Home ಅಪರಾಧ ಯರಬಾಳು : ಶ್ರೀಗಂಧದ ಮರ ಕಳವು
ಅಪರಾಧ

ಯರಬಾಳು : ಶ್ರೀಗಂಧದ ಮರ ಕಳವು

Share
shri ganda
Share

ಹರಪನಹಳ್ಳಿ: ತಾಲ್ಲೂಕಿನ ತೆಲಿಗಿ ಹೋಬಳಿಯ ಯರಬಾಳು ಗ್ರಾಮದ ರೈತರೊಬ್ಬರ ತೋಟದಲ್ಲಿ ಸುಮಾರು 20 ವರ್ಷಗಳಿಂದ ಬೆಳೆಸಲಾಗಿದ್ದ ಬೃಹತ್ ಶ್ರೀಗಂಧದ ಮರವನ್ನು ಭಾನುವಾರ ತಡರಾತ್ರಿ ಕಳ್ಳರು ಕತ್ತರಿಸಿಕೊಂಡು ಹೋಗಿರುವ ಘಟನೆ ಜರುಗಿದೆ.

ಗ್ರಾಮದ ಪ್ರಗತಿಪರ ರೈತ ಗುರುಸಿದ್ದಪ್ಪ ಕಂಪ್ಲಿ ಎಂಬುವವರಿಗೆ ಸೇರಿದ ತೋಟದಲ್ಲಿ ಈ ಕಳವು ನಡೆದಿದೆ. ರೈತ ಗುರುಸಿದ್ದಪ್ಪ ಅವರು ತಮ್ಮ ತೋಟದಲ್ಲಿ ನೈಸರ್ಗಿಕವಾಗಿ ಹಾಗೂ ಪರಿಸರ ಸ್ನೇಹಿಯಾಗಿ ವಿವಿಧ ಜಾತಿಯ ಗಿಡ-ಮರಗಳನ್ನು ಬೆಳೆಸಿದ್ದಾರೆ. ಇವುಗಳ ಮಧ್ಯೆ ಸುಮಾರು 20 ವರ್ಷಗಳ ಇತಿಹಾಸ ಹೊಂದಿದ್ದ 30 ಅಡಿ ಎತ್ತರದ ಬೃಹತ್ ಶ್ರೀಗಂಧದ ಮರವೂ ಇತ್ತು. ಭಾನುವಾರ ತಡರಾತ್ರಿ ತೋಟಕ್ಕೆ ನುಗ್ಗಿದ ಗಂಧದ ಕಳ್ಳರು, ಆಧುನಿಕ ಯಂತ್ರದ (ಕಟಿಂಗ್ ಮಿಷನ್) ಸಹಾಯದಿಂದ ಮರವನ್ನು ಬುಡಸಮೇತ ಕತ್ತರಿಸಿ, ವಾಹನದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ.

ಕಳ್ಳತನವಾಗಿರುವ ಶ್ರೀಗಂಧದ ಮರವು ಅಂದಾಜು 15 ಲಕ್ಷ ರೂಪಾಯಿ ಬೆಲೆ ಬಾಳುತ್ತಿತ್ತು ಎಂದು ಸಂತ್ರಸ್ತ ರೈತ ಗುರುಸಿದ್ದಪ್ಪ ಕಂಪ್ಲಿ ಅಳಲು ತೋಡಿಕೊಂಡಿದ್ದಾರೆ. ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಹರಪನಹಳ್ಳಿ ತಾಲ್ಲೂಕು ಯರಬಾಳು ಗ್ರಾಮದ ರೈತ ಗುರುಸಿದ್ದಪ್ಪ ಕಂಪ್ಲಿ ಅವರ ತೋಟದಲ್ಲಿ ಶ್ರೀಗಂಧದ ಮರ ಕಡಿದಿರುವ ಕಳ್ಳರು. ವಿಷಯ ತಿಳಿಯುತ್ತಿದ್ದಂತೆ ಹಲವಾಗಲು ಪೊಲೀಸ್ ಠಾಣೆಯ ಎಎಸ್‌ಐ ಮನೋಹರ ಪಾಟೀಲ್ ಅವರು ಸಿಬ್ಬಂದಿಯೊಂದಿಗೆ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡ ಅವರು, ತಕ್ಷಣವೇ ಪೊಲೀಸ್ ಠಾಣೆಗೆ ಬಂದು ಅಧಿಕೃತ ದೂರು ದಾಖಲಿಸುವಂತೆ ರೈತರಿಗೆ ಸೂಚಿಸಿದ್ದಾರೆ.

