ಸಿರಿಸುದ್ದಿ.ಕಾಂ, ಶಿವಮೊಗ್ಗ : ಇದು ಜನರ ವಿಶ್ವಾಸ ಧ್ಯೇಯವಾಕ್ಯದೊಂದಿಗೆ ಲೋಕಾರ್ಪಣೆ ಆಗಿರುವ ಸಿರಿಸುದ್ದಿ.ಕಾಂ ಜನರು ಮತ್ತು ಸರ್ಕಾರದ ನಡುವೆ ಉತ್ತಮ ಸೇತುವೆಯಾಗಿ ಕೆಲಸ ಮಾಡಲಿ ಎಂದು ಜೆಸಿಐ ವಲಯ-24ರ ಅಧ್ಯಕ್ಷ ಜೆಸಿಐ ಸೆನೆಟರ್ ಸಿಎ ಗೌರೀಶ್ ಭಾರ್ಗವ ಹೇಳಿದರು.
ನಗರದ ಒಕ್ಕಲಿಗರ ಭವನದಲ್ಲಿ ಆಯೋಜಿಸಿದ್ದ ವಲಯ-24ರ ವಿಜಯಪಥ ವಲಯ ಸಮ್ಮೇಳನದಲ್ಲಿ ಸಿರಿಸುದ್ದಿ.ಕಾಂ ವೆಬ್ ಪುಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಲಕ್ಷಾಂತರ ಚಾನೆಲ್ ಗಳು ವೆಬ್ ಪುಟದಲ್ಲಿ ಚಾಲ್ತಿಯಲ್ಲಿವೆ. ಈಗ ಸಾಮಾಜಿಕ ಜಾಲತಾಣ ಹೆಚ್ಚು ಪ್ರಚಲಿತವಾಗಿದೆ, ಅದು ಸದುಪಯೋಗ ಆಗಬೇಕು. ಜನರ ಸಮಸ್ಯೆ, ಸಂಸ್ಕೃತಿಗಳನ್ನಿಟ್ಟುಕೊಂಡು ಮಾಹಿತಿಗಳನ್ನು ಪ್ರಸಾರ ಮಾಡುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಸಿರಿಸುದ್ದಿ.ಕಾಂ. ಕೆಲಸ ಮಾಡುತ್ತದೆ, ಈ ನಾಡಿನ ಜನಮಾನಸದಲ್ಲಿ ಉಳಿಯುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು. ವಲಯ ಮಂಡಳಿಯ ಸದಸ್ಯರು, ಜೆಸಿಐ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.