Home ಸುದ್ದಿಗಳು ತೆಲಿಗಿಯಲ್ಲಿ ಅರಳಿದ ಕನ್ನಡ ನುಡಿ ಕಲರವ
ಸುದ್ದಿಗಳು

ತೆಲಿಗಿಯಲ್ಲಿ ಅರಳಿದ ಕನ್ನಡ ನುಡಿ ಕಲರವ

Share
Share

ಹರಪನಹಳ್ಳಿ : ಕನ್ನಡ ಎಂಬ ಮೂರಕ್ಷರದಲ್ಲಿ  ವೈಭವದ ಸೊಗಡು ಅಡಗಿದೆ ಎಂದು ಹೊಸಪೇಟೆಯ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಹೇಳಿದರು.

ತಾಲೂಕಿನ ತೆಲಿಗಿ ಗ್ರಾಮದ ಆಲಗಿಲವಾಡ ಪಾಟೀಲ್ ವಿರೂಪಾಕ್ಷಪ್ಪ ಸರ್ಕಾರಿ ಪ್ರೌಡಶಾಲೆ ಆವರಣದಲ್ಲಿ ಕನ್ನಡ ಮನಸುಗಳ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ,ಕರ್ನಾಟಕ  ರಾಜ್ಯ ರೈತ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತೆಲಿಗಿ ಹೋಬಳಿ ಘಟಕ  ಇವರ ಸಹಯೋಗದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ  ಕನ್ನಡ ನುಡಿ ಕಲರವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಪ್ರತಿ 15 ಕಿ.ಮೀ. ಅಂತರದಲ್ಲಿ ವಿಭಿನ್ನವಾಗಿದೆ. ಆಹಾರ ಕ್ರಮ, ಸಂಸ್ಕೃತಿಯಲ್ಲೂ ವಿಶಿಷ್ಟತೆ ಪಡೆದಿದೆ. ಕನ್ನಡ ಒಳ ಹೊರಗಿನ ವಸ್ತು ವಿಶೇಷ, ಸೌಂಧರ್ಯ, ಸಂಪತ್ತು, ಭಾಷಾ ಸೊಗಡು ಪ್ರಪಂಚದ ಗಮನ ಸೆಳೆದಿದೆ ಎಂದರು.

ಸಾನ್ನಿಧ್ಯವಹಿಸಿದ್ದ ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ  ಮಾತನಾಡಿ, ಕನ್ನಡ ನಾಡು, ನುಡಿ ಜಲ ಉಳಿಸುವ ಕೆಲಸ ಮಾಡಬೇಕು. ಕನ್ನಡ ಅಳಿವು-ಉಳಿವು ಯುವಕರ ಕೈಯಲ್ಲಿದೆ. ಸದಾ ಕನ್ನಡ ಬಾವುಟ ರಾರಾಜಿಸಲು ಪ್ರತಿಯೊಬ್ಬರು ಕನ್ನಡ ಪ್ರೀತಿ ಬೆಳೆಸಿಕೊಳ್ಳಬೇಕು ಎಂದರು.

ದಾವಣಗೆರೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ವೀರಭದ್ರಪ್ಪ ಮಾತನಾಡಿದರು. ತೆಲಿಗಿ  ಜಡೇಸ್ವಾಮಿ ಮಠದ ಕಿಡಿಗಣ್ಣಯ್ಯ ಸ್ವಾಮಿಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಬಾರಿಕರ ಅಧ್ಯಕ್ಷತೆವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ದಿ ಅಧಿಕಾರಿ ಡಿ.ಸುಬ್ರಹ್ಮಣ್ಯ, ತಳವಾರ ಅಂಜಿನಪ್ಪ, ಗುಂಡಿ ಮಂಜುನಾಥ, ತಳವಾರ ನಾಗರಾಜ್, ಅಂಬರೀಶ್, ಎಸ್.ಶಿವಣ್ಣ, ವಿಠಲ್ ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹಾಡು, ನೃತ್ಯ ಪ್ರದರ್ಶಿಸಿದರು.

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರಸ್ತೆ ನಿರ್ಮಾಣಕ್ಕೆ ಜಾಗ ತ್ಯಾಗ ಮಾಡಿದ ಗ್ರಾಮಸ್ಥರ ಋಣ ತೀರಿಸಲಾಗದು: ಶಾಸಕ ಹೆಚ್.ಆರ್. ಗವಿಯಪ್ಪ

ವಿಜಯನಗರ (ಹೊಸಪೇಟೆ) : ಊರಿನ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ತಮ್ಮ ಜಾಗ...

Homeಸುದ್ದಿಗಳು

ಕೊಪ್ಪಳ : ಪ್ರತಿಭಾ ಪುರಸ್ಕಾರಕ್ಕೆ ಬನ್ನಿ

ಹರಪನಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲೂಕು ಘಟಕದ ವತಿಯಿಂದ 2026-27ನೇ ಸಾಲಿನ...

Homeಸುದ್ದಿಗಳು

ಜಿಲ್ಲೆಯ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಶೇ.100 ಇ-ಫಾರ್ಮ್ ವಿತರಣೆ ಪೂರ್ಣ

ವಿಜಯನಗರ (ಹೊಸಪೇಟೆ)  : ಜಿಲ್ಲೆಯ ಐದು ತಾಲೂಕಿನಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ...

Homeಸುದ್ದಿಗಳು

ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ಆಯ್ಕೆಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : 2026ನೇ ಸಾಲಿಗೆ ಜಿಲ್ಲೆಯಲ್ಲಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟು ಜಿಲ್ಲಾ ಮಟ್ಟದ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.