ್ಟು ಹಣ ನೀಡದಿದ್ದರೆ ನಿಮ್ಮ ತಮ್ಮನ ಬಾಡಿ ಕೂಡಾ ಸಿಗುವುದಿಲ್ಲಾ ಎಂದು ಹೆದರಿಸಿದ್ದಾರೆ.

ಮೂಲತಃ ಬಂಗಾರ ಆಭರಣ ತಯಾರಿಕೆ ಮತ್ತು ಮಾರಾಟ ಮಾಡುತ್ತಿದ್ದ ಇವರು ಹಲವು ವರ್ಷಗಳಿಂದ ವ್ಯಾಪಾರವನ್ನು ನಿಲ್ಲಿಸಿದ್ದರು. ವಿಷಯ ತಿಳಿದ ಕೂಡಲೇ ಹಿರೇಹಡಗಲಿ ಪಿ.ಎಸ್.ಐ ಭರತ್ ಪ್ರಕಾಶ ಇವರು ಕಾರ್ಯನ್ಮುಖರಾಗಿ ಮೈಲಾರ ರಸ್ತೆಯಲ್ಲಿರುವ ಸಿ.ಸಿ ಕ್ಯಾಮೆರಗಳನ್ನು ಪರಿಶೀಲಿಸಿದರು.

ಆದರೆ ಮದ್ಯಾಹ್ನದ ವರೆಗೂ ಯಾವುದೆ ಸಾಕ್ಷಿಗಳು ದೊರೆಯಲಿಲ್ಲಾ. ಸ್ಥಳಕ್ಕೆ ಹೂವಿನಹಡಗಲಿ ಸಿಪಿಐ ದೀಪಕ್ ಭೂಸರೆಡ್ಡಿ ಬೇಟಿ ನೀಡಿ ವಿಶೇಷ ತಂಡ ರಚನೆ ಮಾಡುವ ಮೂಲಕ ತನಿಖೆ ನಡೆಸಿದ್ದಾರೆ. ಈ ಕುರಿತು ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article
Leave a Comment