ಜೆಸಿಐ ಸಂಸ್ಥೆ ವಲಯ ಅಧ್ಯಕ್ಷರಾಗಿ ಮಧುಸೂದನ ನಾವಡ ಗೆಲುವು

newbietechy.blog@gmail.com
1 Min Read

ಸಿರಿಸುದ್ದಿ.ಕಾಂ, ಶಿವಮೊಗ್ಗ: ನಗರದ ಒಕ್ಕಲಿಗರ ಭವನದಲ್ಲಿ ಜರುಗಿದ ವಲಯ ಸಮ್ಮೇಳನದಲ್ಲಿ ಜ್ಯೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ ವ್ಯಕ್ತಿತ್ವ ವಿಕಸನ ಸಂಸ್ಥೆಯ ವಲಯ-24ರ ವಲಯ ಅಧ್ಯಕ್ಷರಾಗಿ ಜೆಎಫ್ಡಿ ಮಧುಸೂದನ ನಾವಡ ಭಾನುವಾರ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಬಯಸಿ ಹೊಸನಗರ ಡೈಮೆಂಟ್ ಘಟಕದ ಜೆಎಫ್ಡಿ ಮಧುಸೂದನ ನಾವಡ ಹಾಗೂ ಜೆಸಿಐ ಧಾರವಾಡ ವಿದ್ಯಾಕಾಶಿ ಘಟಕದ ಜೆಸಿ ಪ್ರವೀಣ್ ದೇಶಪಾಂಡೆ ಅವರು ನಾಮಪತ್ರ ಸಲ್ಲಿಸಿದ್ದರು. ಮತದಾನ ಪ್ರಕ್ರಿಯೆ ಮುಕ್ತಾಯದ ಬಳಿಕ ಮಧುಸೂದನ ನಾವಡ ಜಯಶಾಲಿಯಾಗಿದ್ದಾರೆ.

4 ಉಪಾದ್ಯಕ್ಷ ಸ್ಥಾನಗಳಿಗೆ ಸ್ಪರ್ಧಿಸಿದ್ದ ಆರು ಜನರ ಪೈಕಿ ಜೆಸಿಐ ರಾಣೆಬೆನ್ನೂರು ಜೆಸಿ ಕುಮಾರ ಬೆಣ್ಣಿ , ಜೆಸಿಐ ತೀರ್ಥಹಳ್ಳಿಯ ಜೆಸಿ ಅಭಿಜಿತ್ ಹಿರಿಯಾ, ಜೆಸಿಐ ಹಗರಿಬೊಮ್ಮನಹಳ್ಳಿ ಸನ್ ಪ್ಲವರ್, ಜೆಸಿ ಅಮೃತ್ ಚಟ್ರಿಕಿ, ಜೆಸಿಐ ಶಿವಮೊಗ್ಗ ಸ್ಟಾರ್ಸ್ ಜೆಸಿ ಗಣೇಶ ಪೈ ಅವರು ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಪಡೆದ ವಿಜಯಶಾಲಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.
ಜೆಸಿಐ ಕಂಪ್ಲಿ ಸೋನಾ ರಸೂಲ್, ಜೆಸಿಐ ಶಿವಮೊಗ್ಗ ಮೆಟ್ರೊದ ಜೆಸಿ ಪ್ರಮೋದ ಶಾಸ್ತ್ರಿ, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಜೆಸಿ ಎಂ.ಗಣೇಶ್ ಅವರು ವಲಯ ನಿರ್ದೇಶಕರುಗಳಾಗಿದ್ದಾರೆ.

ಕೇರಳದ ಜೆಸಿ ವರ್ಷ ಮೆನನ್ ಚುನಾವಣೆ ಅಧಿಕಾರಿಯಾಗಿದ್ದರು. ಚುನಾವಣೆ ಸಮಿತಿ ಅಧ್ಯಕ್ಷರಾಗಿ ಜೆಸಿ ಚನ್ನವೀರೇಶ್ ಹಾವಣಗಿ ಕರ್ತವ್ಯ ನಿರ್ವಹಿಸಿದರು. ನ್ಯಾಷನಲ್ ಡೈರೆಕ್ಟರ್ ಜೆಸಿ ಅನುಷ್ ಗೌಡ, ವಲಯ ಅಧ್ಯಕ್ಷ ಜೆಸಿಐ ಸೆನಟರ್ ಗೌರೀಶ್ ಭಾರ್ಗವ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Share This Article
Leave a Comment