ಹರಪನಹಳ್ಳಿ: ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡಿರುವ, ಹಡಗಲಿಯ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರನ್ನು ನಗರದಲ್ಲಿ ವಾಲ್ಮೀಕಿ ಸಮಾಜದ ವತಿಯಿಂದ ಗುರುವಾರ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ನಗರದ ವಾಲ್ಮೀಕಿ ನಗರದಲ್ಲಿರುವ ಹಾಲಸ್ವಾಮಿ ಮಠದ ಮುಂಭಾಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಹಾಲಸ್ವಾಮಿ ಮಠದ ಶ್ರೀ ವೀರಯ್ಯ ಹಾಲಸ್ವಾಮೀಜಿ ಹಾಗೂ ದೈವಸ್ಥರ ಸಮ್ಮುಖದಲ್ಲಿ ಪರಮೇಶ್ವರ ನಾಯ್ಕ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ನೂತನ ಹುದ್ದೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವಂತೆ ಮುಖಂಡರು ಶುಭಕೋರಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಕೆ.ಹಾಲೇಶ, ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಪ್ರಮುಖರಾದ ಇಜಾರಿ ಮಹಾವೀರ, ಬೇಲೂರು ಅಂಜಪ್ಪ, ಬಾಲೇನಹಳ್ಳಿ ಎಸ್.ರೇವಣಸಿದ್ದಪ್ಪ ಉಪಸ್ಥಿತರಿದ್ದರು. ಮುಖಂಡರಾದ ಪಟ್ನಾಮದ ಹಾಲಸಿದ್ದಪ್ಪ, ರಾಯದುರ್ಗದ ವಾಗೀಶ, ಗಿಡ್ಡಳ್ಳಿ ನಾಗರಾಜ, ದ್ಯಾಮಜ್ಜಿ ದಂಡ್ಯೆಪ್ಪ, ಗುಂಡಿ ಮಂಜುನಾಥ, ನಿಟ್ಟೂರು ದೊಡ್ಡಹಾಲಪ್ಪ, ಕಮ್ಮಾರ ಸಣ್ಣಹಾಲಪ್ಪ, ಟಿ.ಕೆಂಚಪ್ಪ, ವರಕೇರಿ ರಮೇಶ, ತಳವಾರ ಹಾಲೇಶ, ಕಿಂದ್ರಿ ಹನುಮಂತಪ್ಪ, ಕಾಗೇರ ತಿಮ್ಮಪ್ಪ, ಗಾಟಿನ ಪರಸಪ್ಪ, ತಳವಾರ ವೆಂಕಟೇಶ್, ಎಚ್.ಕೆ.ಅರ್ಜುನ, ಹಳೇಬ್ಯಾಡರ ಕರಿಬಸಪ್ಪ, ಮಣಿಗಾರ ಅಂಜಿನಿ, ಆಲೂರು ಶ್ರೀನಿವಾಸ, ನಿಟ್ಟೂರು ಬಸವರಾಜ, ಕವಸರ ವಿಜಯಕುಮಾರ್ ಹಾಗೂ ಸುನೀಲ್ ಶಂಕರನಹಳ್ಳಿ ಭಾಗವಹಿಸಿದ್ದರು.
ಮುಸ್ಲಿಂ ಸಮಾಜದ ಅಂಜುಮನ್ ಮಾಜಿ ಅಧ್ಯಕ್ಷ ಸಿ.ಜಾವೀದ್, ಮುಖಂಡರಾದ ಎ.ಮೂಸಸಾಹೇಬ್, ಎಂ.ಜಾಪರ್ ಸಾಹೇಬ್, ಅಬ್ದುಲ್ ಶುಕ್ರುಸಾಹೇಬ್, ಶಿರಾಜ್, ಅಹಮದ್, ಜಬೀ ಜಾಲಾಲಿ, ಮಂಡಕ್ಕಿ ಸುರೇಶ, ಪಿ.ಪರಶುರಾಮ, ಸೆಳ್ಳಮ್ಮಿ ದುರುಗಪ್ಪ, ಜಲಾಲಿ ಬುಡೇನ್ ಸಾಹೇಬ್, ಗುಡೇಕೋಟಿ ಕೇರಿ ರಾಜಪ್ಪ, ಮುತ್ತಿಗಿ ಜಂಬಣ್ಣ, ಪಿ.ಬಿ.ಗೌಡ್ರು, ಚಿಕ್ಕೇರಿ ಪಾಲಕ್ಷಪ್ಪ, ಗೋಲ್ಡನ್ ಬೀಡಿ ಜಾವೀದ್, ದಾವಣಗೆರೆ ಚೌಡಪ್ಪ, ಕೆ.ರಿಯಾಜ್, ಬಡಿಗಿ ನಂದೀಶ ಆಚಾರಿ, ಹೊಂಬಳಗಟ್ಟಿ ನಸರುಲ್ಲಾ, ಬಿ.ಅಹಮದ್, ವೇದುನಾಯ್ಕ, ದ್ಯಾಮಜ್ಜಿ ಹನುಮಂತಪ್ಪ, ನಂದೀಶನಾಯ್ಕ, ರಾಯದುರ್ಗದ ಮಂಜುನಾಥ, ಕಾನಹಳ್ಳಿ ರುದ್ರಪ್ಪ ಇತರರು ಉಪಸ್ಥಿತರಿದ್ದರು.
Leave a comment