ಹರಪನಹಳ್ಳಿ : "ಇದು ಕೇವಲ ಶಿಬಿರವಲ್ಲ, ಕುಟುಂಬಗಳನ್ನು ಕಟ್ಟುವ ಹಾಗೂ ಹೆಣ್ಣುಮಕ್ಕಳ ಕಣ್ಣೀರು ಒರೆಸುವ ಪವಿತ್ರ ಕಾರ್ಯ. ಅಂಧಕಾರದಲ್ಲಿದ್ದ ಬಾಳಿಗೆ ಬೆಳಕು ನೀಡುವ ಈ ಕಾರ್ಯ ಸಮಾಜಕ್ಕೆ ಮಾದರಿ ಎಂದು ನೀಲಗುಂದ ಗುಡ್ಡದ ವಿರಕ್ತಮಠದ ಚೆನ್ನಬಸವ ಶಿವಯೋಗಿ ಸ್ವಾಮೀಜಿ ತಿಳಿಸಿದರು. ನಗರದ ಹೊರವಲಯದ ದೇವರ ತಿಮ್ಮಾಲಪುರ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ '2060ನೇ ಮದ್ಯವರ್ಜನ ಶಿಬಿರ' ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.ಸಂಸಾರದಲ್ಲಿ ಸರಸ, ವಿರಸಗಳು ಬಂದು ಹೋಗುತ್ತವೆ. ಇವುಗಳ ನಡುವೆ ದಂಪತಿಗಳು ದುಶ್ಚಟಗಳಿಂದ ದೂರವಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಬಗ್ಗೆ...