ಹರಪನಹಳ್ಳಿ : 3 ಸೆಂಟ್ಸ್ 20 ಸೆಂಟ್ಸ್ ವರೆಗೆ ಭೂಮಿ ಅಳತೆಯ ತುಂಡುಭೂಮಿ ನೊಂದಾಣಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡದೇ ರೈತರನ್ನು ಸರ್ಕಾರ ಸಂಕಷ್ಟಕ್ಕೆ ಸಿಲುಕಿಸಿದೆ. ಎಲ್ಲ ಪಶು ಸಂಗೋಪನೆ ಆಸ್ಪತ್ರೆಗಳಲ್ಲಿ ಜಾನುವಾರುಗಳಿಗೆ ಸಕಾಲಕ್ಕೆ ಲಸಿಕೆ ದೊರಕುವ ವ್ಯವಸ್ಥೆ ಕಲ್ಪಿಸಬೇಕು. ಬೆಳೆಗಳಿಗೆ ಸಿಂಪಡಿಸುವ ಬೀಗ ಗೊಬ್ಬರ ಕೀಟನಾಶಕ ಅಗತ್ಯಾನುಸಾರ ದೊರಕಿಸಬೇಕು. ರಾಜ್ಯದಲ್ಲಿ ಮದ್ಯ (ಸರಾಯಿ) ನಿಷೇಧಿಸಬೇಕು ಎಂದು ಆಗ್ರಹಿಸಿದರು. ಬೆಳಿಗ್ಗೆ 6 ಗಂಟೆಯಿಂದ ಮದ್ಯಾಹ್ನ 1ರ ವರೆಗೆ ನೀರಾವರಿ ಜಮೀನುಗಳಿಗೆ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಸಮಿತಿ ಮುಖಂಡರಾದ ಕರಿಬಸವನಗೌಡ, ಶಿವಶಂಕರಗೌಡ, ಹಾಳಪ್ಪ, ಶಿವಪುತ್ರಪ್ಪ, ಲಕ್ಷ್ಮಿಕಾಂತ್ ಈಡಿಗರ, ಸಿದ್ದಲಿಂಗಪ್ಪ, ಮೌನೇಶ, ನಂದೀಶ, ಅರವಿಂದ, ನಾಗಪ್ಪ, ಶೇಖರಪ್ಪ, ಸೋಮಶೇಖರ, ನಾಗರಾಜ್ ಕರಡಿ, ಚೌಡಪ್ಪ, ಸಿದ್ದನಗೌಡ ಇದ್ದರು.
Leave a comment