ಅಧಿಕಾರಿಗಳ ಮಾತು:

“ಶ್ರೀಗಂಧದ ಮರ ಕಳ್ಳತನವಾಗಿರುವ ಕುರಿತು ಸಂಬಂಧಪಟ್ಟ ರೈತರು ಪೊಲೀಸ್ ಠಾಣೆಗೆ ದೂರು ನೀಡಿ, ಎಫ್‌ಐಆರ್ ದಾಖಲಿಸಿದರೆ, ತಕ್ಷಣವೇ ನಮ್ಮ ಇಲಾಖೆಯ ಸಿಬ್ಬಂದಿಯನ್ನೂ ಸ್ಥಳಕ್ಕೆ ಕಳುಹಿಸಿ ಜಂಟಿ ಪರಿಶೀಲನೆ ನಡೆಸಲಾಗುವುದು. ಬಳಿಕ ಕಳ್ಳರ ಪತ್ತೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ರಾಜು ಗೋವಂದ್ಕರ ಪ್ರತಿಕ್ರಿಯಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles
ravi
Homeಅಪರಾಧ

 ಶೃಂಗಾರತೋಟದಲ್ಲಿ ರೈತ ರವಿ ಆತ್ಮಹತ್ಯೆ  

ಹರಪನಹಳ್ಳಿ: ತಾಲ್ಲೂಕಿನ ಶೃಂಗಾರತೋಟ ನಿವಾಸಿಯಾಗಿದ್ದ ರೈತನೊಬ್ಬ ಸಾಲಬಾಧೆ ಹಾಗೂ ಬೆಳೆ ನಷ್ಟದಿಂದ ಮನನೊಂದು ತಮ್ಮ ಜಮೀನಿನಲ್ಲಿ...

crime harapanahalli
ಅಪರಾಧ

ಹರಪನಹಳ್ಳಿ : ಮನೆ ಬೀಗ ಮುರಿದು ಕಳ್ಳತನ

ಹರಪನಹಳ್ಳಿ : ನಗರದ ಕಾಶಿ ಸಂಗಮೇಶ್ವರ ಬಡಾವಣೆಯ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರ ನಿವಾಸದ...

ARSIKERE POLICE
ಅಪರಾಧ

ಅರಸೀಕೆರೆ ಪೊಲೀಸರ ಭರ್ಜರಿ ಕಾರ್ಯಾಚರಣೆ: 16 ಬೈಕ್ ವಶ, ಮೂವರು ಕಳ್ಳರ ಬಂಧನ

ಹರಪನಹಳ್ಳಿ: ತಾಲ್ಲೂಕಿನ ಅರಸೀಕೆರೆ ಪೊಲೀಸರು ಸರಣಿ ಬೈಕ್ ಕಳ್ಳತನ ಮಾಡುತ್ತಿದ್ದ ಅಂತರಜಿಲ್ಲಾ ಗ್ಯಾಂಗ್ ಅನ್ನು ಬೇಟೆಯಾಡಿದ್ದಾರೆ....

HOSAPETE CRIME
Homeಅಪರಾಧ

ಹೊಸಪೇಟೆ: 1.5 ಕೆ.ಜಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕ ಅಂದರ್!

ವಿಜಯನಗರ (ಹೊಸಪೇಟೆ): ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಮಾರಾಟದ ವಿರುದ್ಧ ಪೊಲೀಸರು ಸಮರ ಸಾರಿದ್ದು, ಹೊಸಪೇಟೆ ಗ್ರಾಮೀಣ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